ಸಚಿವ ಬಿ.ಸಿ. ಪಾಟೀಲ್‌ ಮನೆಗೆ ಹೋಗಿ ಲಸಿಕೆ, ತಾಲೂಕು ಅಧಿಕಾರಿ ಸಸ್ಪೆಂಡ್‌

By Kannadaprabha NewsFirst Published Apr 2, 2021, 11:47 AM IST
Highlights

ಹಿರೇಕೆರೂರಿನ ಸಚಿವರ ಮನೆಗೆ ತೆರಳಿ ಸಚಿವರಿಗೆ ಕೋವಿಡ್‌ ಲಸಿಕೆ ನೀಡಿದ್ದ ಅಧಿಕಾರಿ|  ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ| ಎಲ್ಲರೂ ಕಡ್ಡಾಯವಾಗಿ ಲಸಿಕಾ ಕೇಂದ್ರಕ್ಕೆ ಆಗಮಿಸಿ ಲಸಿಕೆ ಪಡೆದುಕೊಳ್ಳಬೇಕು ಎಂದು ಪ್ರಕಟಣೆ ಹೊರಡಿಸಿದ್ದ ಆರೋಗ್ಯ ಸಚಿವ ಕೆ.ಸುಧಾಕರ್‌| 

ಹಿರೇಕೆರೂರು(ಏ.02):  ಕೃಷಿ ಸಚಿವ ಬಿ.ಸಿ. ಪಾಟೀಲ ಅವರ ಮನೆಗೆ ಹೋಗಿ ಕೋವಿಡ್‌ ಲಸಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಆರೋಗ್ಯಾಧಿಕಾರಿ ಜೆಡ್‌.ಆರ್‌. ಮಕಾನದಾರ ಅವರನ್ನು ಅಮಾನತು ಮಾಡಿ ಆರೋಗ್ಯ ಇಲಾಖೆಯ ಆಯುಕ್ತ ಕೆ.ವಿ. ತ್ರೀಲೋಕಚಂದ್ರ ಆದೇಶ ಹೊರಡಿಸಿದ್ದಾರೆ.

ಮಾ. 2ರಂದು ಹಿರೇಕೆರೂರಿನ ಸಚಿವರ ಮನೆಗೆ ತೆರಳಿ ಸಚಿವರಿಗೆ ಕೋವಿಡ್‌ ಲಸಿಕೆ ನೀಡಲಾಗಿತ್ತು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಯಾಗಿದ್ದವು.  ಸರ್ಕಾರವೇ ಕಡ್ಡಾಯವಾಗಿ ಲಸಿಕಾ ಕೇಂದ್ರಕ್ಕೆ ಆಗಮಿಸಿ ಲಸಿಕೆ ಪಡೆದುಕೊಳ್ಳಬೇಕು ಎಂದು ಸೂಚಿಸಿದರೂ ಸಚಿವರು ಮನೆಯಲ್ಲಿ ಲಸಿಕೆ ಪಡೆಯುವ ಮೂಲಕ ನಿಯಮ ಮೀರಿದ್ದಾರೆಂದು ದೂರಲಾಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ ಸಹ ಯಾರಿಗೂ ಮನೆಯಲ್ಲಿ ಲಸಿಕೆ ಹಾಕಬಾರದು. ಎಲ್ಲರೂ ಕಡ್ಡಾಯವಾಗಿ ಲಸಿಕಾ ಕೇಂದ್ರಕ್ಕೆ ಆಗಮಿಸಿ ಲಸಿಕೆ ಪಡೆದುಕೊಳ್ಳಬೇಕು ಎಂದು ಪ್ರಕಟಣೆ ಹೊರಡಿಸಿದ್ದರು. 

ಮನೆಯಲ್ಲೇ ವ್ಯಾಕ್ಸಿನ್‌ ಪಡೆದ ಸಚಿವ: ಯಾರ ಮನೆಗೂ ಹೋಗಿ ಲಸಿಕೆ ನೀಡುವಂತಿಲ್ಲ ಎಂದ ಸುಧಾಕರ್‌

ಇದಾದ ಬಳಿಕ ಕೆಲ ಸಂಘಟನೆಗಳು ಕರ್ತವ್ಯ ಲೋಪವೆಸಗಿರುವ ಮಕಾನದಾರ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದವು. ಆಗ ಇಲಾಖೆ ಹಿರಿಯ ಅಧಿಕಾರಿಗಳು ಕಾರಣ ಕೇಳಿ ನೋಟಿಸ್‌ ನೀಡಿದ್ದರು. ಈ ವೇಳೆ ಕರ್ತವ್ಯ ಲೋಪ ಎಸಗಿರುವುದು ಹಾಗೂ ಬೇಜವಾಬ್ದಾರಿ ತೋರಿದ್ದರಿಂದ ಅಮಾನತು ಮಾಡಿ ಆರೋಗ್ಯ ಸೇವಾ ಇಲಾಖೆ ಆಯುಕ್ತ ಕೆ.ವಿ. ತ್ರೀಲೋಕಚಂದ್ರ ಆದೇಶ ಹೊರಡಿಸಿದ್ದಾರೆ.
 

click me!