ರಾಯಚೂರು: ಕೆರೆಯಲ್ಲಿ ಬಿದ್ದು ಈಜು ಬಾರದೆ ವೃದ್ಧ ಸಾವು

By Kannadaprabha News  |  First Published Feb 11, 2024, 12:00 AM IST

ವಣಗೇರಿ ನಿವಾಸಿ ಹನುಮಪ್ಪ ಮೃತಪಟ್ಟ ವೃದ್ಧರಾಗಿದ್ದಾರೆ. ತುರ್ವಿಹಾಳ ಪಟ್ಟಣದಲ್ಲಿ ವಾಸಿಸುತ್ತಿರುವ ಸಹೋದರಿಯ ಮನೆಗೆ ಬಂದಿದ್ದ ಹನುಮಪ್ಪ ನೀರು ಕುಡಿಯಲು ಕೆರೆಗೆ ಹೋದಾಗ ಕಾಲುಜಾರಿ ಬಿದ್ದು ಈಜಲು ಬಾರದೇ ಸಾವನಪ್ಪಿದ್ದಾರೆ. 


ತುರ್ವಿಹಾಳ(ಫೆ.11):  ಪಟ್ಟಣ ಸಮೀಪದಲ್ಲಿರುವ ಕೆರೆಯಲ್ಲಿ ನೀರು ಕುಡಿಯಲು ಹೋದ ವೃದ್ಧ ಕಾಲು ಜಾರಿ ಬಿದ್ದು ಈಜಲಾಗದೇ ಮೃತಪಟ್ಟಿರುವ ಘಟನೆ ನಡೆದಿದೆ.

ವಣಗೇರಿ ನಿವಾಸಿ ಹನುಮಪ್ಪ (70) ಮೃತಪಟ್ಟ ವೃದ್ಧರಾಗಿದ್ದಾರೆ. ತುರ್ವಿಹಾಳ ಪಟ್ಟಣದಲ್ಲಿ ವಾಸಿಸುತ್ತಿರುವ ಸಹೋದರಿಯ ಮನೆಗೆ ಬಂದಿದ್ದ ಹನುಮಪ್ಪ ನೀರು ಕುಡಿಯಲು ಕೆರೆಗೆ ಹೋದಾಗ ಕಾಲುಜಾರಿ ಬಿದ್ದು ಈಜಲು ಬಾರದೇ ಸಾವನಪ್ಪಿದ್ದಾರೆಂದು ತಿಳಿದು ಬಂದಿದೆ. 

Tap to resize

Latest Videos

undefined

ರಾಯಚೂರು ಕೃಷ್ಣ ನದಿಯಲ್ಲಿ ಪತ್ತೆಯಾದ ದಶಾವತಾರಿ ವಿಷ್ಣು ಮತ್ತು ಶಿವಲಿಂಗ ವಿಗ್ರಹಗಳು

ಕೆರೆ ನೀರಿನಲ್ಲಿ ತೇಲಿದ ಶವವನ್ನು ಸ್ಥಳೀಯರು ಹೊರಗಡೆ ತೆಗೆದು ಪೊಲೀಸರಿಗೆ ಒಪ್ಪಿಸಿದ್ದು ಅವರು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತುರ್ವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!