ಇಡಿ ದಾಳಿಗೂ ಸಿಎಂಗೂ ಸಂಬಂಧವಿಲ್ಲ. ಸಿಎಂ ಅವರ ಮೇಲೆ ಇಡಿ ದಾಳಿ ಮಾಡಿಲ್ಲ. ಮುಡಾ ಮೇಲೆ ಇಡಿ ದಾಳಿಯಾಗಿದೆ. ಮುಡಾ ಮೇಲಿನ ತನಿಖೆ ಆಗಬೇಕು ಎನ್ನುವದು ನಮ್ಮದು ವಾದವಿದೆ. ಇಡಿ ದಾಳಿಗೂ ಸಿಎಂ ರಾಜೀನಾಮೆಗೂ ಸಂಬಂಧವಿಲ್ಲ ಎಂದ ಸಚಿವ ಸತೀಶ ಜಾರಕಿಹೊಳಿ
ಚಿಕ್ಕೋಡಿ(ಅ.19): ಇಡಿ ಅವರು ವಿಚಾರಣೆ ಮಾಡುತ್ತಿದ್ದಾರೆ. ಅವರಿಗೆ ಏನೂ ಬೇಕೋ ಅದನ್ನ ತನಿಖೆ ಮಾಡುತ್ತಾರೆ. ಎಲ್ಲ ದಾಖಲೆಗಳು ಸರಕಾರದಲ್ಲಿ ಇರುತ್ತವೆ. ಯಾವ ದಾಖಲೆಗಳು ಎಲ್ಲಿ ಹೋಗಲು ಅವಕಾಶವಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.
ಸಚಿವ ಭೈರತಿ ಸುರೇಶ ಅವರು ಕಡತಗಳನ್ನ ನಾಶ ಮಾಡಿದ್ದಾರೆ ಎನ್ನುವ ಎಚ್.ಡಿ. ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶನಿವಾರ) ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ ಜಾರಕಿಹೊಳಿ ಅವರು, ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ ಅದೂ ಸಾಬೀತಾಗಬೇಕು. ಅದು ಇಡಿ ತನಿಖೆಯಿಂದ ಗೊತ್ತಾಗುತ್ತೆ. ಇಡಿ ತನಿಖೆವರೆಗೂ ಕಾಯ್ದು ನೋಡೋಣ ಯಾವುದೇ ಅರ್ಜಂಟ್ ಇಲ್ಲ ಎಂದು ಹೇಳಿದ್ದಾರೆ.
undefined
ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಸಂಕಷ್ಟದ ಮೇಲೆ ಸಂಕಷ್ಟ, ಎರಡೆರಡು ಕಡೆ ತನಿಖೆ!
ಇಡಿ ದಾಳಿಯಿಂದ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಡ ವಿಚಾರದ ಬಗ್ಗೆ ಮಾತನಾಡಿದ ಜಾರಕಿಹೊಳಿ, ಇಡಿ ದಾಳಿಗೂ ಸಿಎಂಗೂ ಸಂಬಂಧವಿಲ್ಲ. ಸಿಎಂ ಅವರ ಮೇಲೆ ಇಡಿ ದಾಳಿ ಮಾಡಿಲ್ಲ. ಮುಡಾ ಮೇಲೆ ಇಡಿ ದಾಳಿಯಾಗಿದೆ. ಮುಡಾ ಮೇಲಿನ ತನಿಖೆ ಆಗಬೇಕು ಎನ್ನುವದು ನಮ್ಮದು ವಾದವಿದೆ. ಇಡಿ ದಾಳಿಗೂ ಸಿಎಂ ರಾಜೀನಾಮೆಗೂ ಸಂಬಂಧವಿಲ್ಲ ಎಂದಿದ್ದಾರೆ.
ಮುಡಾ ವಿಚಾರದಲ್ಲಿ ಯಾವುದೇ ಹಣದ ವ್ಯವಹಾರವಿಲ್ಲದರೂ ಇಡಿ ದಾಳಿ ವಿಚಾರದ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ಅದು ಇಡಿ ವ್ಯಾಪ್ತಿಗೆ ಬರುವದಿಲ್ಲ ಎನ್ನುವ ವಾದವಿದೆ. ಈ ಬಗ್ಗೆ ಸುಪ್ರೀಂ ಕೋರ್ಟ ಆದೇಶ ಮಾಡಬೇಕು ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಬುಡಕ್ಕೆ ಮತ್ತೊಂದು ಬಾಂಬ್ ಎಸೆದ ಕುಮಾರಸ್ವಾಮಿ; HDK ಹೇಳಿದ ಸಾಕಮ್ಮನ ಆ ಸ್ಟೋರಿಯೇನು?
ಸಿಬಿಐಗೆ ಮುಡಾ ವಿಚಾರಣೆ ಹಸ್ತಾಂತರವಾದರೇ ಸಿಎಂ ರಾಜೀನಾಮೆ ನೀಡುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ ಅವರು, ಸಿಬಿಐ ತನಿಖೆಯಾದರೂ ಸಿಎಂ ರಾಜೀನಾಮೆ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದಿದ್ದಾರೆ.
ಸರಕಾರಿ ಕಚೇರಿ ಬಿಟ್ಟು ಮಠವೊಂದರಲ್ಲಿ ಕೆಡಿಪಿ ಸಭೆ ಕರೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಸ್ಥಳದ ಅಭಾವದಿಂದ ಮಠದಲ್ಲಿ ಸಭೆ ಕರೆಯಲಾಗಿದೆ ಅದರಲ್ಲಿ ವಿಶೇಷವಿಲ್ಲ ಎಂದಷ್ಟೇ ಹೇಳಿದ್ದಾರೆ.