ಜಾರಕಿಹೊಳಿ ಕೇಸ್‌ ವಿಚಾರಣೆ ನಡೆಸ್ತಿದ್ದ ಸೌಮೆಂದು ಮತ್ತೆ 1 ತಿಂಗಳು ರಜೆ..!

* ಅನಾರೋಗ್ಯ ಕಾರಣಕ್ಕೆ ಈಗಾಗಲೇ 20 ದಿನಗಳಿಂದ ರಜೆಯಲ್ಲಿದ್ದ ಮುಖರ್ಜಿ 
* ಚರ್ಚೆಗೆ ಕಾರಣವಾದ ಮತ್ತೆ ರಜೆ ವಿಸ್ತರಣೆ
* ಎಸ್‌ಐಟಿ ಮುಖ್ಯಸ್ಥರು ರಜೆ ಅವಧಿಯಲ್ಲೇ ಸಿಡಿ ಸ್ಫೋಟದ ಆರೋಪ

Ramesh Jarkiholi CD Case Investigator Soumendu Mukherjee Again One Month Leave grg

ಬೆಂಗಳೂರು(ಜೂ.30): ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್‌ಐಟಿ ಮುಖ್ಯಸ್ಥರೂ ಆಗಿರುವ ಬೆಂಗಳೂರು ನಗರ (ಪಶ್ಚಿಮ) ಹೆಚ್ಚುವರಿ ಆಯುಕ್ತ ಸೌಮೆಂದು ಮುಖರ್ಜಿ ಮತ್ತೆ ಒಂದು ತಿಂಗಳು ರಜೆ ಪಡೆದಿದ್ದಾರೆ. ಅನಾರೋಗ್ಯದ ಕಾರಣ ನೀಡಿ ಅವರು ಮತ್ತೆ ತಮ್ಮ ರಜೆಯನ್ನು ವಿಸ್ತರಿಸಿದ್ದಾರೆ.

ಅನಾರೋಗ್ಯ ಕಾರಣಕ್ಕೆ ಈಗಾಗಲೇ 20 ದಿನಗಳಿಂದ ರಜೆಯಲ್ಲಿದ್ದ ಸೌಮೆಂದು ಮುಖರ್ಜಿ ಅವರು ಮತ್ತೆ ರಜೆಯನ್ನು ವಿಸ್ತರಿಸಿರುವುದು ಚರ್ಚೆ ಹುಟ್ಟು ಹಾಕಿದೆ. 

'ಬಿಜೆಪಿಯ 3 ಜನರಿಂದ ನನ್ನ ಬೆನ್ನಿಗೆ ಚೂರಿ, ಅವರಿಗೆ ಪಾಠ ಕಲಿಸುವೆ!'

ಮಾಜಿ ಸಚಿವರ ವಿರುದ್ಧ ತನಿಖೆಯಲ್ಲಿ ಕೆಲವರ ಹಸ್ತಕ್ಷೇಪದಿಂದ ಅವರು ದೂರು ಸರಿದಿದ್ದಾರೆ ಎನ್ನಲಾಗಿದೆ. ಆದರೆ ಈ ಮಾತನ್ನು ಹಿರಿಯ ಅಧಿಕಾರಿಗಳು ನಿರಾಕರಿಸಿದ್ದಾರೆ. ಎಸ್‌ಐಟಿ ಮುಖ್ಯಸ್ಥರು ರಜೆ ಅವಧಿಯಲ್ಲೇ ಸಿಡಿ ಸ್ಫೋಟದ ಆರೋಪ ಎದುರಿಸುತ್ತಿರುವ ಇಬ್ಬರು ಪತ್ರಕರ್ತರ ವಿಚಾರಣೆ ನಡೆದಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
 

Latest Videos
Follow Us:
Download App:
  • android
  • ios