ಬೆಳಗಾವಿ ಉಪಚುನಾವಣೆ| ಬಹುಶಃ ಕೆಲವು ದಿನಗಳಲ್ಲಿ ರಮೇಶ ಮತ್ತು ಬಾಲಚಂದ್ರ ಜಾರಕಿಹೊಳಿ ಪ್ರಚಾರಕ್ಕೆ ಬರಲಿದ್ದಾರೆ| ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಬರುವುದಾಗಿಯೂ ಭರವಸೆ ನೀಡಿದ ಜಾರಕಿಹೊಳಿ ಬ್ರದರ್ಸ್| 4 ಲಕ್ಷ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸುತ್ತಾರೆ: ಜಗದೀಶ ಶೆಟ್ಟರ್|
ಧಾರವಾಡ(ಏ.02): ಈಶ್ವರಪ್ಪ ಅವರು ನೀಡಿದ ದೂರನ್ನು ಮುಖ್ಯಮಂತ್ರಿ ಬಗ್ಗೆಯೇ ಎಂದು ತಿಳಿಯಬಾರದು. ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳ ಬಗ್ಗೆ ಪಕ್ಷದಲ್ಲಿ ಆಂತರಿಕವಾಗಿ ಚರ್ಚಿಸಿ ಬಗೆಹರಿಸಲಾಗುವುದು ಎಂದು ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಗುರುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯವಾಗಿ ಈಶ್ವರಪ್ಪ ಅವರೊಂದಿಗೆ ಮಾತನಾಡಲಾಗುವುದು ಎಂದರು. ಇನ್ನು ಈಶ್ವರಪ್ಪ ಅವರು ರಾಜೀನಾಮೆ ಕೊಡಬೇಕೆಂದು ಸಚಿವರಾದ ಸುಧಾಕರ, ಬಿ.ಸಿ. ಪಾಟೀಲ ಹಾಗೂ ರೇಣುಕಾಚಾರ್ಯ ಇತರ 40 ಶಾಸಕರಿಂದ ಸಹಿ ಸಂಗ್ರಹ ಮಾಡಿದ್ದಾರೆಂಬ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಶೆಟ್ಟರ್, ಈ ಬಗ್ಗೆ ತಮಗೆ ಮಾಹಿತಿ ಇಲ್ಲ. ಇದ್ದರೂ ಇವೆಲ್ಲವನ್ನೂ ಪಕ್ಷದ ವೇದಿಕೆಯಲ್ಲಿಯೇ ಬಗೆಹರಿಸಿಕೊಳ್ಳುತ್ತೇವೆ ಎಂದರು.
ದೇಶದ ಆಹಾರ ಖಾಸಗಿ ವ್ಯಕ್ತಿಗಳ ತಿಜೋರಿಯಲ್ಲಿ ಭದ್ರ: ಟಿಕಾಯತ್
ಬೆಳಗಾವಿ ಉಪಚುನಾವಣೆಯಲ್ಲಿ ರಮೇಶ ಮತ್ತು ಬಾಲಚಂದ್ರ ಜಾರಕಿಹೊಳಿಗೆ ಪ್ರಚಾರಕ್ಕೆ ಬರಲು ಹೇಳಿದ್ದೇವೆ ಎಂದ ಶೆಟ್ಟರ್, ಬಹುಶಃ ಕೆಲವು ದಿನಗಳಲ್ಲಿ ಅವರು ಪ್ರಚಾರಕ್ಕೆ ಬರಲಿದ್ದಾರೆ. ಕೇಸ್ ನಡೆದ ಹಿನ್ನೆಲೆಯಲ್ಲಿ ಅವರಿಗೆ ಬರಲು ಆಗಿಲ್ಲ. ನಾನು ಅವರೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ. ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಬರುವುದಾಗಿಯೂ ಭರವಸೆ ನೀಡಿದ್ದಾರೆ. ಈ ಕ್ಷೇತ್ರದಿಂದ ಅತ್ಯಂತ ಹೆಚ್ಚಿನ ಅಂದರೆ 4 ಲಕ್ಷ ಮತಗಳ ಅಂತರದಿಂದ ಪಕ್ಷದ ಅಭ್ಯರ್ಥಿ ಗೆಲವು ಸಾಧಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.