Udupi: ಬಹುಕೋಟಿ ಹಣ ವಂಚನೆ ಆರೋಪಿ ಲಕ್ಷ್ಮೀ ನಾರಾಯಣ ಬಂಧನ

By Sathish Kumar KH  |  First Published Dec 29, 2022, 5:23 PM IST

ಉಡುಪಿಯಲ್ಲಿ ಕಮಲಾಕ್ಷಿ ವಿವಿದೋದ್ದೇಶ ಸಹಕಾರಿ ಸಂಘ ನಿ. ದಿಂದ ಬಹುಕೋಟಿ ಹಣ ವಂಚನೆ ಪ್ರಕರಣ ನಡೆದಿತ್ತು. ಈ ವಂಚನೆ ಪ್ರಕರಣದ ಆರೋಪಿಯಾಗಿರುವ ಸಹಕಾರಿ ಬ್ಯಾಂಕ್ ನಿರ್ದೇಶಕ ಬಿ.ವಿ ಲಕ್ಷ್ಮೀನಾರಾಯಣ ಉಪಾಧ್ಯಾಯ ಅವರನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಪೊಲೀಸರು ಬಂಧಿಸಿದ್ದಾರೆ. 


ಉಡುಪಿ (ಡಿ.29): ಉಡುಪಿಯಲ್ಲಿ ಕಮಲಾಕ್ಷಿ ವಿವಿದೋದ್ದೇಶ ಸಹಕಾರಿ ಸಂಘ ನಿ. ದಿಂದ ಬಹುಕೋಟಿ ಹಣ ವಂಚನೆ ಪ್ರಕರಣ ನಡೆದಿತ್ತು. ಈ ವಂಚನೆ ಪ್ರಕರಣದ ಆರೋಪಿಯಾಗಿರುವ ಸಹಕಾರಿ ಬ್ಯಾಂಕ್ ನಿರ್ದೇಶಕ ಬಿ.ವಿ ಲಕ್ಷ್ಮೀನಾರಾಯಣ ಉಪಾಧ್ಯಾಯ ಅವರನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಪೊಲೀಸರು ಬಂಧಿಸಿದ್ದಾರೆ. 

ಬಹುಕೋಟಿ ಹಣ ವಂಚನೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಲಕ್ಷ್ಮೀನಾರಾಯಣ ಈವರೆಗೆ ಕೈಗೆ ಸಿಕ್ಕಿರಲಿಲ್ಲ. ಆದರೆ, ಇಂದು ಪೊಲೀಸರು ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿ ಬಂಧಿಸಿದ್ದಾರೆ. ಇನ್ನು ಬಂಧನದ ತಕ್ಷಣ ಉಡುಪಿ ಜೆಎಂಎಫ್ ಸಿ ಕೋರ್ಟ್ ಗೆ ಆರೋಪಿಯನ್ನು ಹಾಜರುಪಡಿಸಿದ್ದಾರೆ. ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಮುಂದೆ ಆರೋಪಿ ಹಾಜರುಪಡಿಸಿದ ನಂತರ ವಿಚಾರಣೆ ನಡೆಸಿ ಜನವರಿ11 ರ ವರೆಗೆ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.  ಇನ್ನು ಜನವರಿ 2ನೇ ತಾರೀಖಿಗೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

Latest Videos

undefined

Bank Fraud: ಮತ್ತೊಂದು ಸಹಕಾರಿ ಹಗರಣ: 100 ಕೋಟಿ ರು. ಧೋಖಾ?

93 ಕೋಟಿ ರುಪಾಯಿ ವಂಚನೆ: ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘ ನಿ.ದ ನಿರ್ದೇಶಕ ಲಕ್ಷ್ಮೀನಾರಾಯಣ ಅವರ ಮೇಲೆ ಸುಮಾರು 600 ಠೇವಣಿದಾರರ 93 ಕೋಟಿ ರುಪಾಯಿ ವಂಚನೆ ಆರೋಪವಿದೆ. ಸುಮಾರು 48 ಕೋಟಿ ರುಪಾಯಿ ಠೇವಣಿ ಬಾಕಿಯಿದೆ ಎನ್ನುತ್ತಿರುವ ಆರೋಪಿ. ಕೊರೋನಾದ ಆರ್ಥಿಕ ಮುಗ್ಗಟ್ಟಿನಿಂದ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಸೊಸೈಟಿಗೆ ಗ್ರಾಹಕರಿಂದ ಬರಬೇಕಾದ ಸಾಲದ ಹಣದ ಮೊತ್ತ ದೊಡ್ಡದಿದೆ. ಆ ಹಣ ವಸೂಲಿಯಾಗದ ಕಾರಣ ಈ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.

ಆರೋಪಿ ಪರ ವಕೀಲರು ಹೇಳಿದ್ದೇನು?: ಲಕ್ಷ್ಮೀ ನಾರಾಯಣ ಯಾವ ವಂಚನೆಯನ್ನೂ ಮಾಡಿಲ್ಲ. ಬ್ಯಾಂಕ್‌ನ ಗ್ರಾಹಕರು ಹೆದರಬೇಕಾದ ಅಗತ್ಯ ಇಲ್ಲ. ಆ ಹಣವನ್ನು ಕೊಡುತ್ತೇನೆ ಎಂದು ಲಕ್ಷ್ಮಿನಾರಾಯಣ ಹೇಳಿದ್ದಾರೆ. ವೈಯಕ್ತಿಕ ಆಸ್ತಿಗಳನ್ನು ಮಾರಿಯಾದರೂ ದುಡ್ಡು ಕೊಡುತ್ತೇನೆ. ಕ್ರಿಪ್ಟೋ ಕರೆನ್ಸಿ ಬಿಟ್ ಕಾಯಿನ್ ಇತರ ಯಾವುದರಲ್ಲೂ ಹೂಡಿಕೆ ಮಾಡಿಲ್ಲ. ಅವರಿಗೆ ಬರಬೇಕಾದ ಹಣ ಇದೆ ಅವರು ಕೊಡಬೇಕಾದ ಹಣ ಇದೆ ಎಂದು ಒಪ್ಪಿಕೊಂಡಿದ್ದಾರೆ. ಆರೋಪಿ ಪರ ವಕೀಲ ಮಿತ್ರಕುಮಾರ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

ಡಿ.20 ರಂದು ಗ್ರಾಹಕರ ಪ್ರತಿಭಟನೆ: ರಾಜ್ಯದಲ್ಲಿ ಮತ್ತೊಂದು ಸಹಕಾರ ಬ್ಯಾಂಕ್‌ ಮೇಲೆ ಇದೀಗ ವಂಚನೆ ಆರೋಪ ಕೇಳಿಬಂದಿದೆ. ಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘವು .100 ಕೋಟಿಗೂ ಮಿಕ್ಕಿ ವಂಚನೆ ಮಾಡಿದೆ ಎಂದು ಗ್ರಾಹಕರು ಆರೋಪಿಸಿದ್ದು, ಸೋಮವಾರ ಸಂಘದ ಕಚೇರಿ ಎದುರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಗುರುರಾಘವೇಂದ್ರ ಕೋ-ಆಪರೇಟಿವ್‌ ಬ್ಯಾಂಕ್‌ ಸೇರಿ ಹಲವು ಸಹಕಾರ ಬ್ಯಾಂಕ್‌ಗಳಿಂದ ಠೇವಣಿದಾರರಿಗೆ ರಾಜ್ಯದಲ್ಲಿ ವಂಚನೆಯಾದ ಪ್ರಕರಣದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ. 

ಉಡುಪಿಯ ಕಮಲಾಕ್ಷಿ ಸಹಕಾರಿ ಸಂಘದಲ್ಲಿ ಹಗರಣ: 100 ಕೋಟಿ ಗುಳುಂ?

ಹಣ ಹಿಂದಕ್ಕೆ ನೀಡುವಂತೆ ಆಗ್ರಹ: ಬಿ.ವಿ.ಲಕ್ಷ್ಮೇನಾರಾಯಣ ಎಂಬುವರು ಮೂರು ವರ್ಷಗಳ ಹಿಂದೆ ಆರಂಭಿಸಿದ ಈ ಸಹಕಾರ ಸಂಘ ಅಲ್ಪಕಾಲದಲ್ಲೇ ಜನಪ್ರಿಯವಾಗಿದ್ದು ಸಾವಿರಾರು ಮಂದಿ ಹಣ ಠೇವಣಿ ಇರಿಸಿದ್ದರು. ಆದರೆ ಇದೀಗ ಸಂಘವು ಕಳೆದೊಂದು ತಿಂಗಳಿನಿಂದ ತಮ್ಮ ಠೇವಣಿಗೆ ಬಡ್ಡಿಯನ್ನೂ ಕೊಡುತ್ತಿಲ್ಲ, ಠೇವಣಿಯನ್ನೂ ನೀಡುತ್ತಿಲ್ಲ, ಕೇಳಿದರೆ ಸಬೂಬು ಹೇಳುತ್ತಿದೆ ಎಂದು ಆರೋಪಿಸಿ, ನೂರಾರು ಮಂದಿ ಗ್ರಾಹಕರು ಸಂಘದ ಕಚೇರಿಗೆ ಮುತ್ತಿಗೆ ಹಾಕಿ, ಹಣ ಹಿಂದಕ್ಕೆ ನೀಡುವಂತೆ ಆಗ್ರಹಿಸಿದರು. ಈ ಸಹಕಾರಿ ಸಂಘದಲ್ಲಿ ಠೇವಣಿಯಾಗಿಟ್ಟಹಣವನ್ನು ವಿವಿಧ ಕಡೆ ಹೂಡಿಕೆ ಮಾಡಲಾಗಿದ್ದು, ನಿರೀಕ್ಷಿತ ಲಾಭ ಬಾರದೆ ಸಂಘವು ನಷ್ಟದಲ್ಲಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಕಳೆದ ಜೂನ್‌ನಿಂದ ಗ್ರಾಹಕರಿಗೆ ಯಾವುದೇ ಬಡ್ಡಿ ನೀಡಿಲ್ಲ ಎನ್ನಲಾಗಿತ್ತು.

click me!