Mysuru: ಸುತ್ತಾಟವಿಲ್ಲದೆ ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ: ಸಚಿವ ಆರ್‌.ಅಶೋಕ್‌

By Govindaraj S  |  First Published Sep 22, 2022, 12:12 AM IST

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಲೆದಾಟ ಸುತ್ತಾಟ ಇಲ್ಲದೇ ಮನೆ ಬಾಗಿಲಿಗೆ ಸೌಲಭ್ಯ ತಲುಪಿಸುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು. 


ಮೈಸೂರು (ಸೆ.22): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಲೆದಾಟ ಸುತ್ತಾಟ ಇಲ್ಲದೇ ಮನೆ ಬಾಗಿಲಿಗೆ ಸೌಲಭ್ಯ ತಲುಪಿಸುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು. ನಗರದ ಕೆ.ಆರ್‌. ಕ್ಷೇತ್ರ ವ್ಯಾಪ್ತಿಯ ವಿದ್ಯಾರಣ್ಯಪುರಂನಲ್ಲಿ ಶಾಸಕ ಎಸ್‌.ಎ.ರಾಮದಾಸ್‌ ಅವರು ಆಯೋಜಿಸಿರುವ ಮೋದಿ ಯುಗ ಉತ್ಸವ್‌ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಅವರು ವಿವಿಧ ಸವಲತ್ತು ವಿತರಿಸಿ ಮಾತನಾಡಿದರು. ರಾಜ್ಯದ 60 ಲಕ್ಷ ರೈತರ ಮನೆ ಬಾಗಿಲಿಗೆ ದಾಖಲಾತಿ ತಲುಪಿಸಲಾಗಿದೆ. 72 ಗಂಟೆಯೊಳಗೆ ಸಂಧ್ಯಾ ಸುರಕ್ಷಾ ಯೋಜನೆ ಫಲಾನುಭವಿಗಳಿಗೆ ಅದೇಶ ಪತ್ರ ವಿತರಿಸಿದ್ದು ನಮ್ಮ ಸರ್ಕಾರದ ಸಾಧನೆ. ಈ ಹಿಂದೆ ಪಿಂಚಣಿ ಪಡೆಯಲು ಸಚಿವರು ಬರುವ ದಾರಿಯನ್ನೇ ಕಾದು ಅರ್ಜಿಹಿಡಿದು ನಿಲ್ಲಬೇಕಿತ್ತು. 

ತಾಲೂಕು ಕಚೇರಿಯ ದಾರಿ ಸವೆಸಬೇಕಿತ್ತು. ಆದರೆ ಈಗ ಸಮಯ ಬದಲಾಗಿದೆ. ಹಲೋ ಕಂದಾಯ ಸಚಿವರೇ ಎಂದು ಕರೆ ಮಾಡಿದರೆ 72 ಗಂಟೆಯೊಳಗೆ ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ಪಿಂಚಣಿ ಕಾರ್ಯಾದೇಶ ಪತ್ರ ನೀಡುತ್ತಾರೆ. ಈವರೆಗೆ ಸುಆರು 60 ಲಕ್ಷ ರೈತರ ಮನೆ ಬಾಗಿಲಿಗೆ ಬೂ ದಾಖಲಾತೆ ಕೊಡಲಾಗಿದೆ ಎಂದು ಅವರು ಹೇಳಿದರು. ವ್ಯವಸಾಯ ಭೂಮಿಯನ್ನು ವಸತಿ ಯೋಜನೆಗೆ ಪರಿವರ್ತಿಸಲು ನಾಲ್ಕೈದು ತಿಂಗಳು ಬೇಕಾಗುತ್ತಿತ್ತು.ಈದರೆ ಈಗ ಕೇವಲ 7 ದಿನಗಳಲ್ಲಿ ಭೂ ಪರಿವರ್ತನೆಗೊಳಿಸುವ ಮಸೂದೆಯನ್ನು ಈ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದರು.

Tap to resize

Latest Videos

ಒಂದು ಸಾವಿರ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ ಶೀಘ್ರ ಹಾಸ್ಟೆಲ್‌: ಕೋಟ ಶ್ರೀನಿವಾಸ ಪೂಜಾರಿ

ರಾಮದಾಸ್‌ ಬಗ್ಗೆ ಮೆಚ್ಚುಗೆ: ಎಲ್ಲಾ ಜನಪ್ರನಿಧಿಗಳು ಶಾಸಕ ರಾಮದಾಸ್‌ ಅವರಂತೆ ಕೆಲಸ ಮಾಡಿದರೆ ರಾಜ್ಯ ಅಭಿವೃದ್ಧಿ ಹೊಂದಲಿದೆ. ಮನೆ ಮನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯ ತಲುಪಿಸುವ ಕೆಲಸವನ್ನು ರಾಮದಾಸ್‌ ಮಾಡುತ್ತಿದ್ದಾರೆ. 50 ಸಾವಿರ ಜನರನ್ನು ಸೇರಿಸುವುದು ಸುಲಭವಲ್ಲ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು. ಶಾಸಕ ಎಸ್‌.ಎ.ರಾಮದಾಸ್‌ ಮಾತನಾಡಿ, ಮೋದಿ ಯುಗ ಉತ್ಸವದಲ್ಲಿ ಸುಮಾರು 50 ಸಾವಿರ ಜನರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳನ್ನು ಪಡೆಯಲಿದ್ದಾರೆ. 20 ಸಾವಿರ ಜನರಿಗೆ ಆರೋಗ್ಯ ನೆರವು ಸಿಗಲಿದೆ ಎಂದರು. ಒಕ್ಕಲಿಗರ ಸಂಘದ ವಿದ್ಯಾರ್ಥಿ ನಿಲಯದ ಸಮಗ್ರ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನ ನೀಡಬೇಕು ಎಂದು ಕಂದಾಯ ಸಚಿವರಿಗೆ ರಾಮದಾಸ್‌ ಮನವಿ ಮಾಡಿದರು. 

ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಎಂ. ಕೃಷ್ಣಪ್ಪ ಮಾತನಾಡಿ, ನಿಗಮದಲ್ಲಿ ಅನೇಕ ಸೌಲಭ್ಯಗಳಿವೆ. ಅವುಗಳ ಪ್ರಯೋಜನ ಪಡೆಯಬೇಕು. ಮೀಟರ್‌ ಬಡ್ಡಿ ಸಾಲ ಮಾಡಿ ಕಷ್ಟಕ್ಕೆ ಪಡಬೇಡಿ ಎಂದರು. ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ತಹಸೀಲ್ದಾರ್‌ ಬಿ.ಎನ್‌. ಗಿರೀಶ್‌, ಒಕ್ಕಲಿಗರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಶೋಭಾ, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಎಂ. ಮರಿಸ್ವಾಮಿ, ನಿರ್ದೇಶಕ ಗಂಗಾಧರ, ಬಿಜೆಪಿ ಮುಖಂಡ ಹೇಮಂತ್‌ಕುಮಾರ್‌ ಗೌಡ, ಬಿಜೆಪಿ ಕೆ.ಆರ್‌.ಕ್ಷೇತ್ರದ ಅಧ್ಯಕ್ಷ ಎಂ. ವಡಿವೇಲು, ಓಂ. ಶ್ರೀನಿವಾಸು, ನಗರ ಪಾಲಿಕೆ ಸದಸ್ಯ ಮ.ವಿ. ರಾಮಪ್ರಸಾದ್‌, ಬಿ.ವಿ. ಮಂಜುನಾಥ್‌ ಮೊದಲಾದವರು ಇದ್ದರು.

ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತ ಸ್ಥಳ ಮೈಸೂರು: ಪ್ರತಾಪ ಸಿಂಹ

ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ರಸ್ತೆ ಹಾಳಾಗಿದೆ, ಪೂರ್ಣ ಮನೆ ಹಾನಿಯಾದರೆ . 5 ಲಕ್ಷ ನೀಡಿದ್ದೇವೆ. ಮನೆಗೆ ನೀರು ನುಗ್ಗಿದರೆ . 10 ಸಾವಿರ ನೀಡಲಾಗಿದೆ. ರಾಜ್ಯದಲ್ಲಿ 3.5 ಮೀಟರ್‌ ಅಂತರ್ಜಲ ಮಟ್ಟಹೆಚ್ಚಳವಾಗಿದೆ. ಬಹುತೇಕ ಕೆರೆಗಳು ಭರ್ತಿಯಾಗಿವೆ. ಬಿಜೆಪಿ ಬಂದರೆ ಮಳೆಗಾಲ, ಕಾಂಗ್ರೆಸ್‌ ಬಂದರೆ ಬರಗಾಲ ಇರುತ್ತದೆ.
- ಆರ್‌. ಅಶೋಕ್‌, ಕಂದಾಯ ಸಚಿವರು

click me!