ರಾಜ್ಯ ಸರ್ಕಾರ ರೈತರ ಪರವಾಗಿದೆ: ಸಚಿವ ಸಿ.ಸಿ. ಪಾಟೀಲ್‌

By Kannadaprabha NewsFirst Published Jul 22, 2021, 9:10 AM IST
Highlights

* ಕಾಲುವೆ ನವೀಕರಣಕ್ಕೆ ನೂರಾರು ಕೋಟಿ ಬಿಡುಗಡೆ
* ಮಹದಾಯಿ, ಕಳಸಾ-ಬಂಡೂರಿ ಯೋಜನೆ ಕಾಮಗಾರಿಗೆ ಬಜೆಟ್‌ನಲ್ಲಿ ನೂರಾರು ಕೋಟಿ ಅನುದಾನ ಮೀಸಲು
* ಕಳೆದ ಎರಡು ವರ್ಷಗಳಿಂದ ರೈತರ ಅಭಿವೃದ್ಧಿಗೆ ಹಲವು ಕ್ರಮ

ನರಗುಂದ(ಜು.22): ರಾಜ್ಯ ಸರ್ಕಾರ ರೈತರ ಪರವಾಗಿದೆ. ಕಳೆದ ಎರಡು ವರ್ಷಗಳಿಂದ ರೈತರ ಅಭಿವೃದ್ಧಿಗೆ ಹಲವು ಕಾರ್ಯಗಳನ್ನು ಮಾಡುತ್ತಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಇಲಾಖೆ ಸಚಿವ ಸಿ.ಸಿ. ಪಾಟೀಲ ಹೇಳಿದ್ದಾರೆ. 

ಹುತಾತ್ಮ ದಿನಾಚರಣೆ ನಿಮಿತ್ತ ಅವರು ಬುಧವಾರ ಈರಪ್ಪ ಕಡ್ಲಕೊಪ್ಪ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ಅಧಿಕಾರಾವಧಿಯಲ್ಲಿ ರೈತರನ್ನು ಆರ್ಥಿಕವಾಗಿ ಸದೃಢಗೊಳಸಲು ಬೆಳೆ ವಿಮೆ, ಬೆಳೆ ಹಾನಿ ಪರಿಹಾರ, ಕಿಸಾನ್‌ ಸಮ್ಮಾನ ಮತ್ತಿತರ ಯೋಜನೆಗಳಡಿ ರೈತರಿಗೆ ಸಾಕಷ್ಟು ಅನುಕೂಲ ಕಲ್ಪಿಸಿದ್ದಾರೆ. ಮಹದಾಯಿ, ಕಳಸಾ-ಬಂಡೂರಿ ಯೋಜನೆ ಕಾಮಗಾರಿಗೆ ಹಿಂದಿನ ಎರಡು ಬಜೆಟ್‌ಗಳಲ್ಲಿ ನೂರಾರು ಕೋಟಿ ಅನುದಾನ ಮೀಸಲಿಟ್ಟಿದ್ದಾರೆ ಎಂದರು.

ಬಂಡಾಯ ನೆಲದಲ್ಲಿ ಮತ್ತೆ ಮೊಳಗಿತು ರೈತ ಕಹಳೆ: ಮಾರಕ ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹ

ಈ ಭಾಗದ ರೈತರಿಗೆ ಹಲವಾರು ವರ್ಷಗಳಿಂದ ನೀರು ಸಿಗದಿರುವುದನ್ನು ಗಮನಿಸಿದ ಸರ್ಕಾರ, ಕಾಲುವೆ ನವೀಕರಣಕ್ಕೆ ನೂರಾರು ಕೋಟಿ ಬಿಡುಗಡೆ ಮಾಡಿದೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷೆ ಭಾವನಾ ಪಾಟೀಲ, ಉಪಾಧ್ಯಕ್ಷ ಪ್ರಶಾಂತ ಜೋಶಿ, ಸದಸ್ಯರಾದ ಸುನೀಲ ಕುಷ್ಟಗಿ, ರಾಚನಗೌಡ ಪಾಟೀಲ, ದೇವಣ್ಣ ಕಲಾಲ, ಪವಾಡಪ್ಪ ವಡ್ಡಗೇರಿ, ಚಂದ್ರಗೌಡ ಪಾಟೀಲ, ಫಕೀರಪ್ಪ ಹಾದಿಮನಿ, ಹನುಮಂತ ಹವಾಲ್ದರ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಎಂ.ಎಸ್‌. ಪಾಟೀಲ, ಮಲ್ಲಪ್ಪ ಮೇಟಿ, ನರಗುಂದ ಬಿಜೆಪಿ ಮಂಡಳ ಅಧ್ಯಕ್ಷ ಗುರುಪ್ಪ ಆದಪ್ಪನವರ, ಟಿಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ಎಪಿಎಂಸಿ ಅಧ್ಯಕ್ಷ ಶಂಕರಗೌಡ ಯಲ್ಲಪ್ಪಗೌಡ್ರ, ಬಿ.ಬಿ. ಐನಾಪುರ, ಬಿ.ಎಸ್‌. ಪಾಟೀಲ, ಚಂದ್ರು ದಂಡಿನ, ಶಿವಾನಂದ ಮುತ್ತವಾಡ, ಅನಿಲ ಧರಯಣ್ಣವರ, ಮಲ್ಲಪ್ಪ ಪೂಜಾರ, ಶಿವನಗೌಡ ಹೆಬ್ಬಳ್ಳಿ, ವಿಠ್ಠಲ ಹವಾಲ್ದಾರ್‌, ಸಿದ್ದೇಶ ಹೂಗಾರ ಉಪಸ್ಥಿತರಿದ್ದರು.
 

click me!