ಜೋಗ ವೀಕ್ಷಣೆಗೆ ಮುಕ್ತ ಅವಕಾಶ : ಮಾರ್ಗಸೂಚಿ ಪಾಲನೆ ಕಡ್ಡಾಯ

By Kannadaprabha News  |  First Published Jun 29, 2021, 3:56 PM IST
  • ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ  ಪ್ರವಾಸಿಗರ ವೀಕ್ಷಣೆಗೆ ಹೇರಲಾಗಿದ್ದ ನಿಷೇಧ ತೆರವು
  • ಪ್ರವಾಸಿಗರ ವೀಕ್ಷಣೆಗೆ  ಜೂನ್ 28ರಿಂದಲೇ ಅವಕಾಶ
  •  ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ  ಸಾರ್ವಜನಿಕರ ವೀಕ್ಷಣೆಗೆ ಅನುವು 

ಶಿವಮೊಗ್ಗ (ಜೂ.29): ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಕೋವಿಡ್ 19 ಎರಡನೇ ಅಲೆಯ ಲಾಕ್‌ಡೌನ್‌ನಿಂದಾಗಿ ಪ್ರವಾಸಿಗರ ವೀಕ್ಷಣೆಗೆ ಹೇರಲಾಗಿದ್ದ ನಿಷೇಧ ತೆರವು ಮಾಡಲಾಗಿದೆ.  ಜೂನ್ 28ರಿಂದಲೇ ಅವಕಾಶ ನೀಡಲಾಗುತ್ತಿದೆ.

ಇದೀಗ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. 

Tap to resize

Latest Videos

'ವಿಶ್ವವಿಖ್ಯಾತ ಜೋಗ ಪ್ರವಾಸಿ ಸೌಲಭ್ಯಕ್ಕೆ 185 ಕೋಟಿ ರು.' ..

ಮಳೆಗಾಲ ಆರಂಭ ಆಗುತ್ತಿದ್ದಂತೆ ಜೋಗ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ. ನಿಸರ್ಗ ಸೌಂದರ್ಯ ಅನಾವರಣಗೊಳ್ಳುತ್ತಿದೆ. ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕೊರೋನಾ ಮಾರ್ಗಸೂಚಿ ಅನ್ವಯ ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತಿದೆ. 

'ಜೋಗಕ್ಕೆ 150 ಕೋಟಿ ರು. ವೆಚ್ಚ​ದ​ಲ್ಲಿ ಮೆರುಗು' ...

ರಾಜ್ಯ ಹೊರರಾಜ್ಯ ಪ್ರಯಾಣಕ್ಕು ಅವಕಾಶ ಇರುವುದರಿಂದ ಜೋಗದ ಜಲಪಾತ ಭೋರ್ಗರೆಯುವ ರಮಣೀಯ ದೃಶ್ಯವನ್ನು ಪ್ರವಾಸಿಗರು ಕಣ್ಮನ ತುಂಬಿಕೊಳ್ಳಬಹುದು. 

ಕೋವಿಡ್ ನಿಯಮ ಪಾಲಿಸುವುದು ಕಡ್ಡಾಯವಾಗಿದೆ. ಪ್ರವಾಸಿಗರು ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸ್ಯಾನಿಟೈಸರ್ ಬಳಕೆ ಕಡ್ಡಾಯ. 

click me!