Grama Vastavya: ಗಿರಿಜನ ಹಾಡಿ ನಿವಾಸಿಗಳ ಕಷ್ಟ ಸುಖ ಆಲಿಸಿದ ಸಚಿವ ಆರ್.ಅಶೋಕ್

By Suvarna NewsFirst Published Nov 19, 2022, 7:04 PM IST
Highlights

ಕಂದಾಯ ಸಚಿವ ಆರ್.ಅಶೋಕ್ ತಮ್ಮ 12 ನೇ‌ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನ ಮೈಸೂರು ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದಾರೆ. ಗಿರಿಜನ ಹಾಡಿ ನಿವಾಸಿಗಳು ಹಾಗೂ ಕಾಡಂಚಿನ  ಜನರ ಕಷ್ಟ ಸುಖವನ್ನ ಆಲಿಸಿ, ಅವರಿಗೆ ಪರಿಹಾರ ಒದಗಿಸಿಕೊಟ್ಟಿದ್ದು ಈ ಬಾರಿ ಗ್ರಾಮ ವಾಸ್ತವ್ಯದ ವಿಶೇಷವಾಗಿತ್ತು.

ಮೈಸೂರು (ನ.19): ಕಂದಾಯ ಸಚಿವ ಆರ್.ಅಶೋಕ್ ತಮ್ಮ 12 ನೇ‌ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನ ಮೈಸೂರು ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದಾರೆ. ಗಿರಿಜನ ಹಾಡಿ ನಿವಾಸಿಗಳು ಹಾಗೂ ಕಾಡಂಚಿನ  ಜನರ ಕಷ್ಟ ಸುಖವನ್ನ ಆಲಿಸಿ, ಅವರಿಗೆ ಪರಿಹಾರ ಒದಗಿಸಿಕೊಟ್ಟಿದ್ದು ಈ ಬಾರಿ ಗ್ರಾಮ ವಾಸ್ತವ್ಯದ ವಿಶೇಷವಾಗಿತ್ತು. 27 ಗಂಟೆಗಳ ಕಾಲ ಒಂದೇ ಗ್ರಾಮದಲ್ಲಿ ವಾಸ್ತವ್ಯ ಹೂಡಿರುವ ಸಚಿವರು ಕಂದಾಯ ಇಲಾಖೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಿದ್ರು‌. ಇಂದು ಗಿರಿಜನರ ವಸತಿ ಶಾಲೆಯಲ್ಲೆ ವಾಸ್ತವ್ಯ ಹೂಡಲಿದ್ದಾರೆ. ಅರ್ಹ ಫಲಾನುಭವಿಗಳಿಗೆ ಸಿಕ್ಕ ಸರ್ಕಾರಿ ಸವಲತ್ತುಗಳು,ನೆನಗುಂದಿಗೆ ಬಿದ್ದಿದ್ದ ಕಂದಾಯ ಇಲಾಖೆ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ‌,. ಗ್ರಾಮೀಣ ಜನರ ಕಷ್ಟಕ್ಕೆ ಧನಿಯಾದ ಸಚಿವ, ಗಿರಿಜನರ ಸಾಂಸ್ಕೃತಿಕ ಕಲೆ ಕಂಡು ಬೆರಗಾದ ಆರ್.ಅಶೋಕ್. ಎಸ್, ಇದಿಷ್ಟು ನಡೆದಿದ್ದು ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಭೀಮನಕೊಲ್ಲಿಯ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ.

ಕಂದಾಯ ಸಚಿವ ಆರ್.ಅಶೋಕ್ ತಮ್ಮ 12 ನೇ ಗ್ರಾಮ ವಾಸ್ತವ್ಯವವನ್ನು ಹೆಚ್.ಡಿ.ಕೋಟೆಯ ಭೀಮನಕೊಲ್ಲಿ, ಕಂಚನಹಳ್ಳಿಯಲ್ಲಿ ನಡೆಸಿದ್ರು. ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ನಿಮಿತ್ತ ಗ್ರಾಮ ವಾಸ್ತವ್ಯಕ್ಕಾಗಿ ಆಗಮಿಸಿದ ಸಚಿವರಿಗೆ ಭೀಮನಕೊಲ್ಲಿಯಲ್ಲಿ ಪೂರ್ಣಕುಂಭ ಸ್ವಾಗತ ದೊರೆಯಿತು‌. 101 ಕಳಶ ಹೊತ್ತ ಮಹಿಳೆಯರು ಸಚಿವರಿಗೆ ಸ್ವಾಗತ ಕೋರಿ ಶುಭ ಹಾರೈಸಿದ್ರು. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಚಿವರು ಟ್ರ್ಯಾಕ್ಟರ್ ಮೇಲೇರಿ ಮೆರವಣಿಗೆ ಮೂಲಕ ಮಹದೇಶ್ವರ ದೇವಸ್ಥಾನಕ್ಕೆ ತೆರಳಿದ್ರು. ಜನಪದ ಕಲಾತಂಡಗಳು ಸಚಿವರ ಮೆರವಣಿಗೆಗೆ ಮೆರೆಗು ತಂದಿದ್ದವು.ಮಹದೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವರು, ವಿವಿಧ ಇಲಾಖೆಗಳ ವಸ್ತು ಪ್ರದರ್ಶನ ಉದ್ಘಾಟಿಸಿ, ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ್ರು. 

ವಿಶೇಷ ತೇತನನನ್ನು ಕೈ ಹಿಡಿದು ನಡೆಸಿದ ಆರ್.ಅಶೋಕ್: ಸರ್ಕಾರಿ‌ ಸವಲತ್ತುಗಳನ್ನ ಜನರಿಗೆ ತಲುಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವರು ವೇದಿಕೆ ಮೇಲೆ ವಿಕಲಚೇತನನಿಗೆ ಕೃತಕ ಕಾಲು ತೊಡಿಸಿ, ಆತನಿಂದಲೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆಗೊಳಿಸಿದ್ರು. ಈ ವೇಳೆ ವಿವಿಧ ಇಲಾಖೆಗಳ ಐದು ಸಾವಿರಕ್ಕು ಹೆಚ್ಚು ಫಲಾನುಭವಿಗಳಿಗೆ ಸರ್ಕಾರಿ ಸವಲತ್ತುಗಳನ್ನ ವಿತರಿಸಲಾಯಿತು. ನಂತರ ಮಾತನಾಡಿದ ಸಚಿವರು ಒಬ್ಬ ಕಂದಾಯ ಸಚಿವನಾಗಿ ಮೊದಲ ಬಾರಿಗೆ ಗಿರಿಜನರ ಸಮಸ್ಯೆ ಆಲಿಸಲು ಬರುತ್ತಿರುವುದು ಸಂತೋಷವಾಗುತ್ತಿದೆ ಎಂದ್ರು. 

ಗ್ರಾಮ ವಾಸ್ತವ್ಯ ತಮಗೆ ಒಂದು ಪಾಠವಾಗಿದ್ದು, ಸ್ಥಳೀಯ ಜನರ ಸಮಸ್ಯೆಯನ್ನ‌ಆಲಿಸಿ ಪರಿಹರಿಸುತ್ತಿರುವುದು ಸಂತೋಷ ತಂದಿದೆ.‌ ಇದೇ ರೀತಿ ಇನ್ನೂರು ಕಡೆಗಳಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮ ಜರುಗುತ್ತಿದ್ದು, ಕಂದಾಯ ಇಲಾಖೆ ಸಮಸ್ಯೆಗಳನ್ನ ಬಗೆಹರಿಸಲು ಇದು ಸಹಾಯವಾಗಿದೆ ಎಂದ್ರು. ತಮ್ಮೊಂದಿಗೆ ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳನ್ನ ಕರೆತಂದಿದ್ದು, ದಿನಪೂರ್ತಿ ತಮ್ಮೊಡನೆ ಇದ್ದು, ಸಮಸ್ಯೆಗಳನ್ನ ಬಗೆಹರಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಜನರಲ್ಲಿ ವಿಶ್ವಾಸ ಮೂಡಿಸಿದ್ರು.

ಇನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾಧು ಸಚಿವ ಆರ್.ಅಶೋಕ್ ರನ್ನ ಹಾಡಿಹೊಗಳಿದ್ರು. ಯಾವುದೇ ಇಲಾಖೆ ಕೊಟ್ಟರು ಅದಕ್ಕೆ ಜೀವ ತುಂಬುವ ಕೆಲಸವನ್ನ ಮಾನ್ಯ ಸಚಿವರು ಮಾಡುತ್ತಾರೆ ಎಂದ ಅವರು ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳದಲ್ಲಿ ಆರ್.ಅಶೋಕ್ ಅವರ ಪಾತ್ರ ಪ್ರಮುಖವಾದುದು ಎಂದು ನೆನೆದರು. 

ದಲಿತರ ಮನೆಯಲ್ಲಿ ಜೋಳದ ರೊಟ್ಟಿ ಸವಿದ ಸಚಿವ ಅಶೋಕ್‌

 ವೇದಿಕೆ ಕಾರ್ಯಕ್ರಮ ನಂತರ ಸಸ್ಯಹಾರದ ಊಟ ಸವಿದ್ರು. ಚಪಾತಿ, ಪಲ್ಯ, ಗೊಜ್ಜು, ಅನ್ನ, ಸೌತೆಕಾಯಿ ಸಾಂಬಾರ್, ತಿಳಿ ಸಾಂಬಾರ್, ಮಜ್ಜಿಗೆ, ಭರ್ಪಿ, ನಂಜನಗೂಡು ರಸ ಬಾಳೆ ಊಟ ಸವಿದ್ರು. ನಂತರ ಗಿರಿಜನರ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಣೆ ಮಾಡಿ ಆನಂದಿಸಿದ್ರು. ಸಂಜೆ ವೇಳೆ ಅದೇ ವೇದಿಕೆಯಲ್ಲಿ ಎನ್.ಬೇಗೂರು ಗ್ರಾ.ಪಂ ವ್ಯಾಪ್ತಿಯ ಜನರ ಕುಂದುಕೊರತೆ ಆಲಿಸಿದ ಸಚಿವರು, ಅರ್ಜಿಗಳನ್ನ ಸ್ವೀಕರಿಸಿ ಸ್ಥಳದಲ್ಲೆ ಇದ್ದ ಅಧಿಕಾರಿಗಳ ಮೂಲಕ ಅವುಗಳಿಗೆ ಪರಿಹಾರ ಕೊಡಿಸುವ ಕೆಲಸ ಮಾಡಿದ್ರು. ಗ್ರಾಮ ವಾಸ್ತವ್ಯದ ಕೊನೆಯಲ್ಲಿ ಕಂಚನಹಳ್ಳಿ ಗ್ರಾಮದಲ್ಲಿ ಗ್ರಾಮಸಭೆ ನಡೆಸಿದ ಸಚಿವರು ಕಾಡಂಚಿನ ಗ್ರಾಮಗಳ ಸಮಸ್ಯೆ, ಪೌತಿ ಖಾತೆ, ಹಕ್ಕುಪತ್ರ ವಿಲೇವಾರಿ, ವನ್ಯ ಜೀವಿ ಮಾನವ ಸಂಘರ್ಷದ ಕುರಿತು ಚರ್ಚೆ ನಡೆಸಿ ಗ್ರಾಮಸ್ಥರ ಅಹವಾಲುಗಳಿಗೆ ಅಧಿಕಾರಿಗಳ ಮೂಲಕ ಪರಿಹಾರ ಸೂಚಿಸುತ್ತ ಹೋದರು.

Grama Vastavya: ಕಾಡಂಚಿನ ಶಾಲೇಲಿ ಇಂದು ಸಚಿವ ಅಶೋಕ್‌ ಗ್ರಾಮ ವಾಸ್ತವ್ಯ

ಒಟ್ಟಾರೆ ಕಂದಾಯ ಸಚಿವ ಆರ್.ಅಶೋಕ್ ರವರ 12 ನೇ ಗ್ರಾಮವಾಸ್ತವ್ಯ ಬಹಳ ವಿಶೇಷತೆಗಳಿಂದ ಕೂಡಿದ್ದು, ಸಾಕಷ್ಟು ವರ್ಷಗಳಿಂದ ಸಮಸ್ಯೆಗಳನ್ನ‌ ತಮ್ಮ ಒಡಲಿನಲ್ಲಿ ಇಟ್ಟುಕೊಂಡಿದ್ದ ಕಾಡಂಚಿನ ಜನರಿಗೆ ಸಚಿವರ ಮೂಲಕವೇ ಖುದ್ದು ಪರಿಹಾರ ಕಂಡುಕೊಳ್ಳುವಂತಾಗಿತ್ತು.

click me!