
ಬೆಂಗಳೂರು (ಮಾ.25): ವೀಕೆಂಡ್ (Weekend) ಬಂತಂದ್ರೆ ಸಿಲಿಕಾನ್ ಸಿಟಿ (Bengaluru) ಮಂದಿ ಒಂದಷ್ಟು ಮೋಜು ಮಸ್ತಿ ಅಂತಾ ಟೈಂಪಾಸ್ ಮಾಡ್ತಾರೆ. ಎಂ.ಜಿ ರೋಡ್, ಬ್ರಿಗೇಡ್ ರಸ್ತೆ, ಇಂದಿರಾನಗರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಕಾಲ ಕಳಿತಾರೆ. ಜೊತೆಗೆ ತಮ್ಮ ಸ್ವಂತ ವಾಹನಗಳನ್ನು ಬಿಟ್ಟು ಮೆಟ್ರೋ (Namma Metro) ರೈಲು ಏರಿ ಪ್ರಯಾಣ ಮಾಡ್ತಾರೆ. ಆದರೆ ಈ ವೀಕೆಂడ్ನಲ್ಲಿ ಎಂ.ಜಿ ರೋಡ್, ಬ್ರಿಗೇಡ್, ಇಂದಿರಾನಗರ ಕಡೆ ಬರೋ ಪ್ರಯಾಣಿಕರಿಗೆ ಮೆಟ್ರೋ ಶಾಕಿಂಗ್ ನ್ಯೂಸ್ ನೀಡುತ್ತಿದೆ.
ಶನಿವಾರ ರಾತ್ರಿ 9:30ರಿಂದ ಎಂ.ಜಿ.ರಸ್ತೆಯಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸೇವೆ ಇರುವುದಿಲ್ಲ. ಇಂದಿರಾ ನಗರ ಮತ್ತು ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣಗಳ ನಡುವೆ ಸಿವಿಲ್ ಕಾಮಗಾರಿ ನಡೆಸಬೇಕಿರುವುದರಿಂದ ತಾತ್ಕಾಲಿಕವಾಗಿ ಈ ಭಾಗದಲ್ಲಿ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಆದರೆ ಈ ಅವಧಿಯಲ್ಲಿ ಎಂ.ಜಿ.ರಸ್ತೆಯಿಂದ ಕೆಂಗೇರಿ ಮಧ್ಯೆ ಎಂದಿನಂತೆ ಮೆಟ್ರೋ ಸೇವೆ ಇರಲಿದೆ.
ಕೆಂಗೇರಿಯಿಂದ ಬೈಯ್ಯಪ್ಪನಹಳ್ಳಿಗೆ ಹೊರಡುವ ಕೊನೆಯ ರೈಲು ರಾತ್ರಿ 9 ಕ್ಕೆ ಹೊರಡಲಿದೆ. ಅದೇ ಬೈಯ್ಯಪ್ಪನಹಳ್ಳಿಯಿಂದ ಕೆಂಗೇರಿಗೆ ಕೊನೆಯ ರೈಲು ರಾತ್ರಿ 9:30ಕ್ಕೆ ಹೊರಡಲಿದೆ. ಹಸಿರು ಮಾರ್ಗದಲ್ಲಿ ಮೆಟ್ರೋ ಸೇವೆ ಎಂದಿನಂತೆ ಇರಲಿದೆ. ಭಾನುವಾರ ಬೆಳಗ್ಗೆ 7 ಗಂಟೆಯಿಂದ ಎಂದಿನಂತೆ ಮೆಟ್ರೋ ಸೇವೆ ಇರಲಿದೆ ಎಂದು ಮೆಟ್ರೋ ರೈಲು ನಿಗಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
Bengaluru ಕುರಿತ ಈ ವಿಷಯಗಳು ಸ್ವತಃ ಬೆಂಗಳೂರಿಗರಿಗೇ ಗೊತ್ತಿಲ್ಲ!
ಕೊರೋನಾ ಹೊಡೆತಕ್ಕೆ ನಲುಗಿದ ಮೆಟ್ರೋ: ನಮ್ಮ ಮೆಟ್ರೋ ನಿಗಮ ತನ್ನ 2020-21ರ ಸಾಲಿನಲ್ಲಿ ಕೇವಲ 81.97 ಕೋಟಿ ಆದಾಯಗಳಿಸಿದೆ. 2019-20ರ ಸಾಲಿಗೆ ಹೋಲಿಸಿದರೆ ಶೇ.83ರಷ್ಟು ಆದಾಯವನ್ನು (Revenue) ಮೆಟ್ರೋ ನಿಗಮ ಕಳೆದುಕೊಂಡಿದೆ. ಒಟ್ಟಾರೆ ನಮ್ಮ ಮೆಟ್ರೋ ಕೊರೋನಾ (Coronavirus) ವರ್ಷದಲ್ಲಿ 905 ಕೋಟಿ ನಷ್ಟ ಅನುಭವಿಸಿದೆ.
2020ರ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಕೋವಿಡ್ (Covid-19) ಕಾರಣದಿಂದ ಲಾಕ್‌ಡೌನ್ (Lockdown) ಜಾರಿಯಾದ ಹಿನ್ನೆಲೆಯಲ್ಲಿ ಮೆಟ್ರೋ ಸೇವೆ ಬಂದ್ ಆಗಿತ್ತು. ಆ ಬಳಿಕ ಸೆಪ್ಟೆಂಬರ್ 6ಕ್ಕೆ ಮೆಟ್ರೋ ಸೇವೆ ಭಾಗಶಃ ಆರಂಭಗೊಂಡಿತ್ತು. ಆ ಆರ್ಥಿಕ ವರ್ಷದಲ್ಲಿ ಎರಡ್ಮೂರು ತಿಂಗಳು ಮಾತ್ರ ಮೆಟ್ರೋ ಸೇವೆ ಪೂರ್ಣ ಪ್ರಮಾಣದಲ್ಲಿ ಜಾರಿಯಲ್ಲಿತ್ತು. ಜನರ ಓಡಾಟಕ್ಕಿದ್ದ ನಿರ್ಬಂಧ ಮತ್ತು ಅನೇಕ ಕಂಪನಿಗಳು ಮನೆಯಿಂದಲೇ ಕೆಲಸಕ್ಕೆ ಒತ್ತು ನೀಡಿದ್ದು ಮೆಟ್ರೋದ ಗಳಿಕೆಯ ಮೇಲೆ ಭಾರಿ ಹೊಡೆತ ನೀಡಿದೆ.
2017-18ರ ಸಾಲಿನಲ್ಲಿ .539 ಕೋಟಿ, 2018-19ರಲ್ಲಿ .536 ಕೋಟಿ ಮತ್ತು 2019-20ರಲ್ಲಿ .476 ಕೋಟಿ ಆದಾಯವನ್ನು ಮೆಟ್ರೋ ಗಳಿಸಿತ್ತು. 2019-20 ಆರ್ಥಿಕ ವರ್ಷದ ಕೊನೆಯ ತಿಂಗಳಿನಲ್ಲಿ ಕೋವಿಡ್‌ನ ಆತಂಕ ಮತ್ತು ಲಾಕ್‌ಡೌನ್ ಹೇರಿದ್ದರಿಂದ ಆ ಸಾಲಿನಲ್ಲಿ ಮೆಟ್ರೋದ ಆದಾಯ 500 ಕೋಟಿ ತಲುಪಲಿಲ್ಲ. 2020ರ ಆರ್ಥಿಕ ವರ್ಷ ಲಾಕ್‌ಡೌನ್‌ನಿಂದಲೇ ಆರಂಭಗೊಂಡಿತ್ತು. ಸುಮಾರು 6 ತಿಂಗಳ ಕಾಲ ಮೆಟ್ರೋ ಸೇವೆ ಮುಚ್ಚಿತ್ತು. ಸೆಪ್ಟೆಂಬರ್ 6ಕ್ಕೆ ಮೆಟ್ರೋ ಸೇವೆ ಭಾಗಶಃ ಆರಂಭಗೊಂಡಿತ್ತು. ಇದರಿಂದ ಈ ಹಿಂದಿನ ವರ್ಷಗಳಲ್ಲಿ .400 ಕೋಟಿ ದಾಟಿದ್ದ ಪ್ರಯಾಣ ದರ ಸಂಗ್ರಹ ಕೇವಲ .73.56 ಕೋಟಿಗೆ ಕುಸಿದಿದೆ.
Bengaluru: ಮೆಟ್ರೋ ರೈಲಿನಿಂದ ನಗರದ ಮಾಲಿನ್ಯ ಇಳಿಕೆ!
ಹಾಗೆಯೇ ಪ್ರಯಾಣ ದರಯೇತರ ಆದಾಯ ಕೂಡ ಕೇವಲ .8.41 ಕೋಟಿ ಸಂಗ್ರಹವಾಗಿದೆ. ಇದು ಮೆಟ್ರೋ ಸೇವೆ ಆರಂಭಗೊಂಡ ಬಳಿಕ ಸಂಗ್ರಹವಾಗ ಕನಿಷ್ಠ ಪ್ರಯಾಣ ದರಯೇತರ ಆದಾಯವಾಗಿದೆ. ಪ್ರಯಾಣದರ ಹೊರತಾದ ಆದಾಯ ಸಂಗ್ರಹ ಕುಸಿಯಲು ಮೆಟ್ರೋದ ಹೊರಾಂಗಣ, ಕಂಬಗಳಲ್ಲಿ ಜಾಹೀರಾತು (Advertisement) ಹಾಕಲು ಇರುವ ನಿರ್ಬಂಧ, ಲಾಕ್‌ಡೌನ್ ಕಾರಣದಿಂದ ಮೆಟ್ರೋ ಆವರಣದಲ್ಲಿ ವಾಣಿಜ್ಯ ಚಟುವಟಿಕೆಗಳಿಂದ ಬಾಡಿಗೆ ಪಡೆಯುವುದನ್ನು ಸ್ಥಗಿತಗೊಳಿಸಿದ್ದು ಪ್ರಮುಖ ಕಾರಣ ಎಂದು ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ.