12 ಕೆರೆಗಳ ಅಭಿವೃದ್ಧಿಗೆ 9.20 ಕೋಟಿ ಅನುದಾನ: ಕೃಷಿ ಸಚಿವ ಬಿ.ಸಿ.ಪಾಟೀಲ್

By Kannadaprabha News  |  First Published Sep 2, 2022, 12:28 PM IST

ಹಿರೇಕೆರೂರ ಹಾಗೂ ರಟ್ಟೀಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಕೆರೆಗಳ ಕಾಮಗಾರಿ ಕೈಗೊಳ್ಳಲು ಸರ್ಕಾರ .9.20 ಕೋಟಿ ಅನುದಾನ ಬಿಡುಗಡೆ. ಆಲದಗೇರಿ ಗ್ರಾಮದ ಚಿಕ್ಕೇರಿ ಕೆರೆ ಸುಧಾರಣೆಗೆ .1 ಕೋಟಿ, ಶಂಕರನಹಳ್ಳಿ ಗ್ರಾಮದ ವಡ್ಡಿನಕಟ್ಟಿಕೆರೆ ಕೋಡಿ ಕಾಲುವೆ ಸಹಿತ ರಸ್ತೆ ಸುಧಾರಣೆಗೆ .1 ಕೋಟಿ ರೂ. ಬಿಡುಗಡೆ;


ಹಿರೇಕೆರೂರ (ಸೆ.2) : ಹಿರೇಕೆರೂರ ಹಾಗೂ ರಟ್ಟೀಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿನ 12 ಕೆರೆಗಳ ಅಭಿವೃದ್ಧಿಗೆ ಸರ್ಕಾರ ಸಣ್ಣ ನೀರಾವರಿ ಇಲಾಖೆಯಿಂದ .9.20 ಕೋಟಿ ಅನುದಾನ ಬಿಡುಗಡೆಗೊಳಿಸಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ರೈತರನ್ನೇ ಉದ್ಯಮಿಗಳಾಗಿಸಲು 5 ಎಕ್ಸ್‌ಪೋರ್ಟ್‌ ಲ್ಯಾಬ್‌: ಸಚಿವ ಬಿ.ಸಿ.ಪಾಟೀಲ್‌

Latest Videos

undefined

ಪಟ್ಟಣದ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರೇಕೆರೂರ ಹಾಗೂ ರಟ್ಟೀಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಕೆರೆಗಳ ಕಾಮಗಾರಿ ಕೈಗೊಳ್ಳಲು ಸರ್ಕಾರ .9.20 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆಲದಗೇರಿ ಗ್ರಾಮದ ಚಿಕ್ಕೇರಿ ಕೆರೆ ಸುಧಾರಣೆಗೆ .1 ಕೋಟಿ, ಶಂಕರನಹಳ್ಳಿ ಗ್ರಾಮದ ವಡ್ಡಿನಕಟ್ಟಿಕೆರೆ ಕೋಡಿ ಕಾಲುವೆ ಸಹಿತ ರಸ್ತೆ ಸುಧಾರಣೆಗೆ .1 ಕೋಟಿ, ರಟ್ಟೀಹಳ್ಳಿ ತಾಲೂಕು ಗುಡ್ಡದಮಾದಾಪುರ ಗ್ರಾಮದ ಹೊಸಕೆರೆಯ ಅಭಿವೃದ್ಧಿ ಕಾಮಗಾರಿಗೆ .2 ಕೋಟಿ, ಮಡ್ಲೂರು ಗ್ರಾಮದ ಕೊಪ್ಪದ ಕೆರೆ ಕೋಡಿ ಕಾಲುವೆ ಪುನರುಜ್ಜೀವನ ಕಾಮಗಾರಿಗೆ .40 ಲಕ್ಷ, ಚಿನ್ನಮುಳಗುಂದ ಗ್ರಾಮದ ದೊಡ್ಡಕೆರೆ ಹಾಗೂ ಮೇಲಿನಕೆರೆ ಪುನರುಜ್ಜೀವನ ಕಾಮಗಾರಿಗೆ .40 ಲಕ್ಷ, ಕಚವಿ ಗ್ರಾಮದ ಸುಳೆಕೆರೆ ಏರಿ ಹಾಗೂ ತೂಬುಗಳ ಪುನರುಜ್ಜೀವನ ಕಾಮಗಾರಿಗೆ .40 ಲಕ್ಷ, ಚಿಕ್ಕೋಣತಿ ಗ್ರಾಮದ ದೊಡ್ಡಕೆರೆಗೆ ಬರುವ ಪೂರಕ ಕಾಲುವೆ ಪುನರುಜ್ಜೀವನ ಕಾಮಗಾರಿಗೆ .50 ಲಕ್ಷ, ಕೋಡ ಗ್ರಾಮದ ದೊಡ್ಡ ಕೆರೆ ಕೋಡಿ ಹಾಗೂ ತೂಬುಗಳ ಪುನರುಜ್ಜೀವನ ಕಾಮಗಾರಿಗೆ .40 ಲಕ್ಷ, ನೀಡನೇಗಿಲು ಗ್ರಾಮದ ದೊಡ್ಡಕೆರೆಯ ಕೋಡಿ ಸಹಿತ ಸೇತುವೆ ಹಾಗೂ ತೂಬುಗಳ ನಿರ್ಮಾಣಕ್ಕೆ .1 ಕೋಟಿ, ಹಿರೇಕೆರೂರ ಪಟ್ಟಣದ ದುರ್ಗಾದೇವಿ ಕೆರೆ ಪುನರುಜ್ಜೀವನ ಹಾಗೂ ಶೇಷಪ್ಪನ ವಡ್ಡಿನ ಹತ್ತಿರ ಕೋಡಿ ಸಹಿತ ಸೇತುವೆ ನಿರ್ಮಾಣ ಕಾಮಗಾರಿಗೆ .1.5 ಕೋಟಿ, ರಟ್ಟೀಹಳ್ಳಿ ತಾಲೂಕು ಮಾವಿನತೋಪು ಗ್ರಾಮದ ಹತ್ತಿರ ಚೆಕ್‌ ಡ್ಯಾಂ ಪುನರುಜ್ಜೀವನ ಕಾಮಗಾರಿಗೆ .30 ಲಕ್ಷ ಹಾಗೂ ಚಿಕ್ಕೋಣತಿ ವೀರಾಪುರ ಗ್ರಾಮದಲ್ಲಿ ಬ್ಯಾರೇಜ್‌ ಸಹಿತ ಸೇತುವೆಯ ಪುನರುಜ್ಜೀವನ ಕಾಮಗಾರಿಗೆ .30 ಲಕ್ಷ ಅನುದಾನವನ್ನು ಸರ್ಕಾರ ಮಂಜೂರು ಮಾಡಿದೆ ಎಂದರು.

ಕರ್ನಾಟಕದಲ್ಲಿ ರೈತರ ಸಮಾವೇಶ: ಸಚಿವ ಬಿ.ಸಿ.ಪಾಟೀಲ್‌

ಅನುದಾನ ಬಿಡುಗಡೆಗೊಳಿಸಿದ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಿ.ಸಿ. ಪಾಟೀಲ, ರವಿಶಂಕರ ಬಾಳಿಕಾಯಿ, ಕೆ.ಜೆ. ಪ್ರತಾಪ್‌ ಸೇರಿದಂತೆ ಮುಖಂಡರಿದ್ದರು.

click me!