ಬಿಜೆಪಿ ಅಭ್ಯರ್ಥಿಯಿಂದ ನಕಲಿ ಮತದಾರರ ನೋಂದಣಿ ಆರೋಪ

By Kannadaprabha News  |  First Published Sep 30, 2020, 12:44 PM IST

ಬಿಜೆಪಿ ಅಭ್ಯರ್ಥಿ ನಕಲಿ ಮತರಾರರ ನೋಂದಣಿ ಮಾಡುವ ಮೂಲಕ ವಾಮಮಾರ್ಗದಲ್ಲಿ ಗೆಲುವು ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪ ಕೇಳಿದ್ದಾರೆ.


ರಾಮನಗರ (ಸೆ.30):  ವಿಧಾನ ಪರಿ​ಷತ್‌ನ ಬೆಂಗ​ಳೂರು ಶಿಕ್ಷ​ಕರ ಕ್ಷೇತ್ರ ಚುನಾ​ವ​ಣೆ​ಯ ಮತ​ದಾ​ರರ ಪಟ್ಟಿ​ಯಲ್ಲಿ ನಕಲಿ ಮತ​ದಾ​ರ​ರನ್ನು ನೋಂದಣಿ ಮಾಡಿ​ಸುವ ಮೂಲಕ ಬಿಜೆಪಿ ಅಭ್ಯರ್ಥಿ ಪುಟ್ಟ​ಣ್ಣ​ ವಾಮ​ಮಾ​ರ್ಗ​ದಲ್ಲಿ ಗೆಲುವು ಸಾಧಿ​ಸುವ ಪ್ರಯತ್ನ ನಡೆ​ಸಿ​ದ್ದಾರೆ ಎಂದು ಜೆಡಿ​ಎಸ್‌ ಅಭ್ಯರ್ಥಿ ಎ.ಪಿ.​ರಂಗ​ನಾಥ್‌ ಆರೋ​ಪಿ​ಸಿ​ದರು.

ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಮೂರು ಚುನಾ​ವ​ಣೆ​ಗ​ಳಲ್ಲಿ ಪುಟ್ಟ​ಣ್ಣ ವಿಫ​ಲತೆ ನಡು​ವೆಯೂ ಸಫ​ಲತೆ ​ಕಂಡ​ವರು. ಆದ​ರೀಗ ನಕಲಿ ಮತ​ದಾ​ರರ ಹೊರಗೆ ಬಂದಿ​ರುವ ಕಾರಣ ಪುಟ್ಟ​ಣ್ಣ​ರ​ವರ ಪರಿ​ಸ್ಥಿ​ತಿ ಅರ್ಧ ವಾರ್ಷಿಕ ಪರೀ​ಕ್ಷೆ​ಯಲ್ಲಿ ಪಾಸಾ​ದ​ವರು, ಅಂತಿಮ ವರ್ಷದ ಪರೀ​ಕ್ಷೆ​ಯಲ್ಲಿ ಫೇಲಾ​ದವರಂತಾ​ಗಿದೆ ಎಂದು ವ್ಯಂಗ್ಯ​ವಾ​ಡಿ​ದರು.

Tap to resize

Latest Videos

ಶಿಕ್ಷ​ಕರ ಕ್ಷೇತ್ರ ಚುನಾ​ವ​ಣೆ​ಯಲ್ಲಿ ಮತ​ದಾ​ರರ ನೋಂದ​ಣಿಗೆ 26 ವರ್ಷ ಮೇಲ್ಪ​ಟ್ಟಿ​ರ​ಬೇಕು. ಆದರೆ, 21 ವರ್ಷ ವಯ​ಸ್ಸಿ​ನ​ವರು ನೋಂದಣಿ ಆಗಿ​ದ್ದಾ​ರೆ. ಖಾಸಗಿ ಶಿಕ್ಷಣ ಸಂಸ್ಥೆ​ಗಳ ವಾಹನ ಚಾಲ​ಕರು, ಕ್ಲೀನರ್‌ ಗಳು ಹಾಗೂ ಗಾರ್ಮೆಂಟ್ಸ್‌ ನೌಕ​ರರು ಮತ​ದಾ​ರರ ಪಟ್ಟಿ​ಯಲ್ಲಿದ್ದಾ​ರೆ. ಇದೆ​ಲ್ಲ​ವೂ ಪುಟ್ಟ​ಣ್ಣ​ರ​ವರ ಕೈಚ​ಳ​ಕ​ದಿಂದ ಸಾಧ್ಯ​ವಾ​ಗಿದೆ. ಈಗ ಮತ​ದಾ​ರರ ಪಟ್ಟಿ​ಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ನಕಲಿ ಮತ​ದಾ​ರರು ಹೊರಗೆ ಬಂದಿ​ದ್ದಾರೆ. ನಕಲಿ ಶಿಕ್ಷಕರನ್ನು ಸೃಷ್ಟಿಸಿ ಅವರಿಂದ ಮತ ಹಾಕಿಸಿಕೊಂಡು ಪುಟ್ಟಣ್ಣ ಗೆಲ್ಲುತ್ತಿದ್ದರು. ಇದೀಗ ಈ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಹೀಗಾ​ಗಿಯೇ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ವಿಳಂಬವಾಗುತ್ತಿದೆ ಎಂದರು.

RR ನಗರ ಉಪಕದನ: ಮುನಿರತ್ನ ವಿರುದ್ಧ ಅಚ್ಚರಿ ಅಭ್ಯರ್ಥಿ ನಿಲ್ಲಿಸಲು ಡಿಕೆಶಿ ಪ್ಲಾನ್ ...

ನಕಲಿ ಮತ​ದಾ​ರರು ಬೆಳ​ಕಿಗೆ ಬಂದಿ​ರು​ವುದು ಹಾಗೂ ಕ್ಷೇತ್ರ ವ್ಯಾಪ್ತಿಯ ಜಿಲ್ಲೆ​ಗ​ಳಲ್ಲಿ ಜೆಡಿ​ಎಸ್‌ ಬಲಿ​ಷ್ಠ​ವಾ​ಗಿ​ರುವ ಕಾರಣ ಪ್ರತಿ​ಸ್ಪರ್ಧಿಗೆ ಸೋಲಿನ ಭೀತಿ ಆವ​ರಿ​ಸಿದೆ. ಮೂರು ಅವ​ಧಿಯ ಅಧಿ​ಕಾ​ರ​ದಲ್ಲಿ ತವರು ಜಿಲ್ಲೆಗೆ ಅವರ ಕೊಡುಗೆ ಶೂನ್ಯ. ಕೋವಿಡ್‌ ನಂತ​ಹ ಸಂಕ​ಷ್ಟ​ದ​ಲ್ಲಿಯೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಅಧಿಕಾರಿಗಳನ್ನು ಬೆದರಿಸಿ, ನಕಲಿ ಮತದಾರರನ್ನು ಸೃಷ್ಟಿಸಿಕೊಂಡು ವಾಮಮಾರ್ಗದಿಂದ ಗೆಲುವು ಸಾಧಿಸುತ್ತಿದ್ದರು. ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡು ಗೆಲುವು ಸಾಧಿಸಿ ಪಕ್ಷಾಂತರ ಮಾಡಿದ್ದೆ ಪುಟ್ಟ​ಣ್ಣ​ರ​ವರ ದೊಡ್ಡ ಸಾಧನೆ ಎಂದು ಲೇವಡಿ ಮಾಡಿ​ದ​ರು.

ರಾಜ್ಯ ಉಪನ್ಯಾಸಕರ ಸಂಘದ ಮಾಜಿ ಉಪಾಧ್ಯಕ್ಷ ತಿಮ್ಮಯ್ಯ ಪುರ್ಲೆ ಮಾತನಾಡಿ, ರಂಗನಾಥ್‌ ಅವರು ವೃತ್ತಿಯಲ್ಲಿ ವಕೀಲರಾಗಿದ್ದರೂ ಶಿಕ್ಷಕ ಸಮುದಾಯದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡು ರಾಜ್ಯಾದಂತ ಕೆಲಸ ಮಾಡುತ್ತಿದ್ದಾರೆ. ಅವ​ರಿಗೆ ಶಕ್ತಿ ತುಂಬುವ ಕೆಲ​ಸ​ವನ್ನು ಶಿಕ್ಷ​ಕರು ಮಾಡ​ಬೇ​ಕೆಂದು ಮನವಿ ಮಾಡಿ​ದ​ರು.

ಸುದ್ದಿ​ಗೋ​ಷ್ಠಿ​ಯಲ್ಲಿ ಜೆಡಿಎಸ್‌ ರಾಜ್ಯ ವಕ್ತಾರ ಬಿ.ಉಮೇಶ್‌, ಜೆಡಿಎಸ್‌ ಕಾನೂನು ಘಟಕದ ಮುಖಂಡ ರಾಜಶೇಖರ್‌, ನಿವೃತ್ತ ಪ್ರಾಂಶುಪಾಲ ವನರಾಜು, ಮುಖಂಡ ಕರೀಗೌಡ ಇದ್ದರು.

click me!