ಗಣಿಗಾರಿಕೆ ಮಾರ್ಗ ಬದಲಿಸಿದ ಮಾಲೀಕರು: ರಸ್ತೆಗಾಗಿ ರೈತರ ಭೂಮಿ ಕಬಳಿಕೆ

Published : Mar 15, 2023, 08:33 PM IST
ಗಣಿಗಾರಿಕೆ ಮಾರ್ಗ ಬದಲಿಸಿದ ಮಾಲೀಕರು: ರಸ್ತೆಗಾಗಿ ರೈತರ ಭೂಮಿ ಕಬಳಿಕೆ

ಸಾರಾಂಶ

* ಗಣಿ ಲಾರಿ ಸಂಚಾರಕ್ಕಾಗಿ ಸರ್ಕಾರದ ಹಾದಿಯನ್ನು ಬದಲು * ರೈತರ ಜಮೀನುಗಳ ಅನಧಿಕೃತ ಒತ್ತುವರಿ * ಲಾರಿಗಳ ಓಡಾಟದಿಂದ ಮಾರಣಾಂತಿಕ ಖಾಯಿಲೆಗಳು ಉಲ್ಬಣ

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಮಾ.15): ಭೀಮಸಮುದ್ರ ಗ್ರಾಮದಲ್ಲಿ ಗಣಿಗಾರಿಕೆ ಕಂಪನಿಗಳು ಸರ್ಕಾರಕ್ಕೆ ಸಂಬಂಧಿಸಿದ ಕಾಗೇ ಹಳ್ಳದ ಪಥ ಬದಲಿಸಿರುವ ಪರಿಣಾಮ ನೂರಾರು ರೈತರ ತೋಟಗಳು ಒಣಗಿದ್ದು, ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೆ ಮಾರಣಾಂತಿಕ ಖಾಯಲೆಗಳಿಂದ ಜನರು ನರಳುತ್ತಿದ್ದಾರೆ ಎಂದು ಭೀಮಸಮುದ್ರ ಗಣಿಭಾದಿತ ರೈತ ಎಸ್.ವಿರೇಶ್ ಆರೋಪಿಸಿದ್ದಾರೆ. 

ನಗರದಲ್ಲಿ ಪತ್ರಿಕಾ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಗಣಿಗಾರಿಕೆ ಕಂಪನಿಗಳು ಅಕ್ರಮ ಗಣಿ ಚಟುವಟಿಕೆ ನಡೆಸುವ ಉದ್ದೇಶದಿಂದ ಹಾಗೂ ಅದಿರು ಲಾರಿಗಳ ಸಂಚಾರಕ್ಕಾಗಿ ದಿಂಡದ ಹಳ್ಳಿ ಗ್ರಾಮದ ಕಾಗೇ ಹಳ್ಳವನ್ನು ಬೇರೆಡೆ ಪಥ ಬದಲಿಸಿ, ಸರ್ಕಾರಕ್ಕೂ ವಂಚನೆ ಮಾಡಿದ್ದಾರೆ ಎಂದು ದೂರಿದರು.

ತವರು ಮತಕ್ಷೇತ್ರಕ್ಕೆ ವಾಪಸಾದ ಶ್ರೀರಾಮುಲು: ಬಳ್ಳಾರಿ ಗ್ರಾಮಾಂತರದಿಂದ ಸ್ಪರ್ಧೆ ಖಚಿತ

1,000 ಅಡಿ‌ ಕೊರೆಸಿದರು ನೀರು ದೊರೆಯುತ್ತಿಲ್ಲ: ಈ ಹಿಂದೆ ಈ ಪ್ರದೇದಶದಲ್ಲಿ ಹಳ್ಳ ಇದ್ದಿದ್ದರಿಂದ ಕೇವಲ 150 ಅಡಿಗೆ ಕೊಳವೆ ಬಾವಿಗೆ ನೀರು ಸಿಗುತ್ತಿತ್ತು. ಪ್ರಸ್ತುತ 1,000 ಅಡಿ‌ ಕೊರೆಸಿದರು ನೀರು ದೊರೆಯುತ್ತಿಲ್ಲ. ಇದರಿಂದ ತೆಂಗು, ಅಡಿಕೆ, ಬಾಳೆ ತೋಟಗಳು ಒಣಗಿ ಹೋಗುತ್ತಿದ್ದು, ರೈತರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಭೀಮಸಮುದ್ರದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಗಳ ಕುರಿತು 2008 ರಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಅಧಿಕಾರಿಗಳು ಪರಿಶೀಲಿಸಿ, ಪಥ ಬದಲಿಸಲಾಗಿದೆ ಎಂದು ವರದಿಯನ್ನು ನೀಡಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಆದ್ದರಿಂದ ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲು ಏರಿದ್ದು, ವಿಚಾರಣೆ ಹಂತದಲ್ಲಿದೆ ಎಂದರು. ಅಕ್ರಮ ಗಣಿಗಾರಿಕೆ ಸಂಬಂಧ ಈಗಾಗಲೇ ಸಂಬಂಧಿಸಿದ ಕಚೇರಿಗೆ ದೂರು ನೀಡಿದ್ದೆನೆ. 

ರೈತರ ತೋಟಗಳಿಗೆ ರಕ್ಷಣೆಯೇ ಇಲ್ಲ: ರೈತರ ತೋಟಗಳಿಗೆ ರಕ್ಷಣೆ ಇಲ್ಲದಾಗಿದೆ. ಆದ್ದರಿಂದ 2021 ರಲ್ಲಿ ಉಚ್ವ ನ್ಯಾಯಾಲಯ ಅಕ್ರಮ ಗಣಿಗಾರಿಕೆಗೆ ತಡೆಯಾಜ್ಞೆ ಆದೇಶ ಹೊರಡಿಸಿದ್ದು, ಪ್ರತಿಯನ್ನು ತಾಲ್ಲೂಕು ಕಚೇರಿಗೆ ತಲುಪಿಸಲಾಗಿದೆ. ಆದರೂ ಕೂಡ ಆದೇಶ ಪಾಲನೆ ಮಾಡುತ್ತಿಲ್ಲ ಎಂದು ಗಂಭಿರ ಆರೋಪ ಮಾಡಿದರು.

ಬಡ ರೈತನ ಜೀವನ ಕಸಿದುಕೊಂಡ ಕೆರೆಯ ನೀರು, 9 ಲಕ್ಷ ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕಿದ ರೈತ!

ಗಣಿಗಾರಿಕೆ ಧೂಳನಿಂದ ಮಾರಣಾಂತಿಕ ಕಾಯಿಲೆ ಉಲ್ಬಣ:  ಡಾ.ವಿಜಯಕುಮಾರ್ ಮಾತನಾಡಿ, ಭೀಮಸಮುದ್ರ ಸುತ್ತಮುತ್ತಲಿನ ಸಾಕಷ್ಟು ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಹೆಚ್ಚಾಗಿ ನಡೆಯುತ್ತಿರುವುದರಿಂದ  ಸಾಕಷ್ಟು ದೂಳು ನಿರ್ಮಾಣವಾಗಿದೆ ಇದರಿಂದಾಗಿ ಈ ಭಾಗದ ಜನರಲ್ಲಿ ಸಾಕಷ್ಟು ಮಾರಣಾಂತಿಕ ಖಾಯಿಲೆಗಳು ತುಂಬಿಕೊಳ್ಳುತ್ತಿವೆ ಎಂದು ಹೇಳಿದ ಅವರು, ಗಣಿ ಸಂಬಂಧಿತ ಚಟುವಟಿಕೆ ನಿರ್ಭಂಧಿಸಲು ನಾಲೆಯ ದಿಂಡದ ಹಳ್ಳಿ ಗ್ರಾಮದ ಬಳಿ ನಾಳೆ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು..

PREV
Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!