ಯುವಜನತೆಗೆ ಸಂವೇದನಾಶೀಲತೆ ಮೂಡಿಸಿದ್ದು ಪುನೀತ್ ರಾಜ್‌ಕುಮಾರ್: ಸಚಿವ ಮಹದೇವಪ್ಪ

By Kannadaprabha News  |  First Published Oct 30, 2023, 11:01 PM IST

ನಟನೆಯನ್ನೇ ಜೀವನದ ಸರ್ವಸ್ವವೆಂದು ತಿಳಿದು, ರಾಜ್ಯದ ಯುವಜನತೆಗೆ ಸಂವೇದನಾಶೀಲತೆಯ ಅಭಿಪ್ರಾಯವನ್ನು ಮೂಡಿಸಿದವರು ಪ್ರತಿಭಾನ್ವಿತ ನಟ ಡಾ. ಪುನೀತ್ ರಾಜ್‌ಕುಮಾರ್ ಅವರು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.


ಮೈಸೂರು (ಅ.30): ನಟನೆಯನ್ನೇ ಜೀವನದ ಸರ್ವಸ್ವವೆಂದು ತಿಳಿದು, ರಾಜ್ಯದ ಯುವಜನತೆಗೆ ಸಂವೇದನಾಶೀಲತೆಯ ಅಭಿಪ್ರಾಯವನ್ನು ಮೂಡಿಸಿದವರು ಪ್ರತಿಭಾನ್ವಿತ ನಟ ಡಾ. ಪುನೀತ್ ರಾಜಕುಮಾರ್ ಅವರು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು. ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ವತಿಯಿಂದ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ. ಪುನೀತ್ ರಾಜಕುಮಾರ್ ಅವರ ಅಗಲಿಕೆಯು ತುಂಬಲಾರದ ನಷ್ಟ ಎಂದು ಹೇಳಿದರು.

ನಟ ಪುನೀತ್ ಅವರು ಯುವಸಮೂಹವನ್ನು ಹೆಚ್ಚು ಪ್ರಭಾವಿಸಿದ್ದರು. ಅವರ ಸವಿನೆನಪಲ್ಲಿ ಇಲ್ಲಿನ ಎಳೆಯ ಮಕ್ಕಳಿಗೆ ನಮ್ಮ ನೆಲ, ಜಲ, ಕಾಡು, ಮೇಡು, ಪರಿಸರ ಕುರಿತಂತೆ 'ಗಂಧದಗುಡಿ' ಶಿರ್ಷಿಕೆಯಡಿ ಸ್ಥಳದಲ್ಲೇ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನಿಯ. ಇದು ಪರಿಸರ ಸಂರಕ್ಷಣೆಗೆ ಪೂರಕವಾದ ಅರಿವನ್ನು ಮೂಡಿಸಲಿದೆ ಎಂದು ಅವರು ತಿಳಿಸಿದರು. ವನ್ಯಜೀವಿಗಳು ನಮ್ಮ ದೇಶಕ್ಕೆ ಅಮುಲ್ಯವಾದ ಸಂಪತ್ತು. ಕಾಡಿನ ಪ್ರಾಣಿ, ಪಕ್ಷಿ ವಿವಿಧ ಜೀವ ಸಂಕುಲಗಳ ಬಗ್ಗೆ ತಿಳಿಯುವುದೇ ಒಂದು ಕೌತುಕ. 

Latest Videos

undefined

ರಾಜಕಾರಣವೆಂದರೆ ಅದೃಷ್ಟ ಹಾಗೂ ಅವಕಾಶ: ಎಚ್.ವಿಶ್ವನಾಥ್

ಈ ನಿಟ್ಟಿನಲ್ಲಿ ಮಕ್ಕಳು ಮನಸ್ಸಿನಲ್ಲಿ ಮೂಡಿದ ಪರಿಕಲ್ಪನೆಯಲ್ಲಿ ಕುಂಚದ ಮೂಲಕ ಬಿಡಿಸುವ ಚಿತ್ರಗಳು ಅವರ ಸೃಜನಶೀಲತೆಯ ಅಭಿವೃದ್ಧಿಗೆ ನೆರವಾಗುತ್ತದೆ ಎಂದರು. ಅನೇಕ ಪರಿಕಲ್ಪನೆಯಡಿ ಬಿಡಿಸಿದ ಚಿತ್ರವು ವಿಶ್ವಖ್ಯಾತಿ ಪಡೆದಿವೆ. ಅದಕ್ಕೆ ರವಿವರ್ಮನ ಕುಂಚದಲ್ಲಿ ಅರಳಿದ ಚಿತ್ರಗಳೇ ಸಾಕ್ಷಿ. ಅವರ ಚಿತ್ರಕ್ಕೆ ಸರಿಹೊಂದುವ ಚಿತ್ರಗಳು ಇದುವರೆಗೂ ಮೂಡಿಬಂದಿಲ್ಲ. ಇದಕ್ಕೆ ಪ್ರಮುಖವಾಗಿ ಏಕಾಗ್ರತೆ, ಮನಸ್ಸಿನ ನಿಗ್ರಹ, ಅತ್ಯುತ್ತಮ ಕಲ್ಪನೆ ಅವಶ್ಯಕ. ಸಮಚಿತ್ತತೆಯು ಮನುಷ್ಯನನ್ನು ಸಾಧನೆಗೆ ಪ್ರೇರೆಪಿಸುತ್ತದೆ ಎಂದು ಅವರು ಹೇಳಿದರು. 

ಕೋರ್ಟಿಗೆ ಹಾಜರಾಗದ ರೌಡಿ ಶೀಟರ್‌ ಪೂರ್ಣೇಶ್‌ಗೆ ಪೊಲೀಸ್ ಗುಂಡೇಟು!

ಎಲ್ಲಾ ಸಮುದಾಯದ ಜನರು ಒಟ್ಟಾಗಿ ಸಾಗಿದರೆ ಎಲ್ಲರ ಸಾಂಸ್ಕೃತಿಕ ಬದುಕನ್ನು ವಿಶ್ಲೇಷಣೆ ಮಾಡಿ ದೇಶಕ್ಕೆ ಒಗ್ಗಟ್ಟಿನ ಸಂದೇಶ ಹೇಗೆ ನೀಡಬಹುದು ಎಂಬುದನ್ನು ನಾವೆಲ್ಲರೂ ಈ ದಸರೆಯಲ್ಲಿ ನಿರೂಪಿಸಿದ್ದೇವೆ. ದಸರಾ ಇಷ್ಟೊಂದು ಅಚ್ಚುಕಟ್ಟಾಗಿ ನೆರವೇರಲು ಸಹಕರಿಸಿದ ಎಲ್ಲರಿಗೂ ಸರ್ಕಾರದ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದರು. ಶಾಸಕ ಟಿ.ಎಸ್. ಶ್ರೀವತ್ಸ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ. ರೂಪ, ನಗರ ಪಾಲಿಕೆ ಸದಸ್ಯೆ ಛಾಯಾದೇವಿ, ವಸ್ತುಪ್ರದರ್ಶನ ಪ್ರಾಧಿಕಾರದ ಸಿಇಒ ರಾಜೇಶ್ ಜಿ. ಗೌಡ ಮೊದಲಾದವರು ಇದ್ದರು.

click me!