Shivamogga Accident: ಗಾಯಗೊಂಡ ಬಾಲಕಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಚಿವ ಜ್ಞಾನೇಂದ್ರ

Suvarna News   | Asianet News
Published : Jan 15, 2022, 10:41 AM ISTUpdated : Jan 15, 2022, 10:42 AM IST
Shivamogga Accident: ಗಾಯಗೊಂಡ ಬಾಲಕಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಚಿವ ಜ್ಞಾನೇಂದ್ರ

ಸಾರಾಂಶ

*  ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬಿ.ಆರ್.ಪಿ. ಬಳಿ ನಡೆದ ಘಟನೆ *  ತಮ್ಮ ಬೆಂಗಾವಲು ಪಡೆ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದ ಸಚಿವರು *  ಬೆಂಗಳೂರಿನಿಂದ ತೀರ್ಥಹಳ್ಳಿಗೆ ತೆರಳುತ್ತಿದ್ದ ಸಚಿವ ಆರಗ ಜ್ಞಾನೇಂದ್ರ 

ಶಿವಮೊಗ್ಗ(ಜ.15):  ಅಪಘಾತದಲ್ಲಿ(Accident) ಗಾಯಗೊಂಡಿದ್ದ ಬಾಲಕಿಯನ್ನ ಆಸ್ಪತ್ರೆಗೆ ದಾಖಲಿಸುವ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಅವರು ಮಾನವೀಯತೆ ಮೆರೆದಿದ್ದಾರೆ. 

ನಿನ್ನೆ(ಶುಕ್ರವಾರ) ಸಂಜೆ ಜಿಲ್ಲೆಯ ಭದ್ರಾವತಿ(Bhadravathi) ತಾಲೂಕಿನ ಬಿ.ಆರ್.ಪಿ. ಬಳಿ ಹಸುವಿಗೆ ಬೈಕ್ ಡಿಕ್ಕಿ(Collision) ಹೊಡೆದ ಪರಿಣಾಮ ಬೈಕಿನಲ್ಲಿ ತೆರಳುತ್ತಿದ್ದ ಮುತ್ತಿನಕೊಪ್ಪ ಗ್ರಾಮದ ದಂಪತಿ ಹಾಗೂ ಬಾಲಕಿ ಕೆಳಕ್ಕೆ ಬಿದ್ದಿದ್ದರು. ಬಾಲಕಿಗೆ(Girl) ಗಾಯವಾಗಿತ್ತು. ಅದೇ ವೇಳೆ ಬೆಂಗಳೂರಿನಿಂದ(Bengaluru) ತೀರ್ಥಹಳ್ಳಿಗೆ ತೆರಳುತ್ತಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ತಕ್ಷಣವೇ ತಮ್ಮ ಬೆಂಗಾವಲು ಪಡೆ ವಾಹನದಲ್ಲಿ ಬಿ.ಆರ್.ಪಿ. ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಿ ಚಿಕಿತ್ಸೆ(Treatment) ಕೊಡಿಸಿದ್ದಾರೆ ಎಂದು ತಿಳಿದು ಬಂದಿದೆ. 

MP Car Accident ಕಲಬುರಗಿ ಬಿಜೆಪಿ ಸಂಸದ ಉಮೇಶ್ ಜಾಧವ್ ಕಾರು ಅಪಘಾತ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ!

ಗಾಯಾಳುಗಳ ನೆರವಿಗೆ ಗೃಹ ಸಚಿವ, ತಮ್ಮದೆ ಕಾರಿನಲ್ಲಿ ಕಳಿಸಿದರು

ಈ ಹಿಂದೆಯೂ ಗೃಹ ಸಚಿವ (Karnataka Home minister) ಆರಗ ಜ್ಞಾನೇಂದ್ರ ಶಿವಮೊಗ್ಗಕ್ಕೆ (Shivmogga) ಬರುವಾಗ ಮಂಡಗದ್ದೆ ಬಳಿ ಕಾಡಿನಲ್ಲಿ ಬೈಕ್ ಅಪಘಾತವಾಗಿ (Acccident) ಎರಡು ಜನ ಗಂಭೀರ ಗಾಯಗೊಂಡವರನ್ನು ತಕ್ಷಣವೇ ತಮ್ಮ ವಾಹನ ನಿಲ್ಲಿಸಿ ಗಾಯಾಳುಗಳ ನೆರವಿಗೆ ಧಾವಿಸಿದ್ದರು. ಈ ಘಟನೆ ಕಳೆದ ವರ್ಷದ ನ. 13 ರಂದು ನಡೆದಿತ್ತು. ತಮ್ಮ ಎಸ್ಕಾರ್ಟ್ ವಾಹನದಲ್ಲಿ(Escort Vehicle)ಅಪಘಾತಕ್ಕೆ ಒಳಗಾದವರನ್ನು ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ(Meggan Hospital) ಕಳಿಸಿಕೊಟ್ಟಿದ್ದರು. 

ಅಸ್ಪತ್ರೆಗೆ ಮಾಹಿತಿ ನೀಡಿ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸೂಚನೆ ನೀಡಿದ್ದರು. ತೀರ್ಥಹಳ್ಳಿ ಮೂಲದ ಬೈಕ್ ಸವಾರರಿಬ್ಬರು ತೀವ್ರ ಗಾಯಾಳುಗಳಾಗಿದ್ದು ಮೆಗ್ಗಾನ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದರು.   ಸಚಿವರೆ ಮುಂದಾಗಿ ನೆರವಿಗೆ ಧಾವಿಸಿದ್ದರು.  ಸಚಿವರು ಗಾಯಾಳುಗಳ ಪೂರ್ವಾಪರ  ವಿಚಾರಣೆ  ನಡೆಸಿದ್ದರು. ಸಚಿವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. 

ಲಾರಿ ಒಳಗಡೆ ಸಿಲುಕಿದ ಲಾರಿ ಚಾಲಕ

ಬಾಗಲಕೋಟೆ(Bagalkot): ಎರಡು ಲಾರಿಗಳು ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಟ್ರಕ್‌(Truck) ಒಳಗಡೆ ಲಾರಿ ಚಾಲಕ ಸಿಲುಕಿದ ಘಟನೆ ಜಿಲ್ಲೆಯ ಬೀಳಗಿ(Bilagi) ತಾಲೂಕಿನ ಅನಗವಾಡಿ ಸೇತುವೆ ಬಳಿ ನಿನ್ನೆ(ಶುಕ್ರವಾರ) ತಡರಾತ್ರಿ ಸಂಭವಿಸಿದೆ. ಅಗ್ನಿಶಾಮಕದಳದ(Fire Department) ಸಿಬ್ಬಂದಿಯವರ ಸಮಯಪ್ರಜ್ಞೆಯಿಂದ ಲಾರಿ ಚಾಲಕ ಬದುಕುಳಿದ್ದಾನೆ ಎಂದು ತಿಳಿದು ಬಂದಿದೆ.

ಸೋಲಾಪುರ- ಹುಬ್ಬಳ್ಳಿ(Hubballi-Solapur National Highway) ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಘಟನೆ ನಡೆದಿದೆ. ಲಾರಿ ಚಾಲಕ ಸೇರಿ ಇನ್ನುಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.  ಅಗ್ನಿಶಾಮಕದಳದ ಸಿಬ್ಬಂದಿಯವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Road Accident: ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ: ಶಮರಿಮಲೆಗೆ ಹೋಗಿ ವಾಪಸ್ ಬರುತ್ತಿದ್ದ ಇಬ್ಬರು ಸಾವು

ಇಬ್ಬರು ಯುವಕರು ನೀರುಪಾಲು

ರಾಯಚೂರು(Raichur): ಸಂಕ್ರಾಂತಿ ಪುಣ್ಯಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು(Youths) ನೀರುಪಾಲಾದ ಘಟನೆ ರಾಯಚೂರು ಜಿಲ್ಲೆಯ ದೇವಸುಗೂರು ಬಳಿ ಕೃಷ್ಣಾ ನದಿಯಲ್ಲಿ(Krishna River) ನಿನ್ನೆ(ಶುಕ್ರವಾರ) ನಡೆದಿದೆ. ಗಣೇಶ್ (30) ಹಾಗೂ ಉದಯ ಕುಮಾರ್ (31) ಎಂಬುವರೇ ನೀರು ಪಾಲಾದ ಯುವಕರಾಗಿದ್ದಾರೆ. 

ಗಣೇಶ್‌ನ ಮೃತದೇಹ(Deadbody) ಪತ್ತೆಯಾಗಿದ್ದು, ಇನ್ನೋರ್ವ ಯುವಕನಿಗಾಗಿ ಶೋಧಕಾರ್ಯ ಮುಂದುವರೆದಿದೆ. ಮಥಯ ಯುವಕರು ರಾಯಚೂರು ನಗರದ ಎಲ್‌ಬಿಎಸ್‌ ನಗರದ ನಿವಾಸಿಗಳಾಗಿದ್ದಾರೆ. ಏಳು ಜನ ಸ್ನೇಹಿತರು(Friends) ನಿನ್ನೆ(ಶುಕ್ರವಾರ) ಪುಣ್ಯಸ್ನಾನಕ್ಕೆಂದು ಕೃಷ್ಣಾ ನದಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ.  ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 
 

PREV
Read more Articles on
click me!

Recommended Stories

ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಟ್ರ್ಯಾಕ್‌ಗೆ ಹಾರಿ ವ್ಯಕ್ತಿ ಆತ್ಮ೧ಹತ್ಯೆ; ನೇರಳೆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ವ್ಯತ್ಯಯ!
ಬಾಗಲಕೋಟೆ: ದಾಸೋಹ ಚಕ್ರವರ್ತಿ, ಬಂಡಿಗಣಿ ಮಠದ ದಾನೇಶ್ವರ ಸ್ವಾಮೀಜಿ ಲಿಂಗೈಕ್ಯ!