ಅವೆಲಿಬಿಲಿಟಿ, ಅಕ್ಸಸ್ ಬಿಲಿಟಿ ಮತ್ತು ಅಫರ್ಡಬಲಿಟಿ ಎಂಬ ಸಿದ್ದಾಂತದ ಮೇರೆಗೆ ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ನೀಡಲು ರಾಜ್ಯ ಸರ್ಕಾರ ಹೊರಟಿದೆ. ಇದನ್ನ ಜನ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕರೆ ನೀಡಿದರು.
ವರದಿ: ರಾಜೇಶ್ ಕಾಮತ್ , ಏಷ್ಯಾನೆಟ್ ಸುವರ್ಣ, ಶಿವಮೊಗ್ಗ
ಶಿವಮೊಗ್ಗ (ಮೇ.02): ರಾಜ್ಯದಲ್ಲಿ ಆರೋಗ್ಯವನ್ನ ಮೂರು ಸಿದ್ಧಾಂತ ಮೇಲೆ ಹಂಚಲು ಸರ್ಕಾರ ಹೊರಟಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Dr K Sudhakar) ಶಿವಮೊಗ್ಗ (Shivamogga) ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಂಜಿನಿಯರ್ ಘಟಕದ ವತಿಯಿಂದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯನ್ನ 100 ಹಾಸಿಗೆಗಳಿಂದ 250 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಕಟ್ಟಡ ಕಾಮಗಾರಿ ಮತ್ತು ಶಿರಾಳಕೊಪ್ಪ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವನ್ನ 30 ಹಾಸಿಗೆಗಳಿಂದ 50 ಹಾಸಿಗೆಗಳ ಆಸ್ಪತ್ರೆಯನ್ನ ಮೇಲ್ದರ್ಜೆಗೇರಿಸುವ ಕಟ್ಟಡ ಕಾಮಗಾರಿ ಹಾಗು ಶಿಕಾರಿಪುರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನ 60 ರಿಂದ 100 ಹಾಸಿಗೆಗಳಿಗೆ ಮತ್ತು 100 ರಿಂದ 150 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವ ಕಟ್ಟಡ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭವನ್ನ ಉದ್ಘಾಟಿಸಿ ಮಾತನಾಡಿದರು.
ಅವೆಲಿಬಿಲಿಟಿ, ಅಕ್ಸಸ್ ಬಿಲಿಟಿ ಮತ್ತು ಅಫರ್ಡಬಲಿಟಿ ಎಂಬ ಸಿದ್ದಾಂತದ ಮೇರೆಗೆ ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ನೀಡಲು ರಾಜ್ಯ ಸರ್ಕಾರ (Karnataka Govt) ಹೊರಟಿದೆ. ಇದನ್ನ ಜನ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ಕರೆ ನೀಡಿದರು. ರಾಜ್ಯಾದ್ಯಂತ ಪ್ರವಾಸ ಮಾಡಿ ಉತ್ತಮ ಆರೋಗ್ಯ ವ್ಯವಸ್ಥೆ ಮಾಡಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದೇವೆ. ಕಳೆದ 2 ವರ್ಷದಲ್ಲಿ 1750 ವೈದ್ಯರ ನೇಮಕಾತಿ ಆಗಿದೆ. ಮೊದಲು ಉತ್ತರ ಕರ್ನಾಕದಲ್ಲಿ ವೈದ್ಯರ ನೇಮಕಾತಿ ಹೆಚ್ಚು ಒತ್ತು ನೀಡಿದ್ದು ನಂತರ ಬೆಂಗಳೂರಿನಲ್ಲಿ ನೀಡಲಾಗುವುದು. ಖಾಸಗಿ ಮಾಧ್ಯಮ ಸಂಸ್ಥೆ ರಾಜ್ಯ ಸರ್ಕಾರ ದೇಶದಲ್ಲಿಯೇ ಕೋವಿಡ್‌ನಲ್ಲಿ ಉತ್ತಮ ನಿರ್ವಹಣೆ ಮಾಡಿರುವುದಕ್ಕಾಗಿ ಪ್ರಶಸ್ತಿಯನ್ನು ನೀಡಿದ್ದಾರೆ.
ಸಂತೋಷ್ ಆತ್ಮಹತ್ಯೆ ಹಿಂದೆ ರಾಜಕೀಯ ಷಡ್ಯಂತ್ರ: ಸಚಿವ ಸುಧಾಕರ್
ವೈದ್ಯರ ವೇತನವನ್ನ 7ನೇ ವೇತನದ ಅಡಿಬರುವ ಎಐಸಿಟಿ ಯೋಜನೆ ಅಡಿ ಹೆಚ್ಚಿಸಲಾಗಿದೆ. ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಇದಕ್ಕೆ ಬಿಎಸ್‌ವೈ (BS Yediyurappa) ಕಾರಣ. ಇದನ್ನ ಈಗಿನ ಮುಖ್ಯಮಂತ್ರಿಗಳು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಜನ ಸಂಕೋಚಿತ ಮನೋಭಾವದಿಂದ ಹೊರಬರಬೇಕಿದೆ ಎಂದು ಕರೆ ನೀಡಿದ ಸಚಿವರು, ಕೇವಲ ಮೇಲ್ದರ್ಜೆಗೆ ಏರಿಸಲಾಗುವುದಷ್ಟೆ ಅಲ್ಲ, ಕಟ್ಟಡದ ಸುಸಜ್ಜಿತ ಉಪಕರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಸುಸಜ್ಜಿತ ಸೇವೆನೂ ದೊರೆಯುವಂತಾಗಬೇಕಿದೆ. ತಾಲೂಕು ಮಟ್ಟದಲ್ಲಿ ಮೊಟ್ಟ ಮೊದಲ ಬಾರಿಗೆ ಆರೋಗ್ಯ ತಪಾಸಣ ಕೇಂದ್ರ ಆರಂಭಿಸಲಾಗುತ್ತಿದೆ. 168 ತಾಲೂಕಿನಲ್ಲಿ ಆರೋಗ್ಯ ತಪಾಸಣ ಕೇಂದ್ರ ಆರಂಭಿಸುತ್ತಿದ್ದೇವೆ. ಆರೋಗ್ಯದ ಬಗ್ಗೆ ಜನರಲ್ಲಿ ಸಂಕುಚಿತ ಮನೋಭಾವನೆ ಇದೆ. ಇದು ಹೋಗಬೇಕಿದೆಎಂದು ಕರೆ ನೀಡಿದರು.
ಎಸ್ಟೋನಿಯಾ ಜತೆ ಒಪ್ಪಂದದಿಂದ ಕರ್ನಾಟಕಕ್ಕೆ ಲಾಭ: ಡಾ. ಕೆ. ಸುಧಾಕರ್
ಪ್ರತಿವರ್ಷ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸಲಹೆ ನೀಡಿ, ಯಾವ ಮನುಷ್ಯನಿಗೆ 30 ವರ್ಷ ತುಂಬಿದೆ. ಅಂತಹವರು ಪ್ರತಿ ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು. ಸಾಂಕ್ರಮಿಕ ರೋಗ ಸಾಂಕ್ರಮಿಕ ರೋಗ ಶುಗರ್, ಬಿಪಿಯಂತಹ ಸಾಮಾನ್ಯ ಕಾಯಿಲೆಗಳು ತಳಹಂತಹದಲ್ಲಿಯೇ ಪತ್ತೆಯಾದರೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ದೇಶದಲ್ಲಿ ಶೇ. 25 ರಷ್ಟು ಜನ ಸಾಂಕ್ರಾಮಿಕ ರೋಗದಿಂದ ಸಾಯುತ್ತಿದ್ದಾರೆ ಎಂಬ ಸಮೀಕ್ಷೆ ಹೇಳುತ್ದದೆ. ಹಾಗಾಗಿ ಆರೋಗ್ಯ ತಪಾಸಣ ಅನಿವಾರ್ಯವೆಂದರು. ಶಿವಮೊಗ್ಗದಲ್ಲಿ ಆಯುಷ್ ವಿಶ್ವ ವಿದ್ಯಾಲಯ ಆರಂಭಿಸಲು ಒತ್ತಾಯವಿದೆ. ಒಂದು ದಿನದಲ್ಲಿ ಸಚಿವ ಸಂಪುಟದ ಮುಂದೆ ಕಡತ ತಂದಿದು ಒಪ್ಪಿಗೆ ಪಡೆಯಲಾಗುವುದು. ಒಂದು ತಿಂಗಳಲ್ಲಿ ಆಯುಷ್ ವಿವಿ ಗೆ ಶಂಕುಸ್ಥಾಪನೆ ಮಾಡುವ ಭರವಸೆ ಇದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಸಂಸದ ಬಿ ವೈ ರಾಘವೇಂದ್ರ, ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಭೈರತಿ ಬಸವರಾಜ್ ಮೊದಲಾದವರು ಉಪಸ್ಥಿತರಿದ್ದರು.