ಬೋವಿ ನಿಗಮದ ಹಗರಣ: ಬಿಜೆಪಿ ಎಂಎಲ್‌ಸಿ ಸುನೀಲ್ ವಲ್ಯಾಪೂರೆ ಮನೆ ಮೇಲೆ ಸಿಐಡಿ ದಾಳಿ

By Girish Goudar  |  First Published Oct 19, 2024, 1:16 PM IST

ಕಲಬುರಗಿಯ ಸಂತೋಷ ಕಾಲೋನಿಯಲ್ಲಿರುವ ಸುನೀಲ್ ವಲ್ಯಾಪೂರೆ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 2022ರಲ್ಲಿ ಬೋವಿ ನಿಗಮದಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಹಾಲಿ ಎಂಎಲ್‌ಸಿ ಸುನೀಲ್ ವಲ್ಯಾಪೂರೆ ಮನೆ ಮೇಲೆ ಸಿಐಡಿ ದಾಳಿ ನಡೆಸಿದೆ. ಸುನೀಲ್ ವಲ್ಯಾಪೂರೆ ಅವರ ಪುತ್ರ ವಿನಯ ವಲ್ಲಾಪೂರೆ ಮೇಲೆ ಭೋವಿ ನಿಗಮದ 12 ಕೋಟಿ ರೂ. ಅವ್ಯವಹಾರದ ಆರೋಪವಿದೆ. 


ಕಲಬುರಗಿ(ಅ.19):  ಬಿಜೆಪಿ ಎಂಎಲ್‌ಸಿ ಸುನೀಲ್ ವಲ್ಯಾಪೂರೆ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಿಜೆಪಿ ಮುಖಂಡರ ಹಳೆಯ ಕೇಸ್‌ಗೆ ಪುನರ್ ಜೀವನ ಕೊಟ್ಟು ರಾಜ್ಯ ಸರ್ಕಾರ ತನಿಖೆಯನ್ನ ನಡೆಸುತ್ತಿದೆ ಎಂದು ಆರೋಪಿಸಲಾಗಿದೆ.  ಕಲಬುರಗಿಯ ಸಂತೋಷ ಕಾಲೋನಿಯಲ್ಲಿರುವ ಸುನೀಲ್ ವಲ್ಯಾಪೂರೆ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 2022ರಲ್ಲಿ ಬೋವಿ ನಿಗಮದಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಹಾಲಿ ಎಂಎಲ್‌ಸಿ ಸುನೀಲ್ ವಲ್ಯಾಪೂರೆ ಮನೆ ಮೇಲೆ ಸಿಐಡಿ ದಾಳಿ ನಡೆಸಿದೆ. ಸುನೀಲ್ ವಲ್ಯಾಪೂರೆ ಅವರ ಪುತ್ರ ವಿನಯ ವಲ್ಲಾಪೂರೆ ಮೇಲೆ ಭೋವಿ ನಿಗಮದ 12 ಕೋಟಿ ರೂ. ಅವ್ಯವಹಾರದ ಆರೋಪವಿದೆ. 

ಭೋವಿ ನಿಗಮದ ಹಗರಣದ ಬಗ್ಗೆ ರಾಜ್ಯ ಸರ್ಕಾರ ತನಿಖೆಗೆ ಸಿಐಡಿಗೆ ವಹಿಸಿತ್ತು. ಈ ಹಿನ್ನಲೆಯಲ್ಲಿ ಸಿಐಡಿ ಅಧಿಕಾರಿಗಳ ತಂಡ ವಲ್ಯಾಪೂರೆ ಮನೆ ಮೇಲೆ ದಾಳಿ ಮಾಡಿ ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದೆ. ನ್ಯಾಯಾಲಯದಿಂದ ಸರ್ಚ್‌ ವಾರೆಂಟ್ ತೋರಿಸಿ ಮನೆ ಒಳಗಡೆ ಎಂಟ್ರಿಯಾಗಿದೆ ಸಿಐಡಿ ಟೀಂ. 

Latest Videos

undefined

ಬೈ ಎಲೆಕ್ಷನ್‌ನಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಸುನೀಲ್ ವಲ್ಯಾಪುರೆ ಬೆಂಬಲಿಗರ ಆಗ್ರಹ

ಸಿಐಡಿ ಡಿವೈಎಸ್ಪಿ ಅಸ್ಲಂ ಭಾಷಾ ನೇತೃತ್ವದಲ್ಲಿ ಎಂಟು ಜನ ಅಧಿಕಾರಿ ಹಾಗೂ ಸಿಬ್ಬಂದಿಗಳ ದಾಳಿ ಮಾಡಿದ್ದಾರೆ. ಮನೆಯೊಳಗೆ ಎಂಟ್ರಿ ಕೊಟ್ಟ ಸಿಐಡಿ ತಂಡ ಹಗರಣದ ಬಗ್ಗೆ ವಿವರಣೆ ಮತ್ತು ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದೆ. 
ಸಿಐಡಿ ದಾಳಿ ವೇಳೆ MLC ಸುನೀಲ್ ವಲ್ಯಾಪೂರೆ ಮನೆಯಲ್ಲೇ ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ. ಸುನೀಲ್ ವಲ್ಯಾಪೂರೆ & ಸನ್ ಭೋವಿ ನಿಗಮದ ಸಹಾಯ ಧನ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ಎತ್ತಿ ಹಾಕಿರುವ ಆರೋಪ ಎದುರಿಸುತ್ತಿದ್ದಾರೆ. 

ಸುಮಾರು ನೂರಾರು ಕೋಟಿ ರೂ. ಅವ್ಯವಹಾರದಲ್ಲಿ ಭೋವಿ ಸಮಾಜದವರೇ ಆಗಿರುವ ಸುನೀಲ್ ವಲ್ಲ್ಯಾಪೂರೆ ಅವರ ಪಾತ್ರದ ಆರೋಪ ಬಂದ ಹಿನ್ನಲೆಯಲ್ಲಿ ಸಿಐಡಿ ದಾಳಿ ನಡೆಸಿದೆ.  ರಾಜ್ಯದಲ್ಲಿ ವಾಲ್ಮೀಕಿ ನಿಗಮದ ಹಗರಣ ತೀವ್ರ ಚರ್ಚೆಯಾಗುತ್ತಿರುವ ಹೊತ್ತಲ್ಲೇ ಹಿಂದಿನ ಸರ್ಕಾರದದ ಭೋವಿ ನಿಗಮದ ಹಗರಣ ಹೊರಬಿದ್ದಿದೆ. ಸುನೀಲ್ ವಲ್ಯಾಪೂರೆ ತಮ್ಮ ರಾಜಕೀಯ ಪ್ರಭಾವ ಬಳಸಿ ಭೋವಿ ನಿಗಮದಲ್ಲಿ ಹಣ ದುರುಪಯೋಗಕ್ಕೆ ಕಾರಣವಾಗಿದ್ದಾರೆ ಎನ್ನುವ ಆರೋಪ ಎದುರಿಸುತ್ತಿದ್ದಾರೆ.

ಚಿಂಚೋಳಿಯಲ್ಲಿ ಸೋಲಾರ ಪ್ಲ್ಯಾಂಟ್ ಸ್ಥಾಪನೆ ಹೆಸರಲ್ಲಿ ಕೋಟಿಗಟ್ಟಲೇ ಹಣ ಲೂಟಿ ಹೊಡೆದಿದ್ದಾರೆ. ಆದ್ರೆ ನಯಾಪೈಸೆಯ ಕೆಲಸವೂ ಮಾಡದೇ ಮಗನ ಮೂಲಕ ಸುನೀಲ್ ವಲ್ಯಾಪೂರೆ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದಷ್ಟೇ ಅಲ್ಲ, ಭೋವಿ ನಿಗಮದಿಂದ ಸಮುದಾಯದ ಫಲಾನುಭವಿಗಳಿಗೆ ಸಿಗಬೇಕಾದ ಸಹಾಯ ಧನದಲ್ಲೂ ಸಾಕಷ್ಟು ಅವ್ಯವಹಾರ ನಡೆದಿದೆ. ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ 11 ಕೋಟಿ ರೂ.ಗೂ ಅಧಿಕ ಹಣ ಅವ್ಯವಹಾರ ಮಾಡಲಾಗಿದೆ. ಸುನೀಲ್ ವಲ್ಯಾಪೂರೆ ಮತ್ತು ಮಗ ವಿನಯ ವಲ್ಯಾಪೂರೆ ಒಟ್ಟು 22 ಕೋಟಿಗೂ ಹೆಚ್ಚು ಹಣ ಅವ್ಯವಹಾರದ ಆರೋಪ ಎದುರಿಸುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗಿನ ಅವಧಿಯಲ್ಲಿನ ಅವ್ಯವಹಾರದ ತನಿಖೆಗೆ ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ.  

click me!