ಚುನಾವಣೆ ಬಂದಾಗ ಕುಮಾರಸ್ವಾಮಿಗೆ ಕಣ್ಣೀರು|ಜನರು ಕಷ್ಟದಲ್ಲಿದ್ದಾಗ ಆ ಕಣ್ಣೀರು ಎಲ್ಲಿ ಹೋಗುತ್ತದೆ ಎಂಬುದು ಗೊತ್ತಾಗುವುದಿಲ್ಲ| ಉಪಚುನಾವಣೆ ಬಳಿಕ ರಾಜಕೀಯ ಧ್ರುವೀಕರಣ ಆಗುತ್ತದೆ ಎಂದು ದೇವೇಗೌಡರು ಹೇಳುತ್ತಾರೆ. ಅವರು ಹೇಳಿದಂತೆ ಆಗುವುದು ಸತ್ಯ. ಕಾಂಗ್ರೆಸ್ ಹಾಗೂ ಜೆಡಿಎಸ್ ಧೂಳಿಪಟ ಆಗುತ್ತದೆ ಎಂದ ಶ್ರೀರಾಮುಲು|
ಹಾವೇರಿ[ನ.29]: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಚುನಾವಣೆ ಬಂದಾಗಲೆಲ್ಲ ಕಣ್ಣೀರು ಬರುತ್ತದೆ. ಜನರು ನೆರೆ, ಪ್ರವಾಹದಂಥ ಸಂಕಷ್ಟದಲ್ಲಿದ್ದಾಗ ಕಣ್ಣೀರು ಬರುವುದಿಲ್ಲ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಲೇವಡಿ ಮಾಡಿದ್ದಾರೆ.
ರಟ್ಟಿಹಳ್ಳಿ ತಾಲೂಕಿನ ಮಾಸೂರಿನಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಾರ್ಥಕ್ಕಾಗಿ ಕುಮಾರಸ್ವಾಮಿ ಅವರಿಗೆ ಕಣ್ಣೀರು ಬರುತ್ತದೆ. ಜನರು ಕಷ್ಟದಲ್ಲಿದ್ದಾಗ ಆ ಕಣ್ಣೀರು ಎಲ್ಲಿ ಹೋಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಉಪಚುನಾವಣೆ ಬಳಿಕ ರಾಜಕೀಯ ಧ್ರುವೀಕರಣ ಆಗುತ್ತದೆ ಎಂದು ದೇವೇಗೌಡರು ಹೇಳುತ್ತಾರೆ. ಅವರು ಹೇಳಿದಂತೆ ಆಗುವುದು ಸತ್ಯ. ಕಾಂಗ್ರೆಸ್ ಹಾಗೂ ಜೆಡಿಎಸ್ ಧೂಳಿಪಟ ಆಗುತ್ತದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಯಡಿಯೂರಪ್ಪ ಅವರಿಗೆ ಲಿಂಗಾಯತ ಮುಖ್ಯಮಂತ್ರಿ ಎಂದು ಆರೋಪಿಸುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರು ತಾವು ಮುಖ್ಯಮಂತ್ರಿಯಾಗಿದ್ದಾಗ ಒಕ್ಕಲಿಗರಿಗೆ ಮಾತ್ರ ಮುಖ್ಯಮಂತ್ರಿ ಆಗಿದ್ದರಾ? ಅವರು ಸಿಎಂ ಆದಾಗ ರಾಜ್ಯದ ಆರೇಳು ಜಿಲ್ಲೆಗೆ ಎಲ್ಲ ಅನುದಾನ ಒಯ್ದರು. ಆದರೆ, ಯಡಿಯೂರಪ್ಪ ಹಾಗೆ ಯಾವತ್ತೂ ಮಾಡಿಲ್ಲ. ಎಲ್ಲರಿಗೂ ಸಮಪಾಲು ಕೊಟ್ಟು, ಇಡೀ ರಾಜ್ಯದ ಎಲ್ಲ ವರ್ಗದ ಜನತೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ. 6 ವರ್ಷ ನಿಮ್ಮದೇ ಸರ್ಕಾರವಿತ್ತು. ಆಗ ಹಿಂದುಳಿದ ಸಮಾಜಕ್ಕೆ ಏನು ಮಾಡಿದ್ದೀರಿ? ಕಾಂಗ್ರೆಸ್‌ನವರು ಕೇವಲ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಬಡವರ ಹಣವನ್ನು ಲೂಟಿ ಮಾಡುವುದರಲ್ಲಿ ಕಾಲ ಕಳೆದರು ಎಂದು ಆರೋಪಿಸಿದರು.
ಬಿಜೆಪಿ ನಾಯಕರು ಯಾರೂ ಆಪರೇಶನ್ ಮಾಡಲ್ಲ. ಆಪರೇಶನ್ ಮಾಡುವ ಡಾಕ್ಟರ್‌ಗಳು ನಾವಲ್ಲ. ಏನೇ ಸರ್ಕಸ್ ಮಾಡಿದರೂ ಮುಂದಿನ ಮೂರೂವರೆ ವರ್ಷಗಳ ಕಾಲ ಬಿಜೆಪಿ ಸರ್ಕಾರವನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಧರ್ಮ ಒಡೆಯುವ ಕೆಲಸ ಮಾಡಿತು. ಉತ್ತರ ಕರ್ನಾಟಕ ಅಭಿವೃದ್ಧಿಗೆ ಯಾವುದೇ ಸಹಾಯ ಮಾಡಲಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯನ ಜೊತೆಗೆ ಈಗ ಯಾರೂ ಇಲ್ಲ ಅವರು ಈಗ ಸಿಂಗಲ್ ಸ್ಟಾರ್ ಆಗಿದ್ದಾರೆ ಎಂದು ಮೂದಲಿಸಿದರು.
ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.