
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ನ.23): ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಜನರ ನಿದ್ದೆಯನ್ನು ಬೀಟಮ್ಮ ಟೀಂ ಕಾಡಾನೆಗಳು ಹಾಳು ಮಾಡಿದೆ. ಕಳೆದ 20 ದಿನಗಳಿಂದ ಮಲೆನಾಡಿನ ಕೆಲ ಗ್ರಾಮಗಳಲ್ಲಿ ಕಾಡಾನೆಗಳು ಸಂಚರಿಸಿ ಜನರಲ್ಲಿ ಭಯವನ್ನು ಮೂಡಿಸಿದೆ. ಬೀಟಮ್ಮ ಟೀಂ ಭಯಕ್ಕೆ ಕಾರ್ಮಿಕರಂತೂ ಕೆಲಸಕ್ಕೆ ಹೋಗ್ತಿಲ್ಲ. ಬೀಟಮ್ಮ ಆ್ಯಂಡ್ ಗ್ಯಾಂಗ್ ಅವಾಂತರಕ್ಕೆ 20 ದಿನದಲ್ಲಿ ಕೃಷಿ ಭೂಮಿಯಲ್ಲಿ ಬರೊಬ್ಬರಿ 20 ಲಕ್ಷಕ್ಕೂ ಅಧಿಕ ನಷ್ಟವಾಗಿದೆ.
ಕಾಡಾನೆಗಳ ಅಬ್ಬರಕ್ಕೆ ಬೆಳೆಗಳು ಮಣ್ಣು ಪಾಲು:
ಬೀಟಮ್ಮ ಟೀಂ ಸದ್ಯ ಕಾಫಿನಾಡು ಚಿಕ್ಕಮಗಳೂರಿನ ಹೊರವಲಯದಲ್ಲಿ ಲಗ್ಗೆ ಹಾಕಿದೆ. ನಗರದಿಂದ ಏಳು ಕಿಲೋ ಮೀಟರ್ ದೂರದಲ್ಲಿರೋ ಗ್ರಾಮಗಳ ಜನರ ನಿದ್ದೆಗೆಡಿಸಿದೆ. ವಸ್ತಾರೆ ಗ್ರಾಮ ಪಂಚಾಯ್ತಿಯ ಕೆಲ ಹಳ್ಳಿಯಾದ ಅಲದಗುಡ್ಡೆ, ಕದ್ರಿಮಿದ್ರಿ. ಈ ಗ್ರಾಮದ ಜನರಂತೂ ರಸ್ತೆಗಿಳಿದು ಹೋಗೋಕು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆ ಹಾವಳಿಯಿಂದ ರೈತರು ಕೃಷಿ ಭೂಮಿಗೂ ಮುಖ ಮಾಡ್ತಿಲ್ಲ. ಕಾಫಿ ತೋಟಗಳಿಗಂತೂ ಕಾರ್ಮಿಕರು ಹೋಗ್ತಿಲ್ಲ. ಕೂಲಿ ಇಲ್ಲದೇ ಕಾರ್ಮಿಕರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾದ್ರೆ ಕಾಫಿ ಕಟಾವಿಗೆ ಬಂದ ಸಮಯದಲ್ಲಿ ಕಾಡಾನೆ ದಾಂದಲೆಯಿಂದ ವರ್ಷದ ಬೆಳೆ ಮಣ್ಣು ಪಾಲಾಗುತ್ತಿದೆ. ಮತ್ತೊಂದಡೆ ಕಾಡಾನೆ ಸಂಚರಿಸುವ ಜಾಗದಲ್ಲಿ ಶಾಲೆಗಳಿಗೆ ರಜೆ, ನಿಷೇದಾಜ್ಞೆಯನ್ನು ಜಿಲ್ಲಾಡಳಿತ ಹೊರಡಿಸುತ್ತಿದೆ.
ವಿಕ್ರಂ ಗೌಡನ ಎನ್‌ಕೌಂಟರ್ ಫೇಕ್, ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ ಕಿಡಿ!
ಇಪ್ಪತ್ತು ದಿನದಿಂದ 22 ಕ್ಕೂ ಹೆಚ್ಚು ಕಾಡಾನೆಗಳು ಮುಂಜಾನೆಯಾಯ್ತು ಅಂದ್ರೆ ಗುಡ್ಡ ಸೇರುತ್ತೇ. ಅಲ್ಲಿ ನೆಮ್ಮಿದಯಾಗಿ ಮಲಗುತ್ತೇ. ಸಂಜೆಯಾಗ್ತಿದ್ದಂತೆ ರೌಂಡ್ಸ್ ಶುರು ಮಾಡಿಕೊಳ್ಳುತ್ತೆ. ಬೀಟಮ್ಮ ಆ್ಯಂಡ್ ಟೀಂನ ಇಪ್ಪತ್ತು ಆನೆಗಳು ಒಂದು ಸಲ ನೈಟ್ ರೌಂಡ್ಸ್ ಹೋಗಿ ಕೃಷಿ ಭೂಮಿಗೆ ಬಂದ್ರೆ ಆಗೋದು ಲಕ್ಷ ಲಕ್ಷ ನಷ್ಟ. ಇಲ್ಲಿಯವರೆಗೂ ಇಪ್ಪತ್ತು ಲಕ್ಷ ಮೌಲ್ಯದ ಕೃಷಿ ಹಾನಿ ಮಾಡಿದೆ ಎಂದು ಅರಣ್ಯ ಇಲಾಖೆ ಅಂದಾಜು ಮಾಡಿದೆ.
ಬೀಟಮ್ಮ ಟೀಂ ಹಾವಳಿ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್
ಇನ್ನು ಇಪ್ಪತ್ತು ದಿನದಿಂದ ಇರೋದು ಅಲ್ಲಿಯೇ ಸುತ್ತಮುತ್ತಲಿನ ಕಾಫಿ ತೋಟಗಳಿಗೆ ಹೋಗುತ್ತೇ. ಆಹಾರ ಹುಡ್ಕೊಂಡು ಬಂದು ಅಲದಗುಡ್ಡೆ ಸಮೀಪವಿರೋ ಗುಡ್ಡ ಸೇರುತ್ತೇ. ಸಣ್ಣ ಮರಿಯೊಂದು ಇರೋದು ಡ್ರೋನ್ ನಲ್ಲಿ ಸೆರೆಯಾಗಿದೆ. ಈಗ ನಿರಂತರವಾಗಿ ಡ್ರೋನ್ ನಲ್ಲಿ ಚಲನವಲನ ಹಿಡಿಯಲಾಗ್ತಿದೆ. ಈ ಡ್ರೋನ್ ರಾತ್ರಿಯೂ ಓಡಾಡುತ್ತೇ.ಅದಕ್ಕೆ ಅಂತಾನೇ ಥರ್ಮಲ್ ಡ್ರೋನ್ ಬಳಸಲಾಗ್ತಿದೆ. ಎಂತಹ ಕತ್ತಲಿದ್ರು ಆ ಡ್ರೋನ್ ನಲ್ಲಿ ಪ್ರಾಣಿಗಳ ಎಲ್ಲಿದೆ ಎಂಬ ಮಾಹಿತಿ ಲಭ್ಯವಾಗ್ತಿದೆ.
ಕರ್ನಾಟಕದ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್; ಈತನಿಗಿತ್ತು ರೋಚಕ ಇತಿಹಾಸ
ಕೃಷಿ ಭೂಮಿಯಲ್ಲಿದ್ರೆ ಅದಕ್ಕೆ ಸೈರನ್ ಬಳಸಿ ಆನೆಗಳಿಂದ ಕೃಷಿ ಉಳಿಸೋಕೆ ಸರ್ಕಸ್ ಮಾಡ್ತಿದೆ ಅರಣ್ಯ ಇಲಾಖೆ. ಅಲ್ಲದೆ ಶಾಶ್ವತವಾಗಿ ಬೀಟಮ್ಮ ಟೀಂ ಹಾವಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ರೂಪಿಸಿದೆ. ಭದ್ರಾ ಅಭಯಾರಣ್ಯಕ್ಕೆ ಕಳುಹಿಸೋ ಪ್ಲಾನ್ ಮಾಡಿದೆ. ಭದ್ರಾ ಸಂರಕ್ಷಿತಾ ಪ್ರದೇಶಕ್ಕೆ ಹೋಗುವಾಗ ಎಷ್ಟು ಕೃಷಿ ಹಾನಿಯಾಗಬಹುದು ಎಂಬುದರ ಲೆಕ್ಕವನ್ನ ಕೂಡ ಇಲಾಖೆ ಹಾಕಿದೆ. ಆ ಅಪರೇಷನ್ ಸಕ್ಸಸ್ ಅದ್ರೆ ಬೀಟಮ್ಮ ಆ್ಯಂಡ್ ಟೀಂ ಮತ್ತೆ ಬರಲ್ಲ ಅನ್ನೋದು ಲೆಕ್ಕಚಾರದಲ್ಲಿ ಇಲಾಖೆ ಇದೆ.
ಒಟ್ಟಾರೆ ಇಲಾಖೆಯ ಹಿರಿಯ ಅಧಿಕಾರಿಗಳು ಮಾಡಿರುವ ಪ್ಲಾನ್ ಪ್ರಕಾರ ಬೀಟಮ್ಮ ಟೀಂನ ಕಾಡಾನೆಗಳನ್ನು ಆಪರೇಷನ್ ಭದ್ರಾ ಪ್ಲಾನ್ ವರ್ಕ್ಔಟ್ ಅದ್ರೆ ಮುಂದೇ ಬೀಟಮ್ಮ ಟೀಂ ಹಾವಳಿ ಚಿಕ್ಕಮಗಳೂರಿಗೂ ಹಾಸನಕ್ಕೂ ತಪ್ಪೋದ್ರಲ್ಲಿ ಡೌಟೇ ಇಲ್ಲ ಅಂತಿದ್ದಾರೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು.