BESCOM: ಬೆಂಗ್ಳೂರಲ್ಲಿ ಇಂದು ವಿವಿಧೆಡೆ ವಿದ್ಯುತ್‌ ವ್ಯತ್ಯಯ

Kannadaprabha News   | Asianet News
Published : Mar 06, 2022, 08:02 AM IST
BESCOM: ಬೆಂಗ್ಳೂರಲ್ಲಿ ಇಂದು ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಸಾರಾಂಶ

*  ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್‌ ವ್ಯತ್ಯಯ  *  ಪ್ರಕಟಣೆಯಲ್ಲಿ ತಿಳಿಸಿದ ಬೆಸ್ಕಾಂ *  ನಿರ್ವಹಣಾ ಕೆಲಸ ಮಾಡುವ ಹಿನ್ನೆಲೆಯಲ್ಲಿ ವಿದ್ಯುತ್‌ ವ್ಯತ್ಯಯ   

ಬೆಂಗಳೂರು(ಮಾ.06): ಬೆಸ್ಕಾಂನ(BESCOM) ಬೆಂಗಳೂರು ಪಶ್ಚಿಮ ವೃತ್ತ ಹಾಗೂ ದಕ್ಷಿಣ ವೃತ್ತದ ವಿವಿಧ ಪ್ರದೇಶಗಳಲ್ಲಿ ಇಂದು(ಭಾನುವಾರ) ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್‌(Power) ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು(Bengaluru) ಪಶ್ಚಿಮ ವೃತ್ತ ವ್ಯಾಪ್ತಿಯ ಕೆ.ವಿ.ವೃಷಭಾವತಿ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ಉಲ್ಲಾಳ, ಅನ್ನಪೂರ್ಣೇಶ್ವರಿ ಲೇಔಟ್‌, ಸಪ್ತಗಿರಿ ಬಡಾವಣೆ, ಅಂದ್ರಹಳ್ಳಿ, ತಿಗಳರ ಪಾಳ್ಯ, ರಾಮೋಹಳ್ಳಿ ಡಿ ಗ್ರೂಪ್‌ ಬಡಾವಣೆ, ಆರ್‌ಪಿಸಿ ಲೇಔಟ್‌, ಸುಬ್ಬಣ್ಣ ಗಾರ್ಡನ್‌, ಚಂದ್ರಲೇಔಟ್‌, ಮೂಡಲಪಾಳ್ಯ, ಮಾರುತಿನಗರ, ಎನ್‌ಜಿಇಎಫ್‌ ಲೇಔಟ್‌, ಕಲ್ಯಾಣನಗರ, ಬೈರವೇಶ್ವರನಗರ, ಆದರ್ಶ ನಗರ, ಸಂಜೀವಿನಿನಗರ, ಜಗಜ್ಯೋತಿನಗರ, ಮೈಸೂರು ರಸ್ತೆ, ಪಂತರಪಾಳ್ಯ, ಐಟಿಐ ಬಡಾವಣೆ, ಮುತ್ತುರಾಯ ನಗರ, ಜನಪ್ರಿಯ ಲೇಔಟ್‌, ರಾಜರಾಜೇಶ್ವರಿ ದೇವಸ್ಥಾನ, ಹೆಮ್ಮಿಗೆಪುರ, ಕುಂಬಳಗೂಡು ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯತ್ಯಯ ಉಂಟಾಗಲಿದೆ.

Electricity| ಬೆಂಗ್ಳೂರಿನ ವಿವಿಧೆಡೆ ಇಂದು ದಿನವಿಡೀ ಕರೆಂಟ್‌ ಇರಲ್ಲ..!

ತಾವರಕೆರೆ ಉಪ ವಿಭಾಗದಲ್ಲಿ ವ್ಯತ್ಯಯ:

ತಾವರೆಕೆರೆ ಉಪ ವಿಭಾಗದ ಚಂದ್ರಪ್ಪ ಸರ್ಕಲ್‌ ಉಪಕೇಂದ್ರದ ಎಲ್ಲಾ 11 ಕೆ.ವಿ.ಮಾರ್ಗ ಹಾಗೂ ತಾವರೆಕೆರೆ ಶಾಖೆಯ ಟಿ.ಜಿ.ಹಳ್ಳಿ ಉಪಕೇಂದ್ರದಲ್ಲಿ ನಿರ್ವಹಣಾ ಕೆಲಸ(Management Work) ಮಾಡುವ ಹಿನ್ನೆಲೆಯಲ್ಲಿ ಚಿಕ್ಕನಹಳ್ಳಿ, ಪಚ್ಚೆಪಾಳ್ಯ, ಶಾಂತಿನಗರ, ಎಸ್‌.ಗೊಲ್ಲಳ್ಳಿ, ಚಂದ್ರಪ್ಪ ಸರ್ಕಲ್‌, ಸೂಲಿವಾರ, ಹುಣ್ಣಿಗೆರೆ, ಹುಲುವೇನಹಳ್ಳಿ, ಅಲಮ್ಮನಪಾಳ್ಯ, ಪುರದಪಾಳ್ಯ, ಕನಕನಗರ, ಕೂಡು ಸಿದ್ದನಪಾಳ್ಯದಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.
ಜತೆಗೆ ದೊಡ್ಡೇರಿ, ದೊಡ್ಡೇರಿ ಕಾಲೋನಿ, ದೋಣೇನಹಳ್ಳಿ, ಮಾಯಸಂದ್ರ, ರಾಮನಾಯಕನ ಪಾಂಡ್ಯ, ಬ್ಯಾಲಾಳು, ಚುಂಚನಕುಪ್ಪೆ, ಮುದ್ದನಪಾಳ್ಯ, ದೊಡ್ಡಮಾರನಹಳ್ಳಿ, ದೊಡ್ಡಾಲದಮರ, ಗಣಪತಿಹಳ್ಳಿ, ಗಣಪತಿಹಳ್ಳಿ ಕಾಲೋನಿ, ಹೊಸಪಾಳ್ಯ, ಕಾಳಯ್ಯನಪಾಳ್ಯ, ಚಿಕ್ಕಗೊಲ್ಲರಹಟ್ಟಿ, ಮಾಚೋಹಳ್ಳಿ, ಕಾಚೋಹಳ್ಳಿ, ಜನಪ್ರಿಯ ಲೇಔಟ್‌, ರಾಶಿ ರೆಸಿಡೆನ್ಸಿ, ಕಾಚೋಹಳ್ಳಿ ಕೈಗಾರಿಕಾ ಪ್ರದೇಶ, ತಾವರೆಕೆರೆ ಪಟ್ಟಣ, ಮಾದಪಟ್ಟಣ, ದೇವಮಾಚೋಹಳ್ಳಿ ಭಾಗದಲ್ಲೂ ವಿದ್ಯುತ್‌ ಕಡಿತ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ನಾಡಿದ್ದು ಈ ಏರಿಯಾಗಳಲ್ಲಿ ನೀರು ಬರಲ್ಲ

ಬೆಂಗಳೂರು: ಕೆಆರ್‌ ಪುರಂ ಹಾಗೂ ತಿಪ್ಪಗೊಂಡನಹಳ್ಳಿ ವ್ಯಾಪ್ತಿಯಲ್ಲಿ ಕಾವೇರಿ ನೀರಿನ(Kaveri Water) ಪೈಪ್‌ಲೈನ್‌ ಮಾರ್ಗ ಬದಲಾವಣೆ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ನಗರದ ಹಲವು ಬಡಾವಣೆಗಳಲ್ಲಿ ಮಾ. 3 ರಂದು ಬೆಳಗಿನ ಜಾವ 3ರಿಂದ ರಾತ್ರಿ 9ರವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ(Bengaluru Water Board) ತಿಳಿಸಿತ್ತು. 

ವ್ಯತ್ಯಯದ ಸ್ಥಳಗಳು: 

ಯಲಹಂಕ, ಜಕ್ಕೂರು, ಬ್ಯಾಟರಾಯನಪುರ, ವಿದ್ಯಾರಣ್ಯಪುರ, ಬಿಇಎಲ್‌ ಲೇಔಟ್‌, ಎಚ್‌ಎಂಟಿ ಬಡಾವಣೆ, ದಾಸರಹಳ್ಳಿ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಟಿ.ದಾಸರಹಳ್ಳಿ, ಪೀಣ್ಯ, ರಾಜಗೋಪಾಲ ನಗರ, ಚೊಕ್ಕಸಂದ್ರ, ಹೆಗ್ಗನಹಳ್ಳಿ, ಎಚ್‌ಎಂಟಿ ವಾರ್ಡ್‌, ನಂದಿನಿ ಲೇಔಟ್‌, ಆರ್‌ಆರ್‌ ನಗರ, ಕೆಂಗೇರಿ, ಉಲ್ಲಾಳ, ಅನ್ನಪೂರ್ಣೇಶ್ವರಿ ನಗರ, ಪಾಪರೆಡ್ಡಿಪಾಳ್ಯ, ಮಲ್ಲತ್ತಹಳ್ಳಿ, ಕೆಂಗುಂಟೆ, ಜಗಜ್ಯೋತಿ ಬಡಾವಣೆ, ಜ್ಞಾನಭಾರತಿ ಲೇಔಟ್‌, ಐಡಿಯಲ್‌ ಹೋಮ್ಸ್‌, ಬಿಇಎಂಎಲ್‌ ಲೇಔಟ್‌, ಪಟ್ಟಣಗೆರೆ, ಚೆನ್ನಸಂದ್ರ, ಕೊತ್ತನೂರು ದಿಣ್ಣೆ, ಜೆಪಿ ನಗರ 6, 7 ಮತ್ತು 8ನೇ ಹಂತ, ವಿಜಯ ಬ್ಯಾಂಕ್‌ ಲೇಔಟ್‌, ಕೂಡ್ಲು, ಅಂಜನಾಪುರ, ಬೊಮ್ಮನಹಳ್ಳಿ.

Kaveri water: ಬೆಂಗ್ಳೂರಿಗರೇ ಗಮನಿಸಿ: ಇಂದು ನಗರದ ವಿವಿಧೆಡೆ ನೀರು ಪೂರೈಕೆ ವ್ಯತ್ಯಯ

ಕೆ.ಆರ್‌.ಪುರಂ, ರಾಮಮೂರ್ತಿ ನಗರ, ಮಹದೇವಪುರ, ಎ.ನಾರಾಯಣಪುರ, ಮಾರತ್ತಹಳ್ಳಿ, ಹೂಡಿ, ವೈಟ್‌ಫೀಲ್ಡ್‌, ನಾಗರಬಾವಿ, ಜಿಕೆವಿಕೆ, ಸಂಜಯನಗರ, ನ್ಯೂ ಬಿಇಎಲ್‌ ರಸ್ತೆ, ಎಚ್‌ಎಸ್‌ಆರ್‌ ಲೇಔಟ್‌, ಎಚ್‌ಬಿಆರ್‌ ಲೇಔಟ್‌, ದೊಮ್ಮಲೂರು, ಬನ್ನೇರುಘಟ್ಟರಸ್ತೆ, ಜಂಬೂಸವಾರಿ ದಿಣ್ಣೆ, ಲಗ್ಗೆರೆ, ಶ್ರೀಗಂಧದ ಕಾವಲ್‌, ಟೆಲಿಕಾಂ ಲೇಔಟ್‌, ಶ್ರೀನಿವಾಸ ನಗರ, ಬಾಹುಬಲಿ ನಗರ, ಜಾಲಹಳ್ಳಿ, ಓಎಂಬಿಆರ್‌, ಬೊಮ್ಮನಹಳ್ಳಿ, ಅರಕೆರೆ, ಬಿಎಚ್‌ಇಎಲ್‌ ಲೇಔಟ್‌.
ಸುಂಕದಕಟ್ಟೆ, ಬ್ಯಾಡರಹಳ್ಳಿ, ಸರ್‌ ಎಂ.ವಿಶ್ವೇಶ್ವರಯ್ಯ ಲೇಔಟ್‌, ಕೊಟ್ಟಿಗೆಪಾಳ್ಯ, ಎಲ್‌ಐಸಿ ಬಡಾವಣೆ, ನಾಗದೇವನಹಳ್ಳಿ, ಮೈಸೂರು ರಸ್ತೆ, ಶಿರ್ಕೆ, ಚಿಕ್ಕಗೊಲ್ಲರಹಟ್ಟಿ, ಸುಬ್ಬಣ್ಣ ಗಾರ್ಡನ್‌, ನಾಯಂಡನಹಳ್ಳಿ, ಕಾಮಾಕ್ಷಿಪಾಳ್ಯ, ರಂಗನಾಥಪುರ, ಗೋವಿಂದರಾಜ ನಗರ, ಕೆಎಚ್‌ಬಿ ಕಾಲೋನಿ, ಮೂಡಲಪಾಳ್ಯ, ಆದರ್ಶ ನಗರ, ಬಿಡಿಎ ಲೇಔಟ್‌, ಮುನೇಶ್ವರ ನಗರ, ಕೊಡಿಗೇಹಳ್ಳಿ, ಅಮೃತಹಳ್ಳಿ, ಕೋಗಿಲು, ಜೆಪಿ ಪಾರ್ಕ್, ಯಶವಂತಪುರ, ಸದ್ದಗುಂಟೆ ಪಾಳ್ಯ, ಕಸವನಹಳ್ಳಿ, ಕೊನೇನ ಅಗ್ರಹಾರ, ಸುಧಾಮ ನಗರ, ಮುರುಗೇಶ್‌ ಪಾಳ್ಯ, ಎಚ್‌ಆರ್‌ಬಿಆರ್‌ ಲೇಔಟ್‌, ನಾಗವಾರ, ಬಾಲಾಜಿ ಲೇಔಟ್‌, ಬಿಜಿಎಸ್‌ ಲೇಔಟ್‌, ಎಸ್‌ಬಿಎಂ ಕಾಲೋನಿ, ಬಿಟಿಎಸ್‌ ಬಡಾವಣೆ.

ಸಾರ್ವಭೌಮ ನಗರ, ಹುಳಿಮಾವು, ಬಂಡೆಪಾಳ್ಯ, ಸರಸ್ವತಿಪುರಂ, ರಾಘವೇಂದ್ರ ಲೇಔಟ್‌, ಸಿಂಡಿಕೇಟ್‌ ಬ್ಯಾಂಕ್‌ ಕಾಲೋನಿ, ರಾಮಯ್ಯ ಲೇಔಟ್‌, ಪ್ರಗತಿ ಬಡಾವಣೆ, ಸಿಲ್ಕ್‌ಬೋರ್ಡ್‌ ಕಾಲೋನಿ, ಮಂಗಮ್ಮನಪಾಳ್ಯ, ಸಿಂಗಸಂದ್ರ, ದೇವರಚಿಕ್ಕನಹಳ್ಳಿ, ಲಕ್ಷ್ಮೇನಾರಾಯಣಪುರ, ಸೋಮಸುಂದರ ಪಾಳ್ಯ, ದೊಡ್ಡಾನೆಕುಂದಿ, ಗರುಡಾಚಾರ್‌ಪಾಳ್ಯ, ಸಪ್ತಗಿರಿ ಲೇಔಟ್‌, ಮುನೆನಕೊಳಲು, ಇಸ್ರೋ ಲೇಔಟ್‌, ಬೃಂದಾವನ ನಗರ, ತಿಗಳರಪಾಳ್ಯ, ಅಕ್ಷಯ ನಗರ, ರಮೇಶ್‌ ನಗರ, ಅನ್ನಸಂದ್ರಪಾಳ್ಯ, ಪಟಾಲಮ್ಮ ಲೇಔಟ್‌, ಗಾಯತ್ರಿ ಬಡಾವಣೆ, ಮಂಜುನಾಥ್‌ ನಗರ, ರಾಮಾಂಜನೇಯ ಲೇಔಟ್‌, ಮಾರೇನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿತ್ತು.
 

PREV
Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!