ದಾವಣಗೆರೆ (ಜೂ.30): ನೂರಕ್ಕೆ ನೂರರಷ್ಟುನಾವೆಲ್ಲರೂ ರಮೇಶ್ ಜಾರಕಿಹೊಳಿ ಜೊತೆಗೆ ಇದ್ದೇವೆ ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಭೈರತಿ ಸ್ಪಷ್ಟಪಡಿಸಿದ್ದಾರೆ.
‘ಉದ್ವೇಗದಲ್ಲಿ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತನ್ನಾಡಿರಬಹುದಷ್ಟೇ. ಬಾಲಚಂದ್ರ ಜಾರಕಿಹೊಳಿ ಸೇರಿ ಸಹೋದರರು ರಮೇಶ್ ಅವರನ್ನು ಸಮಾಧಾನಪಡಿಸಿದ್ದಾರೆ. ರಮೇಶ್ ಶೀಘ್ರ ಆರೋಪ ಮುಕ್ತರಾಗಿ ಸಚಿವರಾಗುತ್ತಾರೆಂಬ ವಿಶ್ವಾಸವಿದೆ. ಈಗಲೂ ರಮೇಶ್ ಜಾರಕಿಹೊಳಿ ಜೊತೆಗೆ ನಾವೆಲ್ಲರೂ ಇದ್ದೇವೆ ಎಂದಿದ್ದಾರೆ.
ಜಾರಕಿಹೊಳಿ ಕೇಸ್ ವಿಚಾರಣೆ ನಡೆಸ್ತಿದ್ದ ಸೌಮೆಂದು ಮತ್ತೆ 1 ತಿಂಗಳು ರಜೆ..! ...
17 ಶಾಸಕರು ಅತೃಪ್ತರಾಗಿದ್ದಾರೆಂಬ ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿಕೆಗೆ ತಿರುಗೇಟು ನೀಡಿರುವ ಭೈರತಿ, ‘ಅವರು ಜ್ಯೋತಿಷ್ಯಾ ಓದಿದ್ದಾರಾ? ನಮ್ಮೆಲ್ಲಾ 17 ಶಾಸಕರು, ಸಚಿವರಿಗೆ ಅಸಮಾಧಾನ ಇದೆಯೋ, ಇಲ್ಲವೋ ಅಂತಾ ರೇವಣ್ಣಗೆ ಹೇಗೆ ಗೊತ್ತಾ’ ಎಂದು ಪ್ರಶ್ನಿಸಿದ್ದಾರೆ.