ಇದೀಗ ರಮೇಶ್ ಜಾರಕಿಹೊಳಿ ಸಹೋದರ ಸತೀಶ್ ಜಾರಕಿಹೊಳಿ ಬಿಜೆಪಿ ವಿಚಾರವಾಗಿ ಮಾತನಾಡಿದ್ದಾರೆ. ಬಿಜೆಪಿ ಮುಖಂಡರಿಗೆ ಈ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ಇದೆ ಎಂದು ಹೇಳಿದ್ದಾರೆ.
ಚಾಮರಾಜನಗರ (ಜ.31): ಮೂರು ರಾಜ್ಯಗಳಲ್ಲೂ ಬಿಜೆಪಿ ಸರ್ಕಾರ ಇದೆ. ಆದರೂ ಯಾಕೆ ಮಹಾದಾಯಿ ನದಿ ಸಮಸ್ಯೆ ಇತ್ಯರ್ಥ ಆಗಿಲ್ಲ ಎಂದು ಕೆಪಿಸಿಸಿ ಕಾರಾರಯಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.
ಗಡಿ ಸಂಘರ್ಷ ವಿಚಾರದಲ್ಲಿ ಬೆಳಗಾವಿಯಲ್ಲಿರುವ ಮೈತ್ರಿ ಸರ್ಕಾರದ ಕಾಂಗ್ರೆಸ್ ಹೆಚ್ಚು ಮಾತನಾಡಬೇಕು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಕೊಳ್ಳೇಗಾಲದಲ್ಲಿ ಉತ್ತರಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿರುವುದರಿಂದ ನಮಗಿಂತ ಹೆಚ್ಚಿನ ಜವಾಬ್ದಾರಿ ಬಿಜೆಪಿಗಿದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ನಾವು ಈಗಾಗಲೇ ಈ ಬಗ್ಗೆ 10 ಸಲ ಈ ಬಗ್ಗೆ ಧ್ವನಿ ಎತ್ತಿದ್ದೇವೆ ಎಂದು ಹೇಳಿದರು.
undefined
ಇನ್ನು ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಬೇಕೆನ್ನುವುದು ಮುಗಿದ ಅಧ್ಯಾಯ, ಮಹಾರಾಷ್ಟ್ರ ಕೇಳುತ್ತೆ ಅಂತ ಕೊಡುವುದಕ್ಕೆ ಆಗುತ್ತದೆಯೇ? ಕೊಡುವವರು ಯಾರು? ಬೆಳಗಾವಿ ಕರ್ನಾಟಕದಲ್ಲೇ ಇರುತ್ತೆ. ಬೆಳಗಾವಿಯನ್ನು ಕರ್ನಾಟಕದಿಂದ ಬೇರ್ಪಡಿಸಲು ಯಾರಿಂದಲೂ ಸಾಧ್ಯವೇ ಇಲ್ಲ ಎಂದು ಹೇಳಿದರು.
ಬಿಜೆಪಿಯದು ದೊಂಬರಾಟದ ಸರ್ಕಾರ: ಜಾರಕಿಹೊಳಿ ...
ಮಹಾರಾಷ್ಟ್ರದಲ್ಲಿ ಯಾವುದೇ ಹೊಸ ಹೊಸ ಸರ್ಕಾರ ಬಂದರೂ ಬೆಳಗಾವಿ ತಮ್ಮದು, ತಮಗೆ ಕೊಡಿ ಅಂತ ಕೇಳುತ್ತಾರೆ. ರಾಜಕೀಯ ಉದ್ದೇಶಕ್ಕಾಗಿ ಹೀಗೆಲ್ಲ ಮಾತನಾಡುತ್ತಾರೆ ಎಂದರು.
ಕರ್ನಾಟಕದಲ್ಲಿ ಉಗಮವಾಗುವ ಮಹದಾಯಿ ನಮಗೂ ತಾಯಿಯಾಗಿದ್ದು, ನಾವೂ ನಮ್ಮ ತಾಯಿಯನ್ನು ಬಿಟ್ಟುಕೊಡುವುದಿಲ್ಲ. ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ ವಿವಾದ ಮುಗಿದ ಅಧ್ಯಾಯ. ಆದರೆ ನಮ್ಮ ರಾಜಕಾರಣಿಗಳ ಬೆಂಬಲದಿಂದ ಗೋವಾದ ಮುಖ್ಯಮಂತ್ರಿ ಮಹದಾಯಿ ಬಗ್ಗೆ ಕ್ಯಾತೆ ತೆಗೆಯುತ್ತಿದ್ದಾರೆ.
- ವೀರೇಶ ಸೊಬರದಮಠ ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ