ಬೆಂಗ್ಳೂರಲ್ಲಿ ಅಗ್ನಿ ದುರಂತ: ಹೊತ್ತಿ ಉರಿದ ಸಾಫ್ಟ್‌ವೇರ್‌ ಬಿಲ್ಡಿಂಗ್‌

By Suvarna NewsFirst Published Mar 6, 2022, 7:28 AM IST
Highlights

*  ಮಾರತ್ತಹಳ್ಳಿಯ ಕಾರ್ತಿಕ್ ನಗರದಲ್ಲರುವ ಟೆಕ್ ಪಾರ್ಕ್‌
*  ಹೊತ್ತಿ ಉರಿದ ಕಟ್ಟಡದ ಒಳಭಾಗ 
*  ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಸಂಭವಿಸಿಲ್ಲ 
 

ಬೆಂಗಳೂರು(ಮಾ.06): ಮಾರತ್‌ಹಳ್ಳಿ ಸಾಫ್ಟ್‌ವೇರ್(Software) ಕಟ್ಟಡದಲ್ಲಿ ಅಗ್ನಿ ದುರಂತ(Fire) ಸಂಭವಿಸಿದ ಪರಿಣಾಮ ಕಟ್ಟಡದ ಒಳಭಾಗ ಹೊತ್ತಿ ಉರಿದ ಘಟನೆ ನಿನ್ನೆ(ಶನಿವಾರ) ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ. ನಾಲ್ಕು ಅಂತಸ್ತಿನ  ಕಟ್ಟಡಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನಾ ಸ್ಥಳಕ್ಕೆ ಎಂಟು ಅಗ್ನಿಶಾಮಕ ವಾಹನದಿಂದ ಅಗ್ನಿ ನಂದಿಸುವ ಕಾರ್ಯ ನಡೆಯುತ್ತಿದೆ.

ಮಾರತ್ತಹಳ್ಳಿಯ ಕಾರ್ತಿಕ್ ನಗರದಲ್ಲರುವ ಟೆಕ್ ಪಾರ್ಕ್‌ನ ನಿರ್ಮಾಣ ಹಂತದಲ್ಲಿರೋ ಕಟ್ಟಡಕ್ಕೆ ಬೆಂಕಿ ತಗುಲಿದೆ. ಶಾರ್ಟ್ ಸರ್ಕ್ಯೂಟ್‌ನಿಂದ(Short Circuit) ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಹತ್ತು ಅಗ್ನಿಶಾಮಕ ವಾಹನಗಳ ಜೊತೆ ಲ್ಯಾಡರ್ ಬಳಿಸಿ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ದಳದ(Fire Department) ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

Latest Videos

Mangaluru: ಕಂತು ಕಟ್ಟುವಂತೆ ಫೈನಾನ್ಸ್ ಕಂಪನಿ ಕಿರಿಕಿರಿ, ಬೈಕ್‌ಗೆ ಬೆಂಕಿ ಹಚ್ಚಿದ ಮಾಲಿಕ

ಏಳು ಅಂತಸ್ಥಿನ ಸಾಫ್ಟ್‌ವೇರ್ ಕಂಪೆನಿ ಒಳಂಗಾಣ ವಿನ್ಯಾಸ ನಡೆಯುತ್ತಿತ್ತು. ಐದು ಮತ್ತು ಆರನೇ  ಅಂತಸ್ಥಿನಲ್ಲಿ ಥರ್ಮಾಕೋಲ್ ಸೇರಿದಂತೆ ಹಲವು ಒಳಂಗಾಣ ವಿನ್ಯಾಸದ ವಸ್ತುಗಳು ಇದ್ದವು ಎಂಬ ಮಾಹಿತಿ ಲಭ್ಯವಾಗಿದೆ. 
ರಾತ್ರಿ 10 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳೀಯರ ಮಾಹಿತಿ ಮೇರೆಗೆ 11 ಅಗ್ನಿಶಾಮಕ ವಾಹನಗಳ 30ಕ್ಕೂ ಹೆಚ್ಚು ಸಿಬ್ಬಂದಿ ಸತತ ಮೂರು ಗಂಟೆಗಳ ನಿರಂತರ ಅಗ್ನಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಏರಿಯಲ್ ಲ್ಯಾಡರ್ ಮುಖಾಂತರ ಐದು ಮತ್ತು ಆರನೇ ಅಂತಸ್ಥಿನಲ್ಲಿ ಬೆಂಕಿ‌ ನಂದಿಸುವ ಕಾರ್ಯ ನಡೆದಿದೆ. ಮಾರತ್‌ಹಳ್ಳಿ ಪೊಲೀಸ್(Police) ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಬೆಂಕಿ ನಂದಿಸುವ ವೇಳೆ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಆಯ ತಪ್ಪಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ನಾಲ್ಕನೇ ಅಂತಸ್ಥಿನಿಂದ ಅಗ್ನಿಶಾಮಕ ಸಿಬ್ಬಂದಿ ಬಿದ್ದಿದ್ದಾರೆ. ಮಹದೇವಪುರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ವಿನಯ್ ಎಂಬುವರೇ ಕಾರ್ಯಾಚರಣೆ ವೇಳೆ ಆಯ ತಪ್ಪಿ ನಾಲ್ಕನೇ ಅಂತಸ್ಥಿನಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. 

ನಾಲ್ಕನೆ ಮಹಡಿಯಿಂದ ಬಿದ್ದ ಪರಿಣಾಮ ವಿನಯ್ ಅವರ ಕೈ, ಕಾಲು ಹಾಗೂ ತಲೆಗೆ ಪೆಟ್ಟಾಗಿದೆ. ಸದ್ಯ ವಿನಯ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಸಂಭವಿಸಿಲ್ಲ. 

ಮುಂಬೈನ ಅಪಾರ್ಟ್‌ಮೆಂಟ್‌ನ 10 ನೇ ಮಹಡಿಯಲ್ಲಿ ಭಾರಿ ಬೆಂಕಿ, ಅಗ್ನಿಶಾಮಕ ದಳ ಸ್ಥಳಕ್ಕೆ ದೌಡು

ಮುಂಬೈ: ಮಹಾರಾಷ್ಟ್ರದ ಮುಂಬೈನ ಕಂಜುರ್‌ಮಾರ್ಗ್‌ನಲ್ಲಿರುವ ಎನ್‌ಜಿ ರಾಯಲ್ ಪಾರ್ಕ್ ಪ್ರದೇಶದಲ್ಲಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಫೆ.28 ರಂದು ನಡೆದಿತ್ತು. ಘಟನೆ ಕುರಿತು ಮಾಹಿತಿ ಪಡೆದ ಅಗ್ನಿಶಾಮಕ ದಳದ 10 ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿವೆ. ಎಎನ್‌ಐ ಪ್ರಕಾರ, ಕಟ್ಟಡದ ಮೇಲ್ಭಾಗದ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪೊಲೀಸರ ಪ್ರಕಾರ, ಎನ್‌ಜಿ ರಾಯಲ್ ಪಾರ್ಕ್ ಏರಿಯಾ ಸೊಸೈಟಿಯ ಬಿ ವಿಂಗ್‌ನ ಒಂಬತ್ತನೇ ಮತ್ತು ಹತ್ತನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅಗ್ನಿಶಾಮಕ ದಳ ಸಕಾಲಕ್ಕೆ ಆಗಮಿಸಿದ್ದರಿಂದ ಬೆಂಕಿ ಇತರ ಫ್ಲಾಟ್‌ಗಳಿಗೆ ತಲುಪಲು ಸಾಧ್ಯವಾಗಲಿಲ್ಲ. ಬೆಂಕಿಯನ್ನು ಹತೋಟಿಗೆ ತರಲಾಯಿತು. ಹೆಚ್ಚಿನ ಅಪಾಯವನ್ನು ತಪ್ಪಿಸಲಾಯಿತು. ಯಾವುದೇ ಸಾವು-ನೋವಿನ ವರದಿಯಾಗಿಲ್ಲ.

ಅಗ್ನಿ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ

ಕಟ್ಟಡದಲ್ಲಿ ಇಂತಹ ಅವಘಡ ಸಂಭವಿಸುತ್ತಿರುವುದು ಇದೇ ಮೊದಲಲ್ಲ. ಜನವರಿಯಲ್ಲಿ ತಾರ್ಡಿಯೊ ಪ್ರದೇಶದ ಭಾಟಿಯಾ ಆಸ್ಪತ್ರೆ ಬಳಿಯ ಕಮಲಾ ಸೊಸೈಟಿಯಲ್ಲಿ ಸಂಭವಿಸಿದ ಬೆಂಕಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಜನವರಿ 22, 2022 ರಂದು ಬೆಳಿಗ್ಗೆ 7.30 ಕ್ಕೆ 20 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತು. ಈ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. 12 ಜನರು ಸುಟ್ಟುಹೋದರು. ಜನವರಿ 22 ರಂದು ಬೆಳಿಗ್ಗೆ 7.30 ಕ್ಕೆ ಮುಂಬೈನ ಘಟದ್ದೇವ್ ಪ್ರದೇಶದಲ್ಲಿರುವ ಕಮಲಾ ಸೊಸೈಟಿಯ 20 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತು. ಈ ಬೆಂಕಿ ಅವಘಡದಲ್ಲಿ ಇಲ್ಲಿಯವರೆಗೆ 7 ಮಂದಿ ಸಾವನ್ನಪ್ಪಿದ್ದಾರೆ. 12 ಮಂದಿ ಸುಟ್ಟು ಕರಕಲಾಗಿದ್ದರು. 
 

click me!