National Nutrition Week 2022: ಫಾಸ್ಟ್‌ಫುಡ್‌ದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ

By Kannadaprabha NewsFirst Published Sep 2, 2022, 12:14 PM IST
Highlights

ಇತ್ತೀಚಿನ ದಿನಮಾನಗಳಲ್ಲಿ ಮನೆಯ ಊಟಕ್ಕಿಂತ ಫಾಸ್ಟ್‌ಫುಡ್‌ ಹೆಚ್ಚಿನ ಪ್ರಮಾಣದಲ್ಲಿ ಸೇವನೆಯಿಂದಾಗಿ ಆರೋಗ್ಯದ ದುಷ್ಟಪರಿಣಾಮಗಳು ಬೀರುತ್ತವೆ ಹಾಗೂ ಇದರಲ್ಲಿ ಯಾವುದೇ ತರಹದ ಪೌಷ್ಟಿಕಾಂಶಗಳು ಇರುವುದಿಲ್ಲ. ಸಾರ್ವಜನಿಕರು ತರಕಾರಿ ಮತ್ತು ಪೌಷ್ಟಿಕಾಂಶ ಇರುವ ಪದಾರ್ಥಗಳನ್ನು ಸೇವನೆ ಮಾಡಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಸರಸ್ವತಿ ದೇವಿ ತಿಳಿಸಿದರು.

ದೋಟಿಹಾಳ (ಸೆ.2) :ಇತ್ತೀಚಿನ ದಿನಮಾನಗಳಲ್ಲಿ ಮನೆಯ ಊಟಕ್ಕಿಂತ ಫಾಸ್ಟ್‌ಫುಡ್‌ ಹೆಚ್ಚಿನ ಪ್ರಮಾಣದಲ್ಲಿ ಸೇವನೆಯಿಂದಾಗಿ ಆರೋಗ್ಯದ ದುಷ್ಟಪರಿಣಾಮಗಳು ಬೀರುತ್ತವೆ ಹಾಗೂ ಇದರಲ್ಲಿ ಯಾವುದೇ ತರಹದ ಪೌಷ್ಟಿಕಾಂಶಗಳು ಇರುವುದಿಲ್ಲ. ಸಾರ್ವಜನಿಕರು ತರಕಾರಿ ಮತ್ತು ಪೌಷ್ಟಿಕಾಂಶ ಇರುವ ಪದಾರ್ಥಗಳನ್ನು ಸೇವನೆ ಮಾಡಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಸರಸ್ವತಿ ದೇವಿ ತಿಳಿಸಿದರು.

ಅಪೌಷ್ಠಿಕತೆ ನಿವಾರಣೆಗೆ 35 ವಿಶೇಷ ಬೆಳೆಗಳ ತಳಿಗಳಿಗೆ ಪ್ರಧಾನಿ ಮೋದಿ ಚಾಲನೆ

ಕುಷ್ಟಗಿ ತಾಪಂ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾಧಿಗಳ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಪೌಷ್ಟಿಕತಾ ಸಪ್ತಾಹ(National Nutrition Week)ದ ಅಂಗವಾಗಿ ಕಾನೂನು ಅರಿವು- ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರವು ಅಪೌಷ್ಟಿಕತೆಯನ್ನು ಹೋಗಲಾಡಿಸಲು ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡುತ್ತಿದ್ದು, ಅವುಗಳ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಆರೋಗ್ಯವಂತರಾಗಬೇಕು ಎಂದರು.

ಪ್ರಸಕ್ತವಾಗಿ ಶೇ. 42ರಷ್ಟುಮಕ್ಕಳಲ್ಲಿ ಹಾಗೂ ಶೇ. 50ರಷ್ಟುಮಹಿಳೆಯರಲ್ಲಿ ಅಪೌಷ್ಟಿಕತೆಯು ಎದ್ದು ಕಾಣುತ್ತಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಎಲ್ಲ ಗ್ರಾಮಗಳಲ್ಲಿ ಪೌಷ್ಟಿಕತೆಯ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವಾಗಬೇಕು ಎಂದರು. ನ್ಯಾಯವಾಧಿಗಳ ಸಂಘದ ಅಧ್ಯಕ್ಷ ಎಂ.ಎಚ್‌. ಗೋಡಿ ಮಾತನಾಡಿ, ಎಲ್ಲರೂ ಪೌಷ್ಟಿಕ ಆಹಾರವನ್ನು ಸೇವನೆ ಮಾಡುವ ಮೂಲಕ ಅಪೌಷ್ಟಿಕತೆ ಹೋಗಲಾಡಿಸಲು ಶ್ರಮವಹಿಸಬೇಕು ಎಂದರು. ಆರೋಗ್ಯ ಮೇಲ್ವಿಚಾರಕ ಸೋಮಶೇಖರ ಅವರು ಪೌಷ್ಟಿಕ ಆಹಾರ ಸೇವನೆಯಿಂದಾಗುವ ಪ್ರಯೋಜನಗಳ ಕುರಿತು ಮಾಹಿತಿಯನ್ನು ನೀಡಿದರು.

ರಾಷ್ಟ್ರೀಯ ಪೌಷ್ಠಿಕ ಸಪ್ತಾಹ:

ರಾಷ್ಟ್ರೀಯ ಪೋಷಣ್‌ ಮಾಸಾಚರಣೆ ಅಂಗವಾಗಿ ಇದೇ ಸೆಪ್ಟೆಂಬರ್‌ 01 ರಿಂದ 30 ರವರೆಗೆ 4 ವಾರಗಳಲ್ಲಿ ಪೋಷಣೆಯ 4 ಪ್ರಮುಖ ಭಾಗೀದಾರರಿಗೆ ವಿಶೇಷ ಒತ್ತು ನೀಡಿ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲು ಪೋಷಣ್‌ ಮಾಸಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು, ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು  ಹವಾಮಾನ, ಅಪೌಷ್ಠಿಕತೆ ನಿವಾರಣೆಗೆ ವಿಶೇಷ ಲಕ್ಷಣದ 35 ಬೆಳೆ ತಳಿ ಬಿಡುಗಡೆ ಮಾಡಿದ ಮೋದಿ!

click me!