ಚನ್ನಪಟ್ಟಣ (ಜೂ.30): ದಲಿತರು ಮುಖ್ಯಮಂತ್ರಿ ಆಗೋದನ್ನು ನಾನು ತಪ್ಪಿಸಲಿಲ್ಲ. ಈಗ ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಹೇಳಿಕೊಳ್ಳುತ್ತಿದ್ದಾರಲ್ಲ ಅವರೇ ತಪ್ಪಿಸಿದ್ದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಹೆಸರೇಳದೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
‘ಯಾರೂ ಮಾಡದೇ ಇರೋ ಸಾಧನೆ ಮಾಡಿ, ನಾನಿದ್ದರೆ ಕಾಂಗ್ರೆಸ್ ಅಂತ ಹೇಳ್ತಾರಲ್ವಾ? 130 ಸೀಟಿನಲ್ಲಿ ಮುಖ್ಯಮಂತ್ರಿಯಾಗಿ ನಂತರ 78ಸೀಟಿಗೆ ಇಳಿದವರಲ್ವಾ ಅವರೇ ದಲಿತ ಸಿಎಂ ಆಗೋದನ್ನು ತಪ್ಪಿಸಿದ್ದು ಎಂದಿದ್ದಾರೆ. ‘ನಾನು 2008ರಲ್ಲೇ ಖರ್ಗೆಯವರನ್ನು ಸಿಎಂ ಮಾಡಿ ಎಂದಿದ್ದೆ. ಆಗಲೂ ಬಿಜೆಪಿಗೆ ಪೂರ್ಣ ಬೆಂಬಲ ಇರಲಿಲ್ಲ. ಅವತ್ತು ಕಾಂಗ್ರೆಸ್‌ನವರು 5 ಬಂಡಾಯ ಶಾಸಕರನ್ನು ಬಿಜೆಪಿಗೆ ಕಳುಹಿಸಿದ್ದರು. 2013ರಲ್ಲಿ ಆದದ್ದೂ ಎಲ್ಲರಿಗೂ ಗೊತ್ತಿದೆ. ಹಾಗಾಗಿ ಕಾಂಗ್ರೆಸ್‌ನವರ ಪಾಪದ ಕೊಡ ತುಂಬಿದೆ’ ಎಂದಿದ್ದಾರೆ.
ಫುಡ್ ಕಿಟ್ ವಿತರಣೆಗೆ ಮಾಜಿ ಸಿಎಂ ಚಾಲನೆ, ಈ ವೇಳ ಸರ್ಕಾರದ ವಿರುದ್ಧ ಗುಡುಗಿದ ಎಚ್‌ಡಿಕೆ ...
ಕಾಂಗ್ರೆಸ್‌ನಲ್ಲಿ ಇದೀಗ ಮೂಲ, ವಲಸಿಗರ ಫೈಟ್ ಪ್ರಾರಂಭ ಆಗಿದೆ. ಇದು ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಜೆಡಿಎಸ್ ಅನ್ನು ಮುಗಿಸಬೇಕೆಂದು ಹೋದ ಕಾಂಗ್ರೆಸ್ ನಾಯಕರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಬೆನ್ನಿಗೆ ಚೂರಿ ಹಾಕಿ ಹೋದವರಿಗೆ ಜನರೇ ಪಾಠ ಕಲಿಸುತ್ತಾರೆ ಎಂದರು.