Karnataka Rain Updates: ಸಾತೇನಹಳ್ಳಿ, ಹಂಸಭಾವಿ, ಯೋಗಿಕೊಪ್ಪ, ವಡೇಯನಪುರ, ಅರಳಿಕಟ್ಟಿಹಾಗೂ ಕೋಡ ಗ್ರಾಮಗಳಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಭೇಟಿ ನೀಡಿ ಮಳೆಯಿಂದ ಬೆಳೆಹಾನಿ ಉಂಟಾದ ಪ್ರದೇಶಗಳನ್ನು ಪರಿಶೀಲಿಸಿದರು.
ಹಿರೇಕೆರೂರ (ಸೆ.2) :ತಾಲೂಕಿನ ಸಾತೇನಹಳ್ಳಿ, ಹಂಸಭಾವಿ, ಯೋಗಿಕೊಪ್ಪ, ವಡೇಯನಪುರ, ಅರಳಿಕಟ್ಟಿಹಾಗೂ ಕೋಡ ಗ್ರಾಮಗಳಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಭೇಟಿ ನೀಡಿ ಮಳೆಯಿಂದ ಬೆಳೆಹಾನಿ ಉಂಟಾದ ಪ್ರದೇಶಗಳನ್ನು ಪರಿಶೀಲಿಸಿದರು. ಸಾತೇನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ(B.C.Patil), ಇತ್ತೀಚಿಗೆ ಸುರಿದ ಅಪಾರ ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿ ಹರಿದು ಬೆಳೆಗಳು, ಮನೆಗಳು ಹಾಗೂ ರಸ್ತೆಗಳು ಹಾನಿಯಾಗಿದ್ದು, ಅಧಿಕಾಭರಿಗಳು ಹಾನಿಯ ಕುರಿತು ವರದಿ ಸಿದ್ದಪಡಿಸಿಕೊಳ್ಳಬೇಕು. ಹಾನಿಯಾದ ಮನೆಗಳಿಗೆ ಭೇಟಿ ನೀಡಿ ನಿಯಮಾನುಸಾರ ಪರಿಹಾರ ನೀಡಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಸೂಚಿಸಿದರು.
ಗ್ರಾಮದ ಹಳ್ಳ ತುಂಬಿ ಹರಿದ ಪರಿಣಾಮ ಚಿಕ್ಕೊಣತಿ- ಸಾತೇನಹಳ್ಳಿ ರಸ್ತೆ ಬದಿಯಲ್ಲಿ ಕೊರಕಲು ಬಿದ್ದು ರಸ್ತೆ ಹಾಳಾಗಿ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಿಡಿ ನಿರ್ಮಿಸಲು ಅಂದಾಜು ಪತ್ರಿಕೆ ಸಿದ್ಧಪಡಿಸಿ ಎಂದು ಸೂಚಿಸಿದರು. ಶೌಚಾಲಯ, ನರೇಗಾ ಯೋಜನೆಯ ವ್ಯಯಕ್ತಿಕ ಕಾಮಗಾರಿಗಳ ಹಣ ಪಾವತಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸಾರ್ವಜನಿಕರು ಸಚಿವರ ಗಮನಕ್ಕೆ ತಂದರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಾರ್ವಜನಿಕರ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
undefined
ಈ ಸಂದರ್ಭದಲ್ಲಿ ಇಒ ಲಕ್ಷೀಕಾಂತ ಬೊಮ್ಮಣ್ಣನವರ, ಉಪತಹಸೀಲ್ದಾರ್ ರಾಜಶೇಖರ ಎಲಿ, ಸಹಾಯಕ ಕೃಷಿ ನಿರ್ದೇಶಕ ಎಂ.ವಿ. ಮಂಜುನಾಥ, ಎಇಇ ಶ್ರೀನಿವಾಸರಾವ್, ಎಂಜಿನಿಯರ್ ಅಭಿಲಾಷ್, ನವೀನ್‌ಕುಮಾರ, ಮನೋಹರ ಹಾದಿಮನಿ, ಕಂದಾಯ ನಿರೀಕ್ಷಕ ಎಸ್.ಎಂ. ಬಣಕಾರ, ಗ್ರಾಪಂ ಅಧ್ಯಕ್ಷ ಶಂಭು ಮಾನೇರ, ಡಿ.ಸಿ. ಪಾಟೀಲ, ಜಿ.ಪಿ. ಪ್ರಕಾಶ, ರವಿಶಂಕರ ಬಾಳಿಕಾಯಿ, ಸೋಮು ಕರಡೇರ, ಪ್ರಕಾಶ ಮುದ್ದೆಪ್ಪಗೌಡ್ರ, ಮಂಜು ಎಲಿವಾಳ, ರಾಮು ಬಾರ್ಕಿ, ಚಂದ್ರಪ್ಪ ಗಾಳೇರ, ಸುಭಾಸ್ ಮಾನೇರ, ನಾಗಾರಾಜ ಹತ್ತಿಕಟ್ಟಿ, ಶಾಂತೇಷ ಎಲಿವಾಳ, ಮಂಜು ಆನವಟ್ಟಿಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಗ್ರಾಮಸ್ಥರು ಇದ್ದರು.
ಇದನ್ನೂ ಓದಿ: ಅಕಾಲಿಕ ಮಳೆಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ಭರವಸೆ ನೀಡಿದ ಬಿ ಸಿ ಪಾಟೀಲ್
ಮಳೆಯಿಂದಾದ ಹಾನಿ ಪ್ರದೇಶಕ್ಕೆ ಶಾಸಕ ಶ್ರೀನಿವಾಸ ಮಾನೆ ಭೇಟಿ, ಪರಿಶೀಲನೆ
ಎಡೆಬಿಡದೆ ಸುರಿದ ಭಾರಿ ಮಳೆಯಿಂದ ತಾಲೂಕಿನ ಕೋಣನಕೊಪ್ಪ ಗ್ರಾಮದಲ್ಲಿ ಸಾಕಷ್ಟುಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು, ಹಾನಿಗೀಡಾದ ಪ್ರದೇಶಗಳಿಗೆ ಶಾಸಕ ಶ್ರೀನಿವಾಸ ಮಾನೆ ಗುರುವಾರ ಭೇಟಿ ನೀಡಿ, ಪರಿಶೀಲಿಸಿದರು. ಗ್ರಾಮದ ಹೊರವಲಯದ ಕೆರೆ ಭರ್ತಿಯಾಗಿ ನೀರು ನುಗ್ಗಿ ಕೃಷಿ ಜಮೀನು ಕೊಚ್ಚಿ ಹೋಗಿರುವುದನ್ನು ಪರಿಶೀಲಿಸಿದ ಮಾನೆ, ಸಂತ್ರಸ್ತ ರೈತರಿಂದ ಅಗತ್ಯ ಮಾಹಿತಿ ಪಡೆದರು. ಎರಡು ಬಾರಿ ಭತ್ತದ ನಾಟಿ ಕೈಗೊಂಡು ಮೊದಲೇ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರು ಮತ್ತೀಗ ಬೀಳುತ್ತಿರುವ ಮಳೆಯಿಂದ ಸಮಸ್ಯೆಗೆ ಸಿಲುಕಿದ್ದಾರೆ. ಕೂಡಲೇ ಬೆಳೆಹಾನಿ ಸಮೀಕ್ಷೆ ಕೈಗೊಂಡು ಸೂಕ್ತ ಪರಿಹಾರ ಬಿಡುಗಡೆಗೆ ಸ್ಥಳದಲ್ಲಿದ್ದ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕೆರೆ ದುರಸ್ತಿಗೆ ನೀಲನಕ್ಷೆ ಸಿದ್ಧಪಡಿಸುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸುವೆ. ಕೆರೆ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗುವುದು. ಕಾಮಗಾರಿಯ ಅನುಷ್ಠಾನಕ್ಕೆ ಗ್ರಾಮಸ್ಥರ ಸಹಕಾರದ ಅಗತ್ಯವಿದೆ ಎಂದರು.
ಇದನ್ನೂ ಓದಿ: ರಾಜ್ಯದ ರೈತರ ಕಣ್ಣೀರು ಒರೆಸುವುದೇ ನನ್ನ ಗುರಿ: ಸಚಿವ ಬಿ.ಸಿ. ಪಾಟೀಲ
ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಮುಖಂಡರಾದ ಬಸಣ್ಣ ಪುರ್ಲಿ, ವೀರಭದ್ರಗೌಡ ಪಾಟೀಲ, ಹರೀಶ ಈಳಿಗೇರ, ಸಂಕನಗೌಡ ದೇವಿಕೊಪ್ಪ, ಮಹದೇವಪ್ಪ ಬ್ಯಾಡಗಿ, ಶಿವಾನಂದಪ್ಪ ಈಳಿಗೇರ, ಚಂದ್ರು ಸುಣ್ಣದಕೊಪ್ಪ, ಮಂಜು ಬನವಾಸಿ, ರೂಪಾ ಪಾಟೀಲ, ರಾಜೇಂದ್ರ ರೆಡ್ಡೇರ, ಮಕ್ಬೂಬ ಹಾನಗಲ್ಲ, ಮಹ್ಮದಜಾಫರ್ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು, ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.