Harsha Murder Case: ಕೆಲವು ಗೂಂಡಾ ಮುಸ್ಲಿಂರ ವಿಕೃತಿ ಕಡಿ​ಮೆ​ಯಾ​ಗಿ​ಲ್ಲ: ಈಶ್ವ​ರಪ್ಪ

By Kannadaprabha News  |  First Published Mar 6, 2022, 9:00 AM IST

*   ಮುಸ್ಲಿಂ ಗೂಂಡಾಗಳಿಗೆ ಹಿರಿಯರು ಬುದ್ಧಿ ಹೇಳಲಿ
*  ಬಿಎಸ್‌ವೈ- ಕೆಎಸ್‌ಇ ಜಗಳ ಗಂಡ, ಹೆಂಡತಿ ಜಗಳದಂತೆ: ತರಳಬಾಳು ಶ್ರೀ
*  ಶಿಕಾರಿಪುರದ ಬೆಂಕಿಚೆಂಡಿನಿಂದಾಗಿ ಬಿಜೆಪಿ ಇಂದು ಶಕ್ತಿಶಾಲಿ 


ಶಿವಮೊಗ್ಗ(ಮಾ.06): ಶಾಂತ ಸ್ಥಿತಿಯನ್ನು ಮತ್ತಷ್ಟು ಕದಡುವ ರೀತಿಯಲ್ಲಿ ಮುಸ್ಲಿಂ ಗೂಂಡಾಗಳು(Muslim Goons) ವರ್ತಿಸುತ್ತಿದ್ದಾರೆ. ಅವರಿಗೆ ಆ ಸಮುದಾಯದ ಹಿರಿಯರು ಪಾಠ ಕಲಿಸಬೇಕು. ಇಲ್ಲದಿದ್ದರೆ, ನಾವೇ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ(KS Eshwarappa) ಎಚ್ಚರಿಕೆ ನೀಡಿದರು.

ಹಲ್ಲೆಗೊಳಗಾಗಿ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೆಂಕಟೇಶ್‌ ಅವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ(Harsha Murder) ಬಳಿಕ ನಗರದಲ್ಲಿ ಸಾಕಷ್ಟು ಅಹಿತಕರ ಘಟನೆ ನಡೆದಿದೆ. ಹಿಂದೂ(Hindu) ಸಮಾಜ ಕೂಡ ಘಟನೆಯಿಂದ ಆಕ್ರೋಶ ಗೊಂಡಿದೆ. ಇಂತಹ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು ಎಂದರು.

Tap to resize

Latest Videos

Shivamogga: ಹರ್ಷ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರು. ಘೋಷಣೆ

ಕೆಲವು ಗೂಂಡಾ ಮುಸಲ್ಮಾನರ ಮಾನಸಿಕ ವಿಕೃತಿ ಇನ್ನೂ ಕಡಿಮೆಯಾಗಿಲ್ಲ. ಅವರಿಗೆ ಸಮುದಾಯದ ನಾಯಕರು ಕಿವಿಹಿಂಡಿ ಬುದ್ಧಿ ಹೇಳಬೇಕು. ಇಂತಹ ಘಟನೆ ಮರುಕಳಿಸಬಾರದು. ಹರ್ಷ ಹತ್ಯೆ ನಂತರ ಹಿಂದೂ ಯುವಕರಿಗೆ ಇನ್ನೂ ನೋವು, ಆಕ್ರೋಶ ಕಡಿಮೆಯಾಗಿಲ್ಲ. ಹರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೊಲೆಗಡುಕರ ಬಂಧನ ಆಗಿದೆ ನಿಜ. ಆದರೆ, ಇದರ ನಡುವೆಯೇ ನಮ್ಮ ಪಕ್ಷದ ಕಾರ್ಯಕರ್ತ ವೆಂಕಟೇಶ್‌ ಅವರ ಮೇಲೆ ಮೂರ್ನಾಲ್ಕು ಮಂದಿ ಮುಸಲ್ಮಾನ್‌ ಗೂಂಡಾಗಳು ಹಲ್ಲೆ ಮಾಡಿದ್ದಾರೆ. ಘಟನೆಯನ್ನು ಬಲವಾಗಿ ಖಂಡಿಸುವುದಾಗಿ ಹೇಳಿದರು.

ಬಿಎಸ್‌ವೈ- ಕೆಎಸ್‌ಇ ಜಗಳ ಗಂಡ, ಹೆಂಡತಿ ಜಗಳದಂತೆ: ತರಳಬಾಳು ಶ್ರೀ

ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ(BS Yediyurappa) ಮತ್ತು ಸಚಿವ ಈಶ್ವರಪ್ಪ ಅವರ ನಡುವಿನ ಜಗಳ ಗಂಡ ಹೆಂಡತಿ ಜಗಳದಂತೆ. ಜಗಳದ ಬಳಿಕ ಗಂಧ ತೀಡಿದಂತೆ ಮತ್ತೆ ಒಂದಾಗುತ್ತಾರೆ. ಹೀಗೆಂದು ವ್ಯಾಖ್ಯಾನಿಸಿದವರು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು(Dr Shivamurthy Shivacharya Swamiji).

ಇಲ್ಲಿನ ಬೆಕ್ಕಿನ ಕಲ್ಮಠ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರಿಗೆ ಪ್ರಕಟಿಸಲಾದ ‘ಗುರು ಬಸವಶ್ರೀ’(Guru Basavashri) ಪ್ರಶಸ್ತಿ(Award) ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಜಗಳ ಆಡದ ಗಂಡ ಹೆಂಡತಿ ಇಲ್ಲವೇ ಇಲ್ಲ. ಹಾಗೆಯೇ ಇವರು. ಈಗ ಒಂದಾಗಿದ್ದಾರೆ. ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

Mekedatu Politics: ಕಾಂಗ್ರೆಸ್‌ ಪಾದಯಾತ್ರೆ Baahubali-2 ಸಿನಿಮಾ: ಈಶ್ವರಪ್ಪ

ಉಬ್ರಾಣಿ ಏತ ನೀರಾವರಿ ಯೋಜನೆಗೆ ರೈತರು(Farmers) ಅಮರಣಾಂತ ಉಪವಾಸ ಮುಷ್ಕರ ಹೂಡಿದ್ದರು. ಆಗ ಖುದ್ದು ಜಲಸಂಪನ್ಮೂಲ ಸಚಿವರಾಗಿದ್ದ ಈಶ್ವರಪ್ಪನವರು ಸಿಎಂ ಆಗಿದ್ದ ಯಡಿಯೂರಪ್ಪ ಅವರಿಗೆ ತಿಳಿಸಿ ಯೋಜನೆಗೆ ತಕ್ಷಣವೇ ಮಂಜೂರಾತಿ ಕೊಡಿಸಿದ್ದರು ಎಂದು ಹೇಳಿದರು.

ಶಿಕಾರಿಪುರದ ಬೆಂಕಿಚೆಂಡಿನಿಂದಾಗಿ ಬಿಜೆಪಿ ಇಂದು ಶಕ್ತಿಶಾಲಿ:

ಶಿಕಾರಿಪುರ: ಶಿಕಾರಿಪುರದ ಬೆಂಕಿಚೆಂಡು ರಾಜ್ಯವ್ಯಾಪಿ ಸಂಚಾರ ಮಾಡಿದ್ದಕ್ಕೆ ಬಿಜೆಪಿ ಇಂದು ಶಕ್ತಿಶಾಲಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಶ್ಲಾಘಿಸಿದ್ದಾರೆ. 

ಯಡಿಯೂರಪ್ಪ ಅವರಂತೆ ರಾಜ್ಯದ ಮೂಲೆ ಮೂಲೆಯಲ್ಲಿಯೂ ಬೆಂಕಿ ಚೆಂಡುಗಳನ್ನು ಸೃಷ್ಟಿಸಿ ಪಕ್ಷವನ್ನು ಗಟ್ಟಿಯಾಗಿ ಸಂಘಟಿಸಿ 2023 ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಯಡಿಯೂರಪ್ಪ ಅವರ ಕನಸನ್ನು ನನಸು ಮಾಡುತ್ತೇವೆ ಎಂದರು. ಕನಿಷ್ಠ 150 ಶಾಸಕರನ್ನು ಆಯ್ಕೆಯಾಗುವಂತೆ ಶ್ರಮಿಸುತ್ತೇವೆ. ಇದು ನಾವು ನಿಮಗೆ ನೀಡುವ ಭರವಸೆ. ನಾನು ಕಂಡಾಗಿನಿಂದ ಇವರ ಬಾಯಲ್ಲಿ ರೈತ ಎಂಬ ಪದದ ಹೊರತಾಗಿ ಇನ್ನೇನು ಬಂದಿಲ್ಲ. ಈ ರೀತಿ ಬದ್ಧತೆ ಇಟ್ಟುಕೊಂಡು ಅವಿರತ ಶ್ರಮ ಹಾಕಿ ಪಕ್ಷ ಸಂಘಟಿಸುವವರು ಇಲ್ಲವೇ ಇಲ್ಲ ಎನ್ನುವಷ್ಟುಅಪರೂಪ ಎಂದು ಬಣ್ಣಿಸಿದರು.
 

click me!