ಕಾಂಟ್ರಾಕ್ಟರ್‌ ಸಾವಿಗೆ ಕಾರಣರಾದವರಿಗೆ ಏನ್‌ ಮಾಡಬೇಕು?: ಸಚಿವ ರಾಮಲಿಂಗಾ ರೆಡ್ಡಿ

By Kannadaprabha NewsFirst Published Feb 11, 2024, 2:00 AM IST
Highlights

ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ನಮಗೆ ಕಾಣಿಸುತ್ತಿಲ್ಲ. ಟೆಂಡರ್‌ಗಳಲ್ಲಿ ಸಣ್ಣ ಪುಟ್ಟ ಪ್ಯಾಕೇಜ್ ಮಾಡಿದ್ರೆ ಕಾಂಟ್ರಾಕ್ಟರ್ಸಗೆ ತೊಂದರೆ ಆಗುತ್ತೆ ಅಂತ ಸಂಘದವರು ಹೇಳಿದ್ದಾರೆ. ಬಿಜೆಪಿಗೆ ಹೋಲಿಕೆ ಮಾಡಿದ್ರೆ ನಮ್ಮಲ್ಲಿ ಭ್ರಷ್ಟಾಚಾರ ಕಾಣಿಸ್ತಾನೆ ಇಲ್ಲ. ಈ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವ ನೈತಿಕ ಹಕ್ಕು ಇಲ್ಲವೆಂದು ಹೇಳಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ 

ಕಲಬುರಗಿ(ಫೆ.11): ಸಂಸದ ಡಿ.ಕೆ ಸುರೇಶ್‌ ವಿರುದ್ಧ ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎಂದಿರುವ ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿಕೆಗೆ, ಕಾಂಟ್ರಾಕ್ಟರ್ ಸಾವಿಗೆ ಕಾರಣರಾದರಲ್ಲ ಅವರಿಗೆ ಏನು ಮಾಡಬೇಕು.? ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಈಶ್ವರಪ್ಪಗೆ ಸಚಿವ ರಾಮಲಿಂಗಾ ರೆಡ್ಡಿ ಟಾಂಗ್ ನೀಡಿದರು. ಕಲಬರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಕಂಡ ಅತಿ ಭ್ರಷ್ಟ ಸರಕಾರ ಅಂದ್ರೆ ಅದು ಬೊಮ್ಮಾಯಿ ಅವಧಿಯ ಸರ್ಕಾರ ಎಂದು ದೂರಿದರು.

ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ನಮಗೆ ಕಾಣಿಸುತ್ತಿಲ್ಲ. ಟೆಂಡರ್‌ಗಳಲ್ಲಿ ಸಣ್ಣ ಪುಟ್ಟ ಪ್ಯಾಕೇಜ್ ಮಾಡಿದ್ರೆ ಕಾಂಟ್ರಾಕ್ಟರ್ಸಗೆ ತೊಂದರೆ ಆಗುತ್ತೆ ಅಂತ ಸಂಘದವರು ಹೇಳಿದ್ದಾರೆ. ಬಿಜೆಪಿಗೆ ಹೋಲಿಕೆ ಮಾಡಿದ್ರೆ ನಮ್ಮಲ್ಲಿ ಭ್ರಷ್ಟಾಚಾರ ಕಾಣಿಸ್ತಾನೆ ಇಲ್ಲ. ಈ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವ ನೈತಿಕ ಹಕ್ಕು ಇಲ್ಲವೆಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಶಕ್ತಿ ಯೋಜನೆ: ನಿತ್ಯ 60 ಲಕ್ಷ ಮಹಿಳೆಯರ ಪ್ರಯಾಣ, ಸಚಿವ ರಾಮಲಿಂಗಾ ರೆಡ್ಡಿ

ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದ್ದೆ ಯಡಿಯೂರಪ್ಪ ಮತ್ತು ಬೊಮ್ಮಾಯಿ. ಇವರಿಬ್ಬರ ಅವಧಿಯಲ್ಲಿ ರಾಜ್ಯದ ಸಾಲ ದ್ವಿಗುಣವಾಗಿದೆ. ನಾವು ಜನರಿಗೆ ಅನುಕೂಲವಾಗುವ ಗ್ಯಾರಂಟಿ ಕೊಟ್ಟಿದ್ದೇವೆ. ಆದ್ರೆ ಬಿಜೆಪಿಯವರು ಜನರಿಗೆ ಸಾಲದ ಗ್ಯಾರಂಟಿ ಕೊಟ್ಟಿದ್ದಾರೆ. ದೇಶದಲ್ಲಿ ಮೋದಿ ಕಥೆಯೂ ಇದೆ. ಅವರೂ ದೇಶದ ಜನರಿಗೆ ಸಾಲದ ಗ್ಯಾರಂಟಿ ಕೊಟ್ಟಿದ್ದಾರೆಂದು ತಿವಿದರು.

click me!