ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ನಡೆದ ಘಟನೆ| ಬೇಸ್ತುಬಿದ್ದ ಜನ| ನಾಲ್ಕೂ ಬದಿಗೆ ಕಲ್ಲು ನೆಟ್ಟು, ಜಾಗವನ್ನೂ ಅನಧಿಕೃಕತವಾಗಿ ಹದ್ದುಬಸ್ತು ಮಾಡಿಕೊಂಡಿದ್ದ ಕೆಲವು ಜನರು| ತಮಗೆ ಇಷ್ಟ ಬಂದ ಜಾಗ ಕಾಯ್ದಿರಿಸಿಕೊಂಡಿದ್ದ ಜನರು|
ದಾವಣಗೆರೆ(ಏ.02): ನಿವೇಶನ ಕೊಡುತ್ತಾರೆಂಬ ವದಂತಿಗೆ ಕಿವಿಗೊಟ್ಟು ಸ್ಮಶಾನಕ್ಕೆ ಸೇರಿದ ಜಾಗದಲ್ಲಿ ತಮ್ಮ ನಿವೇಶನಕ್ಕಾಗಿ ಗೂಟ ನೆಟ್ಟ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದ ಬಳಿ ಗುರುವಾರ ಬೆಳಗ್ಗೆ ವರದಿಯಾಗಿದೆ.
ಸ್ಮಶಾನ ಜಾಗದಲ್ಲಿ ನಿವೇಶನ ನೀಡುತ್ತಿದ್ದಾರೆಂಬ ಸುದ್ದಿ ಹರಡುತ್ತಿದ್ದಂತೆಯೇ ನೂರಾರು ಜನರು ಗೂಟ, ಹಗ್ಗ, ತಂತಿಗಳ ಸಮೇತ ದೌಡಾಯಿಸಿ ತಮಗೆ ಇಷ್ಟ ಬಂದ ಜಾಗ ಕಾಯ್ದಿರಿಸಿಕೊಂಡರು. ಪುಕ್ಕಟೆ ನಿವೇಶನ ನೀಡಲಾಗುತ್ತದೆ ಎಂದು ಕಿಡಿಗೇಡಿಗಳು ಹರಡಿದ ವದಂತಿಯಿಂದ ಈ ಅವಾಂತರವಾಗಿದ್ದು, ಕೆಲವರು ತಾವು ನಾಲ್ಕೂ ಬದಿಗೆ ಕಲ್ಲು ನೆಟ್ಟು, ಜಾಗವನ್ನೂ ಅನಧಿಕೃಕತವಾಗಿ ಹದ್ದುಬಸ್ತು ಮಾಡಿಕೊಂಡರು.
undefined
ಸೀಡಿ ಕೇಸ್ - ರಾಜ್ಯ ಉಪ ಚುನಾವಣೆ : ವಿಜಯೇಂದ್ರ ಏನೆಂದರು?
ಸುರಹೊನ್ನೆ-ಎರಗನಾಳು ರಸ್ತೆಯಲ್ಲಿರುವ ಸ್ಮಶಾನ ಜಾಗದಲ್ಲಿ ಗುರುವಾರ ನಸುಕಿನಿಂದಲೇ ಜನರು ಏಕಾಏಕಿ ನಾ ಮುಂದು, ತಾ ಮುಂದು ಎಂಬಂತೆ ಸೈಕಲ್, ಸ್ಕೂಟರ್, ಬೈಕ್, ಆಟೋ, ಟ್ರ್ಯಾಕ್ಟರ್‌ಗಳಲ್ಲಿ ಹೋಗಿ ಜಾಗ ಕಾಯ್ದಿರಿಸಿದರು. ಅರಣ್ಯಾಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ತೆರಳಿ ತೆರವುಗೊಳಿಸಿದ್ದರು. ಕೆಲ ದಿನಗಳ ಹಿಂದಷ್ಟೇ ಚನ್ನಗಿರಿ ಪಟ್ಟಣದಲ್ಲೂ ಇದೇ ರೀತಿ ಸುದ್ದಿ ಹರಡಿ ಅರಣ್ಯ ಇಲಾಖೆ ಜಾಗದಲ್ಲಿ ಜನ ಗೂಟ ನೆಟ್ಟಿದ್ದರು.