* ಭೀಮಾ- ಕಾಗಿಣಾ ನದಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವಾಗ ಹೃದಯಾಘಾತ
* ತಕ್ಷಣ ನದಿಯಿಂದ ಹೊರ ಕರೆತರುವಷ್ಟರಲ್ಲಿ ಇಹಲೋಕ ತ್ಯಜಿಸಿದ್ದ ಶ್ರೀಗಳು
* ಶ್ರೀಗಳ ಅಗಲಿಕೆಗೆ ಕಂಬನಿ ಮಿಡಿದ ಡಾ. ಶಾಂತಸೋಮನಾಥ ಶಿವಾಚಾರ್ಯರು
ಕಲಬುರಗಿ(ಜ.15): ಮಕರ ಸಂಕ್ರಾಂತಿ(Makar Sankranti) ಹಿನ್ನೆಲೆಯಲ್ಲಿ ಶಹಾಬಾದ ತಾಲೂಕಿನ ಹೊನಗುಂಟಾ ಗ್ರಾಮದ ಭೀಮಾ-ಕಾಣಿಗಾ ನದಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಬರುವಾಗ ಕಮಲಾಪುರ(Kamalapur) ತಾಲೂಕಿನ ಮಹಾಗಾಂವ ಕಳ್ಳಿಮಠದ ಗುರುಲಿಂಗ ಶಿವಾಚಾರ್ಯರು(Guruling Shivacharya Swamiji) ಲಿಂಗೈಕ್ಯರಾಗಿದ್ದಾರೆ.
ಸಂಕ್ರಾಂತಿ ಪುಣ್ಯಸ್ನಾನ ಮುಗಿಸಿ ಮರುಳುವಾಗ ಹೃದಯಾಘಾತದಿಂದ(Heart Attack) ಗುರುಲಿಂಗ ಶಿವಾಚಾರ್ಯರು(58) ಸಾವನ್ನಪ್ಪಿದ್ದಾರೆ(Passed Away) ಎಂದು ಮಠದ ಮೂಲಗಳು ತಿಳಿಸಿವೆ.
ಶ್ರೀಗಳಿ ಲಿಂಗೈಕ್ಯರಾಗಿರುವುದು ಭಕ್ತರ(Devotees) ಶೋಕಕ್ಕೆ ಕಾರಣವಾಗಿದೆ. ಶ್ರೀಗಳನ್ನು ತಕ್ಷಣ ಅವರ ಶಿಷ್ಯರು ಸ್ಥಳೀಯರು ನದಿಯಿಂದ ನದಿಯಿಂದ ಹೊರ ಕರೆತರುವಷ್ಟರಲ್ಲಿ ಶ್ರೀಗಳು ಇಹಲೋಕ ತ್ಯಜಿಸಿದ್ದರು ಎಂದು ಭಕ್ತ ಮೂಲಗಳಿಂದ ತಿಳಿದು ಬಂದಿದೆ.
Dr J Alexander Passes Away: ನಿವೃತ್ತ ಐಎಎಸ್ ಅಧಿಕಾರಿ ಅಲೆಗ್ಸಾಂಡರ್ ನಿಧನ: ಸಿಎಂ ಬೊಮ್ಮಾಯಿ ಸಂತಾಪ
ಕಂಬನಿ:
ಮಹಾಗಾಂವ ಕಳ್ಳಿಮಠದ ಯುವಯತಿ ದಾರ್ಶನಿಕ, ಪಂಡಿತ, ಶಿವಾಚಾರ್ಯರು ಇನ್ನಿಲ್ಲ ಎಂಬುದು ನಂಬಲಾಗುತ್ತಿಲ್ಲ. ನಂಬಬೇಕಲ್ಲ ಕಾಲಬೈರವನ್ನು ಎಂದು ಮಂಗಲಗಿ-ತೇಂಗಳಿ ಶ್ರೀಶಾಂತೇಶ್ವರ ಹಿರೇಮಠ ಡಾ. ಶಾಂತಸೋಮನಾಥ ಶಿವಾಚಾರ್ಯರು(Dr Shantanath Shivacharya Swamiji) ನುಡಿನಮನದ ಮೂಲಕ ಕಂಬನಿ ಮಿಡಿದಿದ್ದಾರೆ.