ಜೆಡಿಎಸ್‌ನತ್ತ ಹೋಗುತ್ತಿದ್ದಾರಾ ಬಿಜೆಪಿ ಅಸಮಾಧಾನಿತ ಮುಖಂಡ..?

Kannadaprabha News   | Asianet News
Published : Jan 31, 2021, 07:39 AM ISTUpdated : Jan 31, 2021, 07:44 AM IST
ಜೆಡಿಎಸ್‌ನತ್ತ ಹೋಗುತ್ತಿದ್ದಾರಾ ಬಿಜೆಪಿ ಅಸಮಾಧಾನಿತ ಮುಖಂಡ..?

ಸಾರಾಂಶ

ಇತ್ತ ಎಚ್ ಡಿ ಕುಮಾರಸ್ವಾಮಿ  ಅಸಮಾಧಾನದಿಂದ ಕಿಡಿಕಾರುತ್ತಿರುವ ಬಿಜೆಪಿ ಮುಖಂಡರನ್ನು ಭಾರೀ ಹೊಗಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ನಾವಿಬ್ಬರು ಒಳ್ಳೆ ಗೆಳೆಯರು ಎಂದು ಆ ಬಿಜೆಪಿ ಮುಖಂಡ ಹೇಳಿದ್ದಾರೆ.   

ವಿಜಯಪುರ (ಜ.31): ನೀವು ಒಳ್ಳೆಯ ನಾಯಕರು. ನಿಮ್ಮನ್ನು ನಾವು ಬಿಟ್ಟು ತಪ್ಪು ಮಾಡಿದ್ದೇವೆ. ಕರ್ನಾಟಕದಲ್ಲಿ ನಿಜವಾದ ವಿಪಕ್ಷದ ನಾಯಕರು ಎಂದರೆ ನೀವೇ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ಶುಕ್ರವಾರವಷ್ಟೇ ಸಿಂದಗಿಯಲ್ಲಿ ಮಾಜಿ ಸಚಿವ ಎಂ.ಸಿ.ಮನಗೂಳಿ ಅಂತ್ಯಕ್ರಿಯೆ ವೇಳೆ ಎಚ್‌.ಡಿ.ಕುಮಾರಸ್ವಾಮಿ ಅಕ್ಕಪಕ್ಕದಲ್ಲಿಯೇ ಆಸೀನರಾಗಿ ದೀರ್ಘ ಸಮಾಲೋಚನೆ ನಡೆಸಿದ್ದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ, ಕುಮಾರಸ್ವಾಮಿ ಹಾಗೂ ತಮ್ಮ ನಡುವೆ ಹಳೆಯ ಸಂಬಂಧವಿದೆ. ನಾವು ಗೆಳೆಯರಾಗಿ ಮಾತನಾಡಿದ್ದೇವೆ ಎಂದರು.

ಮತ್ತೊಂದು ಹೊಸ ಬಾಂಬ್‌ ಸಿಡಿಸಿದ ಯತ್ನಾಳ್..!

ಕುಮಾರಸ್ವಾಮಿ ಜೆಡಿಎಸ್‌ಗೆ ಬರಲು ತಮಗೆ ಆಹ್ವಾನಿಸಿದರೆ ಎಂಬ ಪ್ರಶ್ನೆಗೆ ಉತ್ತರಿಸಿದ ಯತ್ನಾಳ, ನಾನು ಎಲ್ಲಿಯೂ ಹೋಗುವುದಿಲ್ಲ. ನಾನು ಬಿಜೆಪಿಯಲ್ಲಿಯೇ ಇರುತ್ತೇನೆ. ನಾನು ಬ್ಲ್ಯಾಕ್‌ಮೇಲ್‌ ಮಾಡಲು ಬ್ಲ್ಯಾಕ್‌ಮೇಲ್‌ ರಾಜಕಾರಣಿ ಅಲ್ಲ ಎಂದರು.

PREV
click me!

Recommended Stories

KSRTC ಬಸ್ ಡ್ರೈವರ್ ಹಾರ್ನ್ ಮಾಡಿದ್ದೇ ತಪ್ಪಾಯ್ತಂತೆ; ಊರಿನ ಜನರೆಲ್ಲಾ ಸೇರಿಕೊಂಡು ಧರ್ಮದೇಟು ಕೊಟ್ಟರು!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ