ಭೂ ಸುಧಾರಣೆ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳ ತಿದ್ದುಪಡಿಯಿಂದ ರೈತರಿಗೆ ಅನುಕೂಲ| ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಹಾಗೂ ಕೆಲ ರೈತ ಸಂಘಟನೆಗಳು ವಿರೋಧಿಸುತ್ತಿರುವುದು ದುರುದ್ದೇಶಪೂರಿತ ಎಂದ ಪಾಟೀಲ|
ಹಾವೇರಿ(ಸೆ.30): ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತರ ಪರವಾಗಿದೆ. ದೇಶದಲ್ಲಿ ಒಂದೇ ಮಾರುಕಟ್ಟೆ, ಒಂದೇ ಬೆಳೆ ಒಂದೇ ದೇಶ ಎಂಬ ಕಾನೂನು ತರಲಾಗಿದ್ದು, ಇದರಿಂದ ರೈತರು ಹೆಚ್ಚು ಬೆಲೆ ಸಿಗುವಲ್ಲಿ ಕೃಷಿ ಉತ್ಪನ್ನ ಮಾರಬಹುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ.
ನಗರದ ಪ್ರವಾಸಿಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರೈತರು ಉತ್ಪನ್ನಗಳನ್ನು ಮಾರುಕಟ್ಟೆಗೆ ಒಯ್ಯದೇ ಇದ್ದರೆ ರೈತರಿಗೆ ದಂಡ ವಿಧಿಸಲಾಗುತ್ತಿತ್ತು. ಹೊರ ರಾಜ್ಯಕ್ಕೆ ಹೋದರೆ ಅಲ್ಲಿಯೂ ರೈತರನ್ನು ತಡೆಯಲಾಗುತ್ತಿತ್ತು. ಈಗ ಭೂ ಸುಧಾರಣೆ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳ ತಿದ್ದುಪಡಿಯಿಂದ ರೈತರಿಗೆ ಅನುಕೂಲವಾಗಲಿದೆ. ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಹಾಗೂ ಕೆಲ ರೈತ ಸಂಘಟನೆಗಳು ವಿರೋಧಿಸುತ್ತಿರುವುದು ದುರುದ್ದೇಶಪೂರಿತ ಎಂದರು.
undefined
ಮುಖ್ಯಮಂತ್ರಿ ಬದಲಾವಣೆ ಕೂಗು: ಕೊನೆಗೂ ಸ್ಪಷ್ಟನೆ ಕೊಟ್ಟ ಬಿಜೆಪಿ ಅಧ್ಯಕ್ಷ
ರಾಜ್ಯದ ಭೌಗೋಳಿಕ ವಿಸ್ತೀರ್ಣ 190 ಲಕ್ಷ ಹೆಕ್ಟೇರ್‌ನಷ್ಟಿದ್ದು, ಇದರಲ್ಲಿ ಕೃಷಿ ಯೋಗ್ಯ ಭೂಮಿ 118 ಲಕ್ಷ ಹೆಕ್ಟೇರ್‌ನಷ್ಟಿದೆ. ಬಂಜರು ಭೂಮಿ 7.69 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿದೆ. ಕೃಷಿ ಮಾಡಬಹುದಾದ ಭೂಮಿ 4.03 ಲಕ್ಷ ಹೆಕ್ಟೇರ್‌ನಷ್ಟಿದೆ. ಬೀಳು ಭೂಮಿ 15.35 ಲಕ್ಷ ಹೆಕ್ಟೇರ್‌ನಷ್ಟಿದೆ. ಯಾಕೆ ಇಷ್ಟುಪ್ರಮಾಣದಲ್ಲಿ ಭೂಮಿ ಬೀಳು ಬಿದ್ದಿದೆ. ಈವರೆಗೆ ರೈತರು ಮಾತ್ರ ಭೂಮಿ ಖರೀದಿ ಮಾಡಬೇಕು ಎಂಬ ನಿಯಮವಿತ್ತು. ಕಾಯ್ದೆ ತಿದ್ದುಪಡಿಯಿಂದ ಹೊಸಬರಿಗೆ, ಯುವಕರಿಗೆ ಕೃಷಿ ಮಾಡಲು ಅವಕಾಶ ಸಿಗಲಿದೆ ಎಂದರು.
ಸಿಎಂ ಬದಲಾವಣೆಯಿಲ್ಲ:
ಸಿಎಂ ಬದಲಾವಣೆ ಪ್ರಸ್ತಾವ ಎಲ್ಲಿಯೂ ಆಗಿಲ್ಲ. ಮುಂದಿನ ಮೂರು ವರ್ಷ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮುಂದುವರಿಯುತ್ತಾರೆ. ಸಚಿವ ಸಂಪುಟ ವಿಸ್ತರಣೆ ವಿಚಾರ ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು ನೋಡಿಕೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಸಚಿವ ಬಿ.ಸಿ. ಪಾಟೀಲ ಹೇಳಿದರು.