ಹುಟ್ಟಿದ ಮನೆ, ಬಾಲ್ಯ ಸ್ನೇಹಿತರನ್ನು ಕಂಡು ಕಣ್ಣೀರಿಟ್ಟ ಸಿಎಂ ಬಸವರಾಜ ಬೊಮ್ಮಾಯಿ

Published : Mar 15, 2023, 03:45 PM IST
ಹುಟ್ಟಿದ ಮನೆ, ಬಾಲ್ಯ ಸ್ನೇಹಿತರನ್ನು ಕಂಡು ಕಣ್ಣೀರಿಟ್ಟ ಸಿಎಂ ಬಸವರಾಜ ಬೊಮ್ಮಾಯಿ

ಸಾರಾಂಶ

ಕಮಡೋಳ್ಳಿ ಗ್ರಾಮದಲ್ಲಿ ತಮ್ಮ ಸಂಬಂಧಿಕರು ಹಾಗೂ ಬಾಲ್ಯ ಸ್ನೇಹಿತರನ್ನು ನೋಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ಷಣಕಾಲ ಭಾವುಕರಾದರು.

ಹುಬ್ಬಳ್ಳಿ (ಮಾ.15): ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕಮಡೋಳ್ಳಿ ಗ್ರಾಮದಲ್ಲಿ ತಮ್ಮ ಸಂಬಂಧಿಕರು ಹಾಗೂ ಬಾಲ್ಯ ಸ್ನೇಹಿತರನ್ನು ನೋಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ಷಣಕಾಲ ಭಾವುಕರಾದರು. ಕಮ್ಮಡೊಳ್ಳಿಯ ತಮ್ಮ ನಿವಾಸದಲ್ಲಿ ಸಿಎಂ ಬೊಮ್ಮಾಯಿ ಕಣ್ಣೀರು ಹಾಕಿದರು. 

ತಂದೆ, ತಾಯಿ ಬದುಕಿ ಬಾಳಿದ ಹಾಗೂ ತಾವು ಹುಟ್ಟು ಬೆಳೆದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕಮಡೋಳ್ಳಿ ಗ್ರಾಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನಿಡಿರು. ಈ ವೇಳೆ ತಮ್ಮ ಬಾಲ್ಯದ ನೆನಪು ಮೆಲುಕು ಹಾಕಿದ ಅವರು, ತಮ್ಮ ಸ್ನೇಹಿತರನ್ನು ಕಂಡು ಕಣ್ಣೀರು ಹಾಕಿದರು. ತಾವು ಸಿಎಂ ಹುದ್ದೆಗೆ ಏರಲು ಸ್ನೇಹಿತರು ಮಾಡಿದ್ದ ಸಹಾಯವನ್ನು ನೆನೆದರು. ಜೊತೆಗೆ, ಸ್ನೇಹಿತರು ಸಂಬಂಧಿಕರನ್ನ ನೋಡಿ ಭಾವುಕಾರದರು. 

ಪಂಜಾಬ್‌ ರೀತಿ ಕೊಪ್ಪಳದಲ್ಲಿ 100 ಆಹಾರ ಸಂಸ್ಕರಣಾ ಘಟಕ: ಸಿಎಂ ಬೊಮ್ಮಾಯಿ

ನಮ್ಮ ಹಿರಿಯರೆಲ್ಲರೂ ನೆನಪಾಗುತ್ತಾರೆ: ಬಳಿಕ‌ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ನಮ್ಮ ಪೂರ್ವಜರು ಬದುಕಿ ಬಾಳಿದಂತಹ ಮನೆ ಇದಾಗಿದೆ.  ನಮ್ಮ ತಂದೆ ಇದ್ದಂತಹ ಮನೆ. ಎಲ್ಲ ಹಿರಿಯರು ಸ್ನೇಹಿತರು ನೆನಪು ಆಗುತ್ತಿದ್ದಾರೆ. ಚಿಕ್ಕಂದಿನಲ್ಲಿ ಸ್ನೇಹಿತರು ಜತೆಗೆ ಕಳೆದ ಆಟಗಳು ಕ್ಷಣಗಳ ಎಲ್ಲವೂ ನೆನಪು ಆಗುತ್ತದೆ. ಬಹಳ ಸುಂದರ ಗ್ರಾಮ ನನ್ನದು. ಒಳ್ಳೆಯ ಕೆರೆ, ದೇವಸ್ಥಾನಗಳಿವೆ. 52 ದಶಕಗಳ ಹಿಂದೆಯೇ ಒಳ್ಳೆಯದು ಲೈಬ್ರರಿ ಇರೋ ಗ್ರಾಮ ನಮ್ಮದು. ನಮ್ಮ ಗ್ರಾಮದಲ್ಲಿ ಫಲವತ್ತಾದ ಜಮೀನು‌ ಇದೆ. ಕಷ್ಟಪಟ್ಟು ದುಡಿಯುವ ಜನ ಬಹಳ ಸಜ್ಜನರು ಎಂದು ಹೇಳಿದರು.

ಬೋರ್‌ವೆಲ್‌ ಕೊರೆಸಿ ನೀರು ಕೊಟ್ಟ ತಂದೆ: ನಮ್ಮ ಗ್ರಾಮದಲ್ಲಿ ಯಾವಾಗಲೂ ನೀರಿನ ಕೊರತೆ ಇತ್ತು. ನಮ್ಮ ತಂದೆಯವರು ಬೋರವೆಲ್ ಕೊರೆಸುವ ಮೂಲಕ ಗ್ರಾಮಕ್ಕೆ ನೀರನ್ನು ಕೊಡಲಾಗಿತ್ತು. ನಂತರ, ನಮ್ಮ ಗ್ರಾಮದಲ್ಲಿ ಸವಳು ನೀರು ಇರೋದ್ರಿಂದ ಪಕ್ಷದ ಶಿರೂರ ಗ್ರಾಮದಿಂದ ನಾನು ನೀರು ತಂದಿರೋದು ನೆನಪು ಇದೆ. ಆದರೀಗ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶೀರ್ವಾದಿಂದ ಜಲಜೀವನ ಮಿಷನ್ ಯೋಜನೆ ಜಾರಿಗೊಳಿಸಿ ಈ ಯೋಜನೆಯಿಂದ ಪ್ರತಿಯೊಂದು ಮನೆ, ಮನೆಗೆ ನೀರಿನ ವ್ಯವಸ್ಥೆ ಮಾಡಿದ್ದೇವೆ. ಬಹಳವರ್ಷದ ನೀರಿನ ಸಮಸ್ಯೆ ಬಗೆ ಹರಿದಿರೋದು ಸಂತಸ ತಂದಿದೆ ಎಂದು ತಿಳಿಸಿದರು.

ಗಂಗಾವತಿ: ಅಂಜನಾದ್ರಿ ಬೆಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬೊಮ್ಮಾಯಿ ಭೂಮಿ ಪೂಜೆ

ನಮ್ಮ ಜನರ ಭೇಟಿಯಾಗುತ್ತಿರುವುದು ಸಂತಸ: ಗ್ರಾಮದ ಜನರು ಬಹಳ ಪ್ರೀತಿ ವಿಶ್ವಾಸ ತೋರಿಸಿದ್ದಾರೆ. ಊರಿನ ಮಗ ರಾಜ್ಯದ ಮುಖ್ಯಸ್ಥರಾದಾಗ ಬಹಳ ದಿನಗಳ ನಂತರ ನಮ್ಮ ಗ್ರಾಮಕ್ಕೆ ಬಂದಿದ್ದೇನೆ. ದೇವರ ದರ್ಶನ ಆಗಿದೆ. ನಮ್ಮ ಜನರನ್ನು ಭೇಟಿ ಆಗಲು ಅವಕಾಶ ಸಿಕ್ಕಿದೆ ಎಂದು ಬಾಗಿಲ ಬಳಿಯೇ ಭಾವುಕರಾದರು. ನಂತರ, ನಮ್ಮ ಆತ್ಮೀಯರನ್ನು ನೋಡಿದಾಕ್ಷಣ ಆನಂದವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

PREV
Read more Articles on
click me!

Recommended Stories

ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!
ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?