Chamarajanagar: ನಮ್ ಓಟು ಬೇಕಂದ್ರೆ ಮೊದಲು ಸೇತುವೆ ನಿರ್ಮಿಸಿಕೊಡಿ; ಕಾಡಂಚಿನ ಗ್ರಾಮಸ್ಥರ ಎಚ್ಚರಿಕೆ

By Ravi Janekal  |  First Published Jan 6, 2023, 2:20 PM IST
  • ಉಡುತೊರೆಹಳ್ಳಕ್ಕೆ ಹೊಸ ಸೇತುವೆ ನಿರ್ಮಿಸಿಕೊಡಿ
  • ಈ ಸಲ ನಮ್ ಓಟ್ ಬೇಕು ಅಂದ್ರೆ ಸೇತುವೆ ಮಾಡ್ಸಿ 
  • ಸೇತುವೆ ಮಾಡ್ಸಿದ್ರೆ ಓಟ್ ಹಾಕ್ತೀವಿ 
  • ಜನಪ್ರತಿನಿಧಿಗಳ ವಿರುದ್ದ ಕಾಡಂಚಿನ ಜನರ ಆಕ್ರೋಶ..

ವರದಿ - ಪುಟ್ಟರಾಜು. ಆರ್. ಸಿ.  ಏಷಿಯಾನೆಟ್  ಸುವರ್ಣ ನ್ಯೂಸ್,  ಚಾಮರಾಜನಗರ

ಚಾಮರಾಜನಗರ (ಜ.6):  'ಸಾರ್. ಸೇತುವೆ ನಿರ್ಮಿಸಿ ಕೊಡಿ' ಇದು ಕಾಡಂಚಿನ ಜನರ ನಿತ್ಯದ ಗೋಳು. ತೂತು ಬಿದ್ದಿರೋ ಸೇತುವೆ ಮೂಲಕ  ಸಂಚರಿಸಲು ತೊಂದರೆಯಾಗ್ತಿದೆ. ಹೀಗಾಗಿ ಈ ಬಾರಿ ರೊಚ್ಚಿಗೆದ್ದಿರುವ ಗ್ರಾಮಸ್ಥರು ಒಂದು ನಿರ್ಧಾರಕ್ಕೆ ಬಂದಿದ್ದಾರೆ.  ಮುಂದಿನ ಚುನಾವಣೆಗೆ ಓಟ್ ಬೇಕು ಅಂದ್ರೆ ಸೇತುವೆ ಮಾಡಿಕೊಡಿ, ಇಲ್ಲದಿದ್ರೆ ಮತ ಚಲಾಯಿಸಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸೇತುವೆ ನಿರ್ಮಿಸದಿದ್ರೆ ಹೆಣ್ಮಕ್ಕಳೇ ಸ್ಟ್ರಾಂಗು ಅನ್ನೋದ್ನ ಪ್ರೂವ್ ಮಾಡಬೇಕಾಗುತ್ತೆ ಅಂತಾ ಕಾಡಂಚಿನ ಜನರ ದುಸ್ಥಿತಿಯನ್ನು ವಿದ್ಯಾರ್ಥಿಯೊಬ್ಬಳು  ಆಕ್ರೋಶ ಹೊರಹಾಕಿದ್ದಾಳೆ.

Tap to resize

Latest Videos

undefined

ಚಾಮರಾಜನಗರ(Chamarajanagara) ಜಿಲ್ಲೆಯ ಹನೂರು(Hanooru) ತಾಲೂಕಿನ ಉಡುತೊರೆಹಳ್ಳ(udutorehalla)ಕ್ಕೆ ಹೊಸ ಸೇತುವೆ ನಿರ್ಮಿಸಿಕೊಡಿ ಎಂದು ಸ್ಥಳೀಯರು ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಲಿಲ್ಲ. ನಿತ್ಯ ವಾಹನಗಳು ಕೂಡ ಸಾಕಷ್ಟು ಪ್ರಮಾಣದಲ್ಲಿ ಸಂಚಾರ ಕೂಡ ಮಾಡ್ತೀವೆ. ಈಗ ಇರುವ ಸೇತುವೆ ತುಂಬಾ ಶಿಥಿಲವಾಗಿದ್ದು ತಡೆಗೋಡೆ ಸಹ ಇರುವುದಿಲ್ಲ ಮಳೆಗಾಲದಲ್ಲಿ ರಸ್ತೆ ಮೇಲೆ ನದಿಯಂತೆ ನೀರು ಹರಿಯುವುದರಿಂದ ಸಂಚಾರ ಕೂಡ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತೆ. ರಸ್ತೆ ಕೂಡ ತುಂಬಾ ಹಾಳಾಗಿದ್ದು ವಾಹನ ಸಂಚಾರ ದುಸ್ತರವಾಗಿದೆ. ಬಸ್ ಕೂಡ ಇದೇ ರಸ್ತೆಯಲ್ಲಿ ಓಡಾಡಬೇಕಾದ ಪರಿಸ್ಥಿತಿಯಿದೆ. ಹೀಗಾಗಿ ಸ್ಥಳೀಯರು ಈ ಈ ಬಾರಿ ಸೇತುವೆ ನಿರ್ಮಿಸಿದರೆ ಮಾತ್ರ ಓಟು ನೀಡುವ ನಿರ್ಧಾರಕ್ಕೆ ಬಂದಿದ್ದಾರೆ. 

ಶಾಲಾ ಮಕ್ಕಳಿಗೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಜಾಗೃತಿ: ಬಂಡೀಪುರ ಯುವ ಮಿತ್ರ ಯೋಜನೆಗೆ ಚಾಲನೆ

ಚುನಾವಣೆ ವೇಳೆ ಓಟು ಕೇಳಲು ಬರುವ ಜನಪ್ರತಿನಿಧಿಗಳು ಗೆದ್ದ ಮೇಲೆ ಇತ್ತಕಡೆ ಸುಳಿದಿಲ್ಲ. ಜನರ ಗೋಳು ಕೇಳಿಲ್ಲ. ಈ ಬಾರಿ ಮತ್ತೆ ಮೋಸ ಹೋಗುವುದಿಲ್ಲ. ಸೇತುವೆ ನಿರ್ಮಿಸಿ ಕೊಟ್ಟರೆ ಮಾತ್ರ ಓಟು ಹಾಕವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗ್ಲೇ ಗುಂಡಿ ಬಿದ್ದು ಸೇತುವೆ ಅಪಾಯದಂಚಿನಲ್ಲಿದೆ. ಈ ಗುಂಡಿಯಿಂದ ಅಪಘಾತ ಕೂಡ ಸಂಭವಿಸಿದೆ. ಅದ್ರೂ ಕೂಡ ಯಾಕೆ ಸೇತುವೆ ನಿರ್ಮಿಸಿಕೊಡ್ತಿಲ್ಲ ಅಂತಾ  ಗ್ರಾಮಸ್ಥರು  ಪ್ರಶ್ನಿಸ್ತಿದ್ದಾರೆ.

ಇನ್ನೂ ನಿತ್ಯ ಈ ಸೇತುವೆ ದಾಟಿಯೇ ನೂರಾರು ಮಕ್ಕಳು ಶಾಲೆಗೆ ಹೋಗಬೇಕಾದ ಪರಿಸ್ಥಿತಿಯಿದೆ. ಈ ವೇಳೆ ದುರಂತ ನಡೆದರೆ ಯಾರು ಹೊಣೆ? ಜನಪ್ರತಿನಿಧಿಗಳೆ ನಿಮ್ಮ ಕಣ್ಣೇನು ಕುರುಡೇ? ಇದೆಲ್ಲ ಸಮಸ್ಯೆ ಕಾಣ್ತಿಲ್ವ? ಎಂದು ವಿದ್ಯಾರ್ಥಿನಿಯೊಬ್ಬಳು ಆಕ್ರೋಶ ವ್ಯಕ್ತಪಡಿಸಿದ್ದಾಳೆ.

 ನಮಗೆ ವಿದ್ಯಾಭ್ಯಾಸಕ್ಕೆ ಯಾವುದೇ ಸೌಲಭ್ಯ ಸಿಗ್ತಾ ಇಲ್ಲ.  ಓದಿ ಓದಿ ಅಂದ್ರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ವಿದ್ಯಾರ್ಥಿನಿ, ರಸ್ತೆ, ನೀರು, ಸಾರಿಗೆ ಸಂಪರ್ಕ ಸುಸ್ಥಿತಿಯಲ್ಲಿಲ್ಲದ ಇಂಥ ಹಳ್ಳಿಯಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಬದುಕುವುದು ಹೇಗೆ ಎಂದು ಜನಪ್ರತಿನಿಧಿಗಳನ್ನು ಪ್ರಶ್ನಿಸಿದ್ದಾಳೆ.  

Chamarajanagara: ದೇವರೇ ನನ್ನ ಮೂರ್ತಿಯೇ ನನ್ನ ಕುತ್ತಿಗೆಗೆ ತಾಳಿ ಕಟ್ಟಲಿ: ದೇವರ ಹುಂಡಿಯಲ್ಲಿ ವಿಚಿತ್ರ ಹರಕೆ ಪತ್ರ

ಒಟ್ಟಾರೆ ಗ್ರಾಮಕ್ಕೆ ಸೇತುವೆ ನಿರ್ಮಿಸುವಂತೆ ಹಲವು ಬಾರಿ ಬೇಡಿಕೆ ಇಟ್ಟರೂ ಕೂಡ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು ಇದರ ಬಗ್ಗೆ ದಿವ್ಯನಿರ್ಲಕ್ಷ್ಯವಹಿಸಿದ್ದಾರೆ. ಕಾಡಂಚಿನ ಜನರು ಮೊದ್ಲೇ ಶೋಚನೀಯ ಪರಿಸ್ಥಿತಿಯಲ್ಲಿದ್ದಾರೆ. ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತು ಅಧಿಕಾರಿಗಳು, ಜನಪ್ರತಿನಿಧಿಗಳು ಸೇತುವೆ ನಿರ್ಮಿಸಿ ಕೊಡಲಿ ಅನ್ನೋದೆ ನಮ್ಮ ಆಶಯ

click me!