ಆತ್ಮಹತ್ಯೆಗೆ ಶರಣಾದ ಡಾ.ನಾಗೇಂದ್ರ ಪತ್ನಿಗೆ ಸಬ್‌ ರಿಜಿಸ್ಟ್ರಾರ್‌ ಉದ್ಯೋಗ

By Kannadaprabha NewsFirst Published Aug 22, 2020, 8:35 AM IST
Highlights

ಆತ್ಮಹತ್ಯೆಗೆ ಶರಣಾದ ನಂಜನಗೂಡು ಟಿಎಚ್ಒ  ಡಾ. ನಾಗೇಂದ್ರ ಪತ್ನಿಗೆ ಸಬ್ ರಿಜಿಸ್ಟ್ರಾರ್ ಉದ್ಯೋಗ ನೀಡುವುದಾಗಿ ಡಾ.ಸುಧಾಕರ್ ಹೇಳಿದ್ದಾರೆ.

 ಮೈಸೂರು (ಆ.22) : ಡಾ.ಎಸ್‌.ಆರ್‌.ನಾಗೇಂದ್ರ ಆತ್ಮಹತ್ಯೆ ಪ್ರಕರಣ ಉನ್ನತ ಮಟ್ಟದ ತನಿಖೆ ನಡೆಸಲು ಸರ್ಕಾರ ಸಿದ್ಧವಿದ್ದು, ಮೃತರ ಪತ್ನಿಗೆ ಶಾಶ್ವತ ಜೀವನೋಪಾಯಕ್ಕಾಗಿ ಸಬ್‌ ರಿಜಿಸ್ಟ್ರಾರ್‌ ಉದ್ಯೋಗ ನೀಡಲು ತೀರ್ಮಾನಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ದೆಹಲಿ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ: ಇಂದು 13 ಮಂದಿ ಬಲಿ, 1250 ಪ್ರಕರಣ ಪತ್ತೆ!...

ನಾನು ಸಹ ಒಬ್ಬ ವೈದ್ಯನಾಗಿ, ಸರ್ಕಾರದ ಪ್ರತಿನಿಧಿಯಾಗಿ ನಾಗೇಂದ್ರ ಅವರ ಕುಟುಂಬಕ್ಕೆ ಮತ್ತು ವೈದ್ಯ ಸಮೂಹಕ್ಕೆ ನೈತಿಕ ಸ್ಥೈರ್ಯ ತುಂಬಲಿಕ್ಕೆ ಹೋಗಿದ್ದೆ. ಸಾವಿನ ಮನೆಯಲ್ಲಿ ರಾಜಕಾರಣ ಮಾಡಿ ನನಗೆ ಅಭ್ಯಾಸ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ವಿರುದ್ಧ ಇದೇ ವೇಳೆ ಅವರು ಹರಿಹಾಯ್ದಿದ್ದಾರೆ.

ನಿಯಂತ್ರಣಕ್ಕೆ ಬಾರದ ಕೊರೋನಾ; ಮತ್ತೆ ವೀಕೆಂಡ್ ಲಾಕ್ ‌ಡೌನ್ ಅಧಿಕೃತ..

ನಾಗೇಂದ್ರ ಅವರ ಪ್ರಕರಣವನ್ನು ಮುಚ್ಚಿಹಾಕುವುದು ನಮ್ಮ ಕಾರ್ಯ ವೈಖರಿಯಲ್ಲ. ಅವೆಲ್ಲ ನಿಮ್ಮ ಕಾರ್ಯಗಳು. ಸಾವಿನ ಮನೆಯಲ್ಲಿ ರಾಜಕೀಯ ಮಾಡುವುದು ನಿಮ್ಮ ವಿಕೃತಿ. ನಮ್ಮದು ಸಾಂತ್ವನ ಹೇಳುವ ಸಂಸ್ಕೃತಿ. ನಿರ್ದಿಷ್ಟಮಾಹಿತಿ ಪಡೆದುಕೊಂಡು ಮಾಧ್ಯಮಗಳ ಮುಂದೆ ಮಾತನಾಡಿದರೆ ಒಳ್ಳೆಯದಿತ್ತು. ಜವಾಬ್ದಾರಿ ಸ್ಥಾನದಲ್ಲಿ ಇದ್ದೀನಿ ಎಂದು ಹೇಳಿದ್ದೀರಿ, ಜನರ ದಾರಿತಪ್ಪಿಸುವ ಕೆಲಸ ಮಾಡಬೇಡಿ. ಮಳೆ ಬಂದಾಗ ಓಡಿ ಹೋಗಿ ಮರದ ಕೆಳಗೆ ನಿಲ್ಲುವವರು ಅದು ಯಾವ ಜಾತಿಯ ಮರವೆಂದು ನೋಡುವುದಿಲ್ಲ. ಸಾವಿನ ವಿಷಯದಲ್ಲಿ ರಾಜಕೀಯ ಮಾಡುವುದು ತರವಲ್ಲ ಎಂದು ಕಿಡಿಕಾರಿದ್ದಾರೆ.

"

click me!