ಕಾಂಗ್ರೆಸ್ಸಿಗರ ಕಾಲದಲ್ಲಿ ಡಿನೋಟಿಫಿಕೇಶನ್‌ ಇರಲಿಲ್ಲವೇ?: ಈಶ್ವರಪ್ಪ

By Kannadaprabha News  |  First Published Dec 25, 2020, 3:41 PM IST

ಕಾಂಗ್ರೆಸ್‌ ನಾಯಕರು ವಿಪಕ್ಷದಲ್ಲಿರಲು ಅಯೋಗ್ಯರು| ಕಾಂಗ್ರೆಸ್‌ ಅವಧಿಯಲ್ಲಿ ಡಿನೋಟಿಫೈ ಆಗಿರಲಿಲ್ಲವೇ ಆಗ ಅವರು ರಾಜೀನಾಮೆ ಕೊಟ್ಟಿದ್ದರೆ?| ಈಗ ಕಾಂಗ್ರೆಸ್‌ನವರಿಗೆ ರಾಜೀನಾಮೆ ಕೇಳಲು ಯಾವ ನೈತಿಕತೆ ಇದೆ: ಈಶ್ವರಪ್ಪ| 


ಶಿವಮೊಗ್ಗ(ಡಿ.25): ಡಿನೋಟಿಫಿಕೇಷನ್‌ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ರಾಜೀನಾಮೆ ಕೇಳುತ್ತಿರುವ ಕಾಂಗ್ರೆಸ್‌ ನಾಯಕರ ವಿರುದ್ಧ ಹರಿಹಾಯ್ದಿರುವ ಸಚಿವ ಕೆ.ಎಸ್‌.ಈಶ್ವರಪ್ಪ, ಕಾಂಗ್ರೆಸ್ಸಿಗರು ವಿರೋಧ ಪಕ್ಷದಲ್ಲಿರಲು ಅಯೋಗ್ಯರು. ಇವರ ಕಾಲದಲ್ಲಿ ಡಿನೋಟಿಫಿಕೇಷನ್‌ ಆಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಅವಧಿಯಲ್ಲಿ ಡಿನೋಟಿಫೈ ಆಗಿರಲಿಲ್ಲವೇ ಆಗ ಅವರು ರಾಜೀನಾಮೆ ಕೊಟ್ಟಿದ್ದರೆ? ಈಗ ಕಾಂಗ್ರೆಸ್‌ನವರಿಗೆ ರಾಜೀನಾಮೆ ಕೇಳಲು ಯಾವ ನೈತಿಕತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

ಬಿಜೆಪಿಗೆ ಕುಮಾರಸ್ವಾಮಿ ಬೆಂಬಲ: ಪಕ್ಷದ ನಡೆಗೆ ಸಿಡಿದೆದ್ದ ಮತ್ತೋರ್ವ ಜೆಡಿಎಸ್ ನಾಯಕ...!

ಪ್ರಕರಣಕ್ಕೆ ಮತ್ತೆ ಜೀವ ಬಂದಿದೆಯಷ್ಟೇ. ಅದನ್ನೇ ಮುಂದಿಟ್ಟುಕೊಂಡು ರಾಜೀನಾಮೆ ಕೇಳುತ್ತಿರುವ ಕಾಂಗ್ರೆಸ್‌ನವರಿಗೆ ಯಾವ ನೈತಿಕತೆಯೂ ಇಲ್ಲ. ನ್ಯಾಯಾಲಯದಲ್ಲಿ ನಮಗೆ ಮತ್ತೆ ಜಯ ಸಿಗುವ ವಿಶ್ವಾಸವಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ನೂರಕ್ಕೆ ನೂರರಷ್ಟು ತಪ್ಪಾಗಿಲ್ಲ. ಹಿಂದೆಯೇ ನ್ಯಾಯಾಲಯಗಳು ತೀರ್ಪು ಕೊಟ್ಟಿವೆ. ಲೋಕಾಯುಕ್ತ ವರದಿ ಬಂದಿವೆ. ಮತ್ತೆ ಅದೇ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಇಲ್ಲಿಯೂ ಯಡಿಯೂರಪ್ಪ ಅವರ ಪರವಾಗಿ ತೀರ್ಪು ಬರಲಿದೆ ಎಂಬ ವಿಶ್ವಾಸವಿದೆ ತಮಗಿದೆ ಎಂದರು.
 

click me!