ಹಾಲಿನ ದರ ಭರ್ಜರಿ ಏರಿಕೆ : ಉತ್ಪಾದಕರಿಗಿದು ಗುಡ್ ನ್ಯೂಸ್

By Kannadaprabha News  |  First Published Jan 31, 2021, 8:45 AM IST

ಹಾಲಿನ ದರದಲ್ಲಿ ಏರಿಕೆ ಮಾಡಿದ ಆದೇಶ. ಉತ್ಪಾದಕರಿಗೆ ಸಿಗಲಿದೆ ಹೆಚ್ಚುವರಿ ಹಣ.ಫೆಬ್ರವರಿ 1 ರಿಂದಲೇ ದರ ಹೆಚ್ಚಳ ಜಾರಿ 


 ತುಮಕೂರು (ಜ.31):  ಹಾಲು ಉತ್ಪಾದಕರ ಹಿತದೃಷ್ಠಿಯಿಂದ 2021 ರ ಫೆ.1 ರಿಂದ ಜಾರಿಗೆ ಬರುವಂತೆ ಉತ್ಪಾದಕರಿಗೆ 2 ರು. ಹಾಲಿನ ದರ ಹೆಚ್ಚಿಸಲಾಗಿದ್ದು, ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ಹೆಚ್ಚಳ ಮಾಡಿರುವುದಿಲ್ಲ ಎಂದು ಜಿಲ್ಲಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ ತಿಳಿಸಿದರು.

ಅವರು ತುಮಕೂರಿನ ನಂದಿನಿ ವಸತಿ ನಿಲಯದಲ್ಲಿ  ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Tap to resize

Latest Videos

2019ರ ಫೆಬ್ರವರಿಯಲ್ಲಿ 1.50 ರೂ, ಆಗಸ್ಟ್‌ನಲ್ಲಿ 1.50ರೂ, ನವೆಂಬರ್‌ ನಲ್ಲಿ 1ರೂ, ಹಾಗೂ 2020 ರಿಂದ 1.50ರೂ ಸೇರಿ ಒಟ್ಟಾರೆ 5.50 ರೂ. ದರ ಹೆಚ್ಚಿಸಲಾಗಿತ್ತು ಎಂದು ಹೇಳಿದರು.

ಹಾಲು ಕುಡಿದರೆ ಅಲರ್ಜಿಯಾ..? ಈ ಹಾಲನ್ನು ಕುಡಿಯಬಹುದು ತೊಂದರೆ ಇಲ್ಲ ..

ಪ್ರಸ್ತುತ ತುಮಕೂರು ಸಹಕಾರಿ ಹಾಲು ಉತ್ಪಾದಕ ಒಕ್ಕೂಟವು ಜಿಲ್ಲೆಯ ಹಾಲು ಉತ್ಪಾದಕರಿಗೆ ದಿನವಹಿ 2.10 ಕೋಟಿ ರೂ. ಬಟವಾಡೆ ಮಾಡುತ್ತಿದ್ದು, ಹಾಲು ಉತ್ಪಾದಕ ಹಿತದೃಷ್ಟಿಯಿಂದ ಹಾಲಿದ ದರ ಪರಿಷ್ಕರಿಸಿ ದರ ಹೆಚ್ಚಳ ಮಾಡುತ್ತಾ ಬರಲಾಗಿದೆ. ತುಮಕೂರು ಸಹಕಾರಿ ಹಾಲು ಒಕ್ಕೂಟದ ಹಾಲು ಶೇಖರಣೆ ದಿನೇ ದಿನೇ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿದ್ದು, 2020-21ರ ಡಿಸೆಂಬರ್‌ ಅಂತ್ಯಕ್ಕೆ ದಿನವಹಿ ಸರಾಸರಿ 7,79,534ಕೆ.ಜಿ ಹಾಲು ಶೇಖರಣೆಯಾಗಿದ್ದು, 2020ರ ಜುಲೈ 28ರಂದು 8,77,087ಕೆ.ಜಿ ಹಾಲು ಶೇಖರಿಸಿ ಸಾರ್ವಕಾಲಿಕ ದಾಖಲೆ ನಿರ್ಮಿಸಲಾಗಿದೆ ಎಂದು ಹೇಳಿದರು.

ಒಕ್ಕೂಟ ನೀಡುತ್ತಿರುವ ಹಾಲಿನ ದರದ ಜೊತೆಗೆ ಕರ್ನಾಟಕ ಸರ್ಕಾರದ 5 ರೂ. ಪೋ›ತ್ಸಾಹಧನವನ್ನೂ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಇನ್ನೂ ಹೆಚ್ಚಿನ ಹಾಲಿನ ಉತ್ಪಾದನೆ ಮಾಡಲು ಮತ್ತು ಖಾಸಗಿಯವರಿಗೆ ಸರಬರಾಜು ಮಾಡುತ್ತಿರುವ ಹಾಲನ್ನು ನಿಲ್ಲಿಸಿ, ಸಂಘಗಳಿಗೆ ಗುಣಮಟ್ಟದ ಹಾಲು ಸರಬರಾಜು ಮಾಡಬೇಕೆಂದು ಮನವಿ ಮಾಡಿದರು.

click me!