ಸಿದ್ದರಾಮಯ್ಯ ಆಡಳಿತದಲ್ಲಿ ಒಂದೇ ಸಮುದಾಯದ 23 ಜನರ ಹತ್ಯೆಯಾಗಿದೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

By Gowthami K  |  First Published Jan 6, 2023, 3:57 PM IST

ಪರೇಶ್ ಮೆಸ್ತಾ ಸಹಜ ಸಾವೆಂದು ಸಿಬಿಐ ವರದಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ   ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಸಾಕ್ಷ್ಯ ಕೊರತೆಯಿಂದಾಗಿ ಕೆಲವು ಬಾರಿ ಈ ರೀತಿ ಆಗುತ್ತದೆ. ಸಾಕ್ಷ್ಯ ಇಲ್ಲ ಎಂದು ಬಿ ರಿಪೋರ್ಟ್ ಹಾಕಲಾಗಿರುತ್ತದೆ.   ಸಿದ್ದರಾಮಯ್ಯನವರ ಆಡಳಿತದ ವೇಳೆ ಬಿಜೆಪಿ ಕಾರ್ಯಕರ್ತರು ಸೇರಿ ಒಂದೇ ಸಮುದಾಯದ 23 ಜನರ ಹತ್ಯೆಯಾಗಿದೆ ಎಂದಿದ್ದಾರೆ.


ಕೊಡಗು (ಜ.6): ಪರೇಶ್ ಮೆಸ್ತಾ ಸಹಜ ಸಾವೆಂದು ಸಿಬಿಐ ವರದಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ  ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಸಾಕ್ಷ್ಯ ಕೊರತೆಯಿಂದಾಗಿ ಕೆಲವು ಬಾರಿ ಈ ರೀತಿ ಆಗುತ್ತದೆ. ಸಾಕ್ಷ್ಯ ಇಲ್ಲ ಎಂದು ಬಿ ರಿಪೋರ್ಟ್ ಹಾಕಲಾಗಿರುತ್ತದೆ. ಹಾಗೆಂದು ಸತ್ತಿದ್ದು ಸುಳ್ಳೆಂದು ಅಲ್ಲ. ಸಿದ್ದರಾಮಯ್ಯನವರ ಆಡಳಿತದ ವೇಳೆ ಬಿಜೆಪಿ ಕಾರ್ಯಕರ್ತರು ಸೇರಿ ಒಂದೇ ಸಮುದಾಯದ 23 ಜನರ ಹತ್ಯೆಯಾಗಿದೆ. ಮೂಡುಬಿದಿರೆಯಲ್ಲಿ ಪ್ರಶಾಂತ್ ಪೂಜಾರಿಯನ್ನು ಹತ್ಯೆ ಮಾಡಲಾಯಿತು. ಸಾಕ್ಷ್ಯ ಇಲ್ಲದಿದ್ದರೆ ಏನಾಗುತಿತ್ತು. ಗಣಪತಿ ದೇವಾಸ್ಥಾನ ವಿಚಾರದಲ್ಲಿ ಮೈಸೂರಿನಲ್ಲಿ ಕ್ಯಾತನಹಳ್ಳಿ ರಾಜುವನ್ನು ನಡುರಸ್ತೆಯಲ್ಲಿ ಕೊಚ್ಚಿ ಅಟ್ಟಹಾಸ ಮೆರೆದರು. ಇದಕ್ಕೆ ಸಾಕ್ಷ್ಯ ಇಲ್ಲದಿದ್ದರೂ ಸುಳ್ಳೆಂದು ಹೇಳುತ್ತಿದ್ದರು. ಸಂಘದ ಸಮವಸ್ತ್ರದಲ್ಲಿ ಪಥ ಸಂಚಲನ ಮುಗಿಸಿ ಬರುತಿದ್ದ ರುದ್ರೇಶ್ ಹತ್ಯೆಯಾಯಿತು. ಇದಕ್ಕೆಲ್ಲಾ ನೋಡಿದ ಸಾಕ್ಷ್ಯಗಳಿಲ್ಲದಿದ್ದರೆ ಏನಾಗುತಿತ್ತು. ಇದಕ್ಕೆಲ್ಲಾ ಸಾಕ್ಷಿಗಳಿಲ್ಲದ ಕಾರಣಕ್ಕೆ ಸಾವೇ ಆಗಿಲ್ಲ ಎಂದಲ್ಲ. ಹೀಗಾಗಿ ಪರೇಶ್ ಮೆಸ್ತಾ ತಂದೆ ಸಿಎಂ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಪುನರ್ ತನಿಖೆಗೆ ಮನವಿ ಮಾಡಿದ್ದಾರೆ. ಒಬ್ಬ ತಂದೆಯ ಭಾವನೆಯನ್ನು ಅರಿತು ಸಿಎಂ ಪುನರ್ ತನಿಖೆಗೆ ಆದೇಶಿಸಿದ್ದಾರೆ ಎಂದು ಕೊಡಗಿನ ಕುಶಾಲನಗರದಲ್ಲಿ  ಹೇಳಿಕೆ ನೀಡಿದ್ದಾರೆ.

ತೀವ್ರ ವಿವಾದ, ಸಂಘರ್ಷಕ್ಕೆ ಕಾರಣವಾಗಿದ್ದ ಹೊನ್ನಾವರದ ಮೀನುಗಾರ ಯುವಕ ಪರೇಶ್‌  ಮೇಸ್ತಾನದು ಕೊಲೆಯಲ್ಲ, ಆಕಸ್ಮಿಕ ಸಾವು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ  ಕಳೆದ 2022ರ ಅಕ್ಟೋಬರ್ 3ರಂದು ವರದಿ ಸಲ್ಲಿಸಿತ್ತು. ಮೇಸ್ತಾ ಸಾವಿನಲ್ಲಿ ಆರೋಪ ಎದುರಿಸುತ್ತಿರುವವರ ಪಾತ್ರದ ಕುರಿತು ಯಾವುದೇ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಮರಣೋತ್ತರ ಪರೀಕ್ಷೆ ಸೇರಿ ವಿವಿಧ ವರದಿಗಳು ಮೇಸ್ತಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆಂದು ಹೇಳುತ್ತಿವೆ ಎಂದು ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ಮೇಸ್ತಾನದು ಸಹಜ ಸಾವು ಎಂದು ವರದಿ ತಿಳಿಸಿದೆ. 

Tap to resize

Latest Videos

undefined

2017ರ ಡಿಸೆಂಬರ್‌ 6ರಂದು ಹೊನ್ನಾವರದಲ್ಲಿ ನಡೆದ ಗಲಭೆಯೊಂದು ಕೋಮುಸಂಘರ್ಷಕ್ಕೆ ತಿರುಗಿ ಘಟನಾ ಸ್ಥಳದಲ್ಲಿದ್ದ ಪರೇಶ್‌ ಮೇಸ್ತಾ ಕಾಣೆಯಾಗಿದ್ದ. ಬಳಿಕ ಡಿ.8ರಂದು ನಗರದ ಶನಿ ದೇವಸ್ಥಾನದ ಹಿಂಭಾಗದ ಶೆಟ್ಟಿಕೆರೆಯಲ್ಲಿ ಮೇಸ್ತಾ ಮೃತದೇಹ ಪತ್ತೆಯಾಗಿತ್ತು. ಅಷ್ಟರಲ್ಲಾಗಲೇ ಕರಾವಳಿ ಭಾಗದಲ್ಲಿ ಕೋಮುಗಲಭೆಯಿಂದಾಗಿ ಕೆಲ ಹಿಂದೂ ಯುವಕರ ಹತ್ಯೆ ನಡೆದಿದ್ದ ಹಿನ್ನೆಲೆಯಲ್ಲಿ ಮೇಸ್ತಾನನ್ನು ಕೂಡ ಅನ್ಯಕೋಮಿನವರೇ ಹತ್ಯೆ ಮಾಡಿದ್ದಾರೆಂದು ಆರೋಪಿ ಹಿಂದೂ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ಹೊರಹಾಕಿದ್ದರು.

Paresh Mesta Murder case: ಬಿಜೆಪಿಗೆ ಬಿಸಿಮುಟ್ಟಿಸಲು ಕಾಂಗ್ರೆಸ್‌ Rally

ಪರೇಶ್‌ ಮೇಸ್ತಾ ಸಾವು ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ನಂತರ ನಡೆದ ಪ್ರತಿಭಟನೆ ವೇಳೆಯಲ್ಲಂತೂ ಉತ್ತರ ಕನ್ನಡ ಹೊತ್ತಿ ಉರಿದಿತ್ತು. ಕುಮಟಾ, ಹೊನ್ನಾವರ, ಶಿರಸಿ ಮತ್ತಿತರ ಕಡೆ ನಡೆದ ಗಲಭೆಯಲ್ಲಿ ಹಲವು ವಾಹನಗಳಿಗೆ ಬೆಂಕಿ ಹಾಕಲಾಗಿತ್ತು. ಲಾಠಿ ಪ್ರಹಾರ ನಡೆದು ಹಲವರಿಗೆ ಗಾಯಗಳೂ ಆಗಿತ್ತು. ನೂರಾರು ಜನರ ವಿರುದ್ಧ ಪ್ರಕರಣ ದಾಖಲಾಯಿತು. ಕುಮಟಾದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಆಗಿನ ಐಜಿಪಿಯವರ ಕಾರನ್ನೇ ಬುಡಮೇಲು ಮಾಡಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು.

Ground Report: ಉತ್ತರ ಕನ್ನಡ ಜಿಲ್ಲೆಯಲ್ಲಿ ಟಿಕೆಟ್‌ ಫೈಟ್‌, ಪರೇಶ್‌ ಮೇಸ್ತಾ ಸಾವು ಅಸ್ತ್ರ

ಬಿಜೆಪಿ ನಾಯಕ ಅಮಿತ್‌ ಶಾ ಹೊನ್ನಾವರಕ್ಕೆ ಅಗಮಿಸಿ ಮೇಸ್ತಾ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರಿಂದ ವ್ಯಕ್ತವಾದ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಅಂದಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. 

click me!