ನೀವ್ ಗೋಮಾಂಸ ತಿಂತೀರಂತ ಕುರುಬ ಸಮಾಜ ಬೀಫ್ ತಿನ್ನುತ್ತೆ ಅಂತ ಅರ್ಥಾನಾ..? ಸಿದ್ದುಗೆ ಸಿಂಹ ಟಾಂಗ್

Suvarna News   | Asianet News
Published : Dec 25, 2020, 03:33 PM ISTUpdated : Dec 25, 2020, 03:58 PM IST
ನೀವ್ ಗೋಮಾಂಸ ತಿಂತೀರಂತ ಕುರುಬ ಸಮಾಜ ಬೀಫ್ ತಿನ್ನುತ್ತೆ ಅಂತ ಅರ್ಥಾನಾ..? ಸಿದ್ದುಗೆ ಸಿಂಹ ಟಾಂಗ್

ಸಾರಾಂಶ

ಕೊಡವರು ಬೀಫ್ ತಿಂತಾರೆ ಎಂದ ಸಿದ್ದುಗೆ ಪ್ರತಾಪ್ ಸಿಂಹ ಟಾಂಗ್ | ಕೊಡವರು ಗೋಮಾಂಸ ತಿಂತಾರೆ ಅಂದಿದ್ದ ಸಿದ್ದು

ಮೈಸೂರು(ಡಿ.25): ಕೊಡವರು ಗೋಮಾಂಸ ತಿನ್ನುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಅವರ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಅಕ್ಕ ಪಕ್ಕದಲ್ಲಿರುವ ಕೊಡವರು ಯಾರೋ ಗೋಮಾಂಸ ತಿನ್ನಬಹುದು. ಆದ್ರೆ ಅವರ ಕಾರಣಕ್ಕೆ ಇಡೀ ಕೊಡವರನ್ನ ಗೋಮಾಂಸ ತಿನ್ನುತ್ತಾರೆ ಎಂದರೆ ಹೇಗೆ.? ಎಂದು ಪ್ರಶ್ನಿಸಿದ್ದಾರೆ ಸಿಂಹ.

ನೀವು ಗೋಮಾಂಸ ತಿಂತೀರಿ ಅಂತ ಇಡೀ ಕುರುಬ ಸಮಾಜವೇ ಬೀಫ್ ತಿಂತಾರೆ ಅನ್ನೋಕೆ ಆಗುತ್ತಾ? ಎಂದು ಮರು ಪ್ರಶ್ನೆಯ ಮೂಲವೇ ಸಿಂಹ ಸಿದ್ದುಗೆ ಟಾಂಗ್ ಕೊಟ್ಟಿದ್ದಾರೆ.

ಮಾಸ್ಕ್ ಹೆಸರಲ್ಲಿ ಜನರಿಗೆ ತೊಂದರೆ: ಪ್ರತಾಪ್ ಸಿಂಹ ಕಿಡಿ

ಸಿದ್ದರಾಮಯ್ಯ ವಿವೇಚನೆ ಇಲ್ಲದೆ ಯಾಕೆ ಮಾತನಾಡಿದ್ದಾರೆ ಅನ್ನೋದೆ ನನಗೆ ಅರ್ಥ ಆಗಿಲ್ಲ. ಆತ್ಮದ್ರೋಹದ ಮಾತುಗಳನ್ನ ಕಾಂಗ್ರೆಸ್ ನವರು ಮಾತ್ರ ಮಾತನಾಡೋಕೆ ಸಾಧ್ಯ ಎಂದಿದ್ದಾರೆ.

ಕೊಡವರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಗೋಮಾತೆಯನ್ನ ಎರಡನೆ ತಾಯಿಯಾಗಿ ನೋಡುತ್ತಾರೆ. ಕೋಟ್ಯಂತರ ಜನರ ಭಾವನೆಗೆ ಧಕ್ಕೆ ಬರುವಂತೆ ಮಾತನಾಡಬೇಡಿ. ನಿಮ್ಮ ತಪ್ಪಿನ ಅರಿವಾಗಿ ಅದನ್ನ ತಪ್ಪಾಗಿ ಅರ್ಥೈಸಲಾಗಿದೆ ಅಂತ ಹೇಳಿದ್ದೀರಾ. ಆದ್ರೆ ಇನ್ನು ಮುಂದೆ ಕೊಡವರಿಗೆ ನೋವಾಗುವಂತೆ ಮಾತನಾಡಬೇಡಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್‌ಸಿಂಹ ಹೇಳಿದ್ದಾರೆ.

PREV
click me!

Recommended Stories

ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!
ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?