ಹೊಸ ಕೈಗಾರಿಕೆ ಸ್ಥಾಪನೆಯಿಂದ ಉದ್ಯೋಗ ಸೃಷ್ಟಿ: ಸಚಿವ ಶೆಟ್ಟರ್‌

By Kannadaprabha NewsFirst Published Aug 22, 2020, 8:56 AM IST
Highlights

ಬೆಂಗಳೂರು ನಗರ ಹಾಗೂ ಹೊರವಲಯಗಳಲ್ಲಿ ಅತಿಹೆಚ್ಚು ಕೈಗಾರಿಕಾ ಪ್ರದೇಶಗಳಿದ್ದು, ಉಳಿದ ಜಿಲ್ಲೆಗಳಿಗೂ ಮಹತ್ವ ನೀಡುವ ಹೊಸ ಯೋಜನೆ ಮತ್ತು ಆಲೋಚನೆಗಳಿಗೆ ನಾಂದಿ ಹಾಡಲಾಗಿದೆ ಎಂದ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ 
 

ಆನೇಕಲ್‌(ಆ.22): ರಾಜ್ಯದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಹೆಬ್ಬಾಗಿಲು ತೆರೆಯುವ ಮೂಲಕ ಉದ್ಯೋಗಿಗಳ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಬೆಂಗಳೂರು ನಗರ ಹಾಗೂ ಹೊರವಲಯಗಳಲ್ಲಿ ಅತಿಹೆಚ್ಚು ಕೈಗಾರಿಕಾ ಪ್ರದೇಶಗಳಿದ್ದು, ಉಳಿದ ಜಿಲ್ಲೆಗಳಿಗೂ ಮಹತ್ವ ನೀಡುವ ಹೊಸ ಯೋಜನೆ ಮತ್ತು ಆಲೋಚನೆಗಳಿಗೆ ನಾಂದಿ ಹಾಡಲಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.

ಬೊಮ್ಮಸಂದ್ರ ಕೈಗಾರಿಕೆಗಳ ಸಂಘ ನೂತನವಾಗಿ ನಿುರ್‍ಸಿದ ಬೊಮ್ಮಸಂದ್ರ ಕೈಗಾರಿಕಾ ವೃತ್ತ, ಉದ್ಯಾನವನ, ಕಾರಂಜಿ, ಪೊಲೀಸ್‌ ಔಟ್‌ ಪೋಸ್ಟ್‌, ಸಿಗ್ನಲ್‌ ದೀಪಗಳನ್ನು ಉದ್ಘಾಟಿಸಿ ಮಾತನಾಡಿದರು. 

ಹೊಸ ಕೈಗಾರಿಕಾ ನೀತಿ, ಕೈಗಾರಿಕೋದ್ಯಮಿಗಳಿಗೆ ಸಹಕಾರಿ: ಸಚಿವ ಜಗದೀಶ ಶೆಟ್ಟರ್‌

ಬೊಮ್ಮಸಂದ್ರ ಕೈಗಾರಿಕೆಗಳ ಸಂಘದ ಅಧ್ಯಕ್ಷ ಪ್ರಸಾದ್‌, ಸಂಸದ ಡಿ.ಕೆ.ಸುರೇಶ್‌, ಶಾಸಕರಾದ ಎಂ.ಸತೀಶ್‌ರೆಡ್ಡಿ, ಬಿ.ಶಿವಣ್ಣ, ಸನ್ಸೆರಾದ ಎಫ್‌.ಆರ್‌.ಸಿಂಘ್ವಿ, ಕೇಂದ್ರ ವಿಭಾಗದ ಐಜಿ ಸೀಮಂತ್‌ಕುಮಾರ್‌ ಸಿಂಗ್‌, ಗ್ರಾಮಾಂತರ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌, ಕಾಸಿಯಾ ಅಧ್ಯಕ್ಷ ಅರಸಪ್ಪ, ಹೆದ್ದಾರಿ ಯೋಜನಾ ನಿರ್ದೇಶಕ ಶ್ರೀಧರ್‌, ಡಿವೈಎಸ್ಪಿ ನಂಜುಂಡೇಗೌಡ, ಕೈಗಾರಿಕಾ ಮಾಲಿಕರ ಸಂಘದ ಪದಾಧಿಕಾರಿಗಳಾದ ಆರ್‌.ನರೇಂದ್ರ, ಮುರಳೀಧರ್‌, ಸಂಜೀವ್‌ ಸಾವಂತ್‌, ರಾಜಶೇಖರ ಪಾಟೀಲ್‌ ಇದ್ದರು. 

click me!