ಸರ್ಕಾರ ಬರೀ ಮುಸ್ಲಿಮರ ಓಲೈಕೆಗೆ ನಿಂತಿದೆ. ವಿಜಯಪುರದಲ್ಲೇ 16 ಸಾವಿರ ಎಕರೆ, ಕರ್ನಾಟಕ 6.5 ಲಕ್ಷ ಎಕರೆ ನಮ್ಮದು ಎಂದು ಕ್ಲೇಮ್ ಮಾಡುತ್ತಿದ್ದಾರೆ. ಇನ್ನೂ ದೇಶದಲ್ಲಿ ಎಷ್ಟಿರಬಹುದು?. ಇವರು ಹೇಳಿದಷ್ಟು ಭೂಮಿ ಕೊಟ್ಟರೆ ದೇಶದಲ್ಲಿ ಎರಡು ಪಾಕಿಸ್ತಾನ ಆಗ್ತವೆ. ವಿಧಾನಸೌಧ, ಕ್ಲೇಮ್ ಮಾಡಿದ್ರು, ಈಗ ಹೊಸ ಪಾರ್ಲಿಮೆಂಟ್ ಕೇಳ್ತಾರೆ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಹುಬ್ಬಳ್ಳಿ(ಅ.19): ಸಿದ್ದರಾಮಯ್ಯ ಸೈಟ್ ಆಗಲೇ ವಾಪಾಸು ಕೊಡಬೇಕಿತ್ತು. ಅವರ ಗಮನಕ್ಕೆ ಬಂದ ಕೂಡಲೇ ಸೈಟ್ ವಾಪಸು ಕೊಡಬೇಕಿತ್ತು. ಈಗ ಕಾಲ ಮಿಂಚಿ ಹೋಗಿದೆ. ಈಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸಚಿವ ಜಮೀರ್ ಅಹಮ್ಮದ್ ಖಾನ್ ವಕ್ಫ್ ಆಸ್ತಿ ಕಬಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸರ್ಕಾರ ಬರೀ ಮುಸ್ಲಿಮರ ಓಲೈಕೆಗೆ ನಿಂತಿದೆ. ವಿಜಯಪುರದಲ್ಲೇ 16 ಸಾವಿರ ಎಕರೆ, ಕರ್ನಾಟಕ 6.5 ಲಕ್ಷ ಎಕರೆ ನಮ್ಮದು ಎಂದು ಕ್ಲೇಮ್ ಮಾಡುತ್ತಿದ್ದಾರೆ. ಇನ್ನೂ ದೇಶದಲ್ಲಿ ಎಷ್ಟಿರಬಹುದು?. ಇವರು ಹೇಳಿದಷ್ಟು ಭೂಮಿ ಕೊಟ್ಟರೆ ದೇಶದಲ್ಲಿ ಎರಡು ಪಾಕಿಸ್ತಾನ ಆಗ್ತವೆ. ವಿಧಾನಸೌಧ, ಕ್ಲೇಮ್ ಮಾಡಿದ್ರು, ಈಗ ಹೊಸ ಪಾರ್ಲಿಮೆಂಟ್ ಕೇಳ್ತಾರೆ. ಮೊಘಲರು ಯಾರು ಕಳ್ಳ ಸೂ..ಮಕ್ಕಳು. ಅಫ್ಘಾನಿಸ್ತಾನದಿಂದ ಬಂದವರು, ಅಯೋಗ್ಯರು. ನಮ್ಮ ದೇಶದಲ್ಲಿ ರಾಮ, ಪಾಂಡವರು, ನಮ್ಮ ಇತಿಹಾಸ ಎಂದು ಕಿಡಿ ಕಾರಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್‌ಐಆರ್
ಆಗ ಇಸ್ಲಾಂ ಧರ್ಮ ಹುಟ್ಟಿರಲಿಲ್ಲ. ಅವರು ನಮ್ಮ ಮುಂದೆ ಕಣ್ಣಬಿಟ್ಟೋರು. ನಮ್ಮಿಂದಲೇ ಟಿಪ್ಪು, ಆದಿಲ್ ಶಾಹಿ ಅಂಜಿ ಜಮೀರ್ ಅಹಮ್ಮದ್ ಖಾನ್ ನಂತವರು ಮತಾಂತರ ಗೊಂಡವರು. ಎಲ್ಲರನ್ನು ಹೆದರಿಸಿ ಮತಾಂತರ ಮಾಡಿದವರು. ಈ ಮಕ್ಕಳಿಗೆ ಈ ದೇಶದ ಮೇಲೆ ಯಾವುದೇ ಅಧಿಕಾರ ಇಲ್ಲ. ಗಾಂಧಿ ಮತ್ತು ನೆಹರು ಈ ದೇಶ ಹಾಳಾಗಲು ಕಾರಣ ಎಂದು ದೂರಿದ್ದಾರೆ.