'ಸಿದ್ದರಾಮಯ್ಯ ಸೂಕ್ಷ್ಮತೆ ಅರ್ಥ ಮಾಡಿಕೊಂಡು ಮಾತನಾಡಬೇಕು'

By Suvarna News  |  First Published Dec 2, 2020, 12:59 PM IST

ಸಿದ್ದರಾಮಯ್ಯನವರಿಗೆ ಯಾವಾಗ ಕನಸು ಬೀಳುತ್ತೋ ಗೊತ್ತಿಲ್ಲಾ? ಎಲ್ಲರಿಗೂ ರಾತ್ರಿ ಕನಸು ಬಿದ್ರೆ ಸಿದ್ದರಾಮಯ್ಯನವರಿಗೆ ಹಗಲು ಕನಸು ಬೀಳುತ್ತದೆ ಅನ್ನಿಸುತ್ತೆ. ಸಿದ್ದರಾಮಯ್ಯನವರಿಗೆ ಈಶ್ವರಪ್ಪನವರು ಸಮಯೋಚಿತವಾಗಿ ಉತ್ತರ ಕೊಟ್ಟಿದ್ದಾರೆ ಎಂದ ಸಚಿವ ವಿ ಸೋಮಣ್ಣ


ಕಲಬುರಗಿ(ಡಿ. 02):  ಸಿದ್ದರಾಮಯ್ಯನವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದವರು. ಈ ರೀತಿ ಕ್ಷುಲ್ಲಕ ಭಾಷೆ ಬಳಕೆ ಅವರಿಗೆ ಎಷ್ಟರ ಮಟ್ಟಿಗೆ ಶೋಭೆ ತರುತ್ತೆ?, ಅವರೇ ಅದರ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಅವರು ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ. 

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹಿಂದೂ- ಮುಸ್ಲಿಂ ಕ್ರಾಸ್ ಬೀಡ್ ಹೇಳಿಕೆ ವಿಚಾರದ ಬಗ್ಗೆ ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ವಿಚಾರದಲ್ಲಿ ಆರ್‌ಎಸ್‌ಎಸ್‌ ಕೈವಾಡ ಅನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರಿಗೆ ಯಾವಾಗ ಕನಸು ಬೀಳುತ್ತೋ ಗೊತ್ತಿಲ್ಲಾ? ಎಲ್ಲರಿಗೂ ರಾತ್ರಿ ಕನಸು ಬಿದ್ರೆ ಸಿದ್ದರಾಮಯ್ಯನವರಿಗೆ ಹಗಲು ಕನಸು ಬೀಳುತ್ತದೆ ಅನ್ನಿಸುತ್ತೆ. ಸಿದ್ದರಾಮಯ್ಯನವರಿಗೆ ಈಶ್ವರಪ್ಪನವರು ಸಮಯೋಚಿತವಾಗಿ ಉತ್ತರ ಕೊಟ್ಟಿದ್ದಾರೆ. ತಮ್ಮ ಕೈಯಿಂದ ಆಗಲಿಲ್ಲ ಅನ್ನೋದನ್ನ ಮರೆಮಾಚಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. 

Tap to resize

Latest Videos

ಹಿಂದೂ-ಮುಸ್ಲಿಂ ‘ಕ್ರಾಸ್‌ ಬ್ರೀಡ್‌': ಲವ್‌ಜಿಹಾದ್‌ ತಡೆ ಕಾಯ್ದೆ ಜಾರಿಗೆ ಸಿದ್ದು ವಿರೋಧ!

ಈಶ್ವರಪ್ಪ, ಸಿದ್ದರಾಮಯ್ಯ ಆ ಸಮಾಜದ ಕೊಂಡಿ ಆಗಬೇಕೆ ವಿನಃ ಕೊಂಡಿ ಕೀಳುವ ಕೆಲಸ ಯಾರೂ ಮಾಡಬಾರದು. ಸಿದ್ದರಾಮಯ್ಯ ದೊಡ್ಡ ನಾಯಕರು, ದೊಡ್ಡ ನಾಯಕರಾಗಿಯೇ ಇರಲಿ ಅನ್ನೋದು ನನ್ನ ಆಶಯವಾಗಿದೆ. ಇಲ್ಲ ನಾನಿರಲ್ಲ ಅನ್ನೋದಾದ್ರೆ ಅದು ಅವರಿಗೆ ಬಿಟ್ಟಿದ್ದು ಸಚಿವ ವಿ ಸೋಮಣ್ಣ ಸಿದ್ದುಗೆ ಟಾಂಗ್‌ ಕೊಟ್ಟಿದ್ದಾರೆ. 
 

click me!