ಬೆಳಗಾವಿ ಅಧಿವೇಶನ ಆರಂಭ ದಿನವೇ ಕ್ಯಾತೆ ತಗೆಯಲು ಮುಂದಾದ ಎಂಇಎಸ್!

By Ravi JanekalFirst Published Dec 19, 2022, 8:07 AM IST
Highlights

ಇಂದು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಅಧಿವೇಶನ ಆರಂಭದ ದಿನವೇ ಕ್ಯಾತೆ ತೆಗೆಯಲು ಶುರು ಮಾಡಿದ ಎಂಇಎಸ್. ಜಿಲ್ಲಾಧಿಕಾರಿ ಅನುಮತಿ ನೀಡದಿದ್ದರೂ, ಬೆಳಗಾವಿ ಅಧಿವೇಶನಕ್ಕೆ ವಿರುದ್ಧವಾಗಿ ಮಹಾಮೇಳಾವ್ ನಡೆಸಲು ಮುಂದಾಗಿರುವ ಎಂಇಎಸ್ ನಾಯಕರು.

ಬೆಳಗಾವಿ (ಡಿ.19) : ಇಂದು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಅಧಿವೇಶನ ಆರಂಭದ ದಿನವೇ ಕ್ಯಾತೆ ತೆಗೆಯಲು ಶುರು ಮಾಡಿದ ಎಂಇಎಸ್. ಜಿಲ್ಲಾಧಿಕಾರಿ ಅನುಮತಿ ನೀಡದಿದ್ದರೂ, ಬೆಳಗಾವಿ ಅಧಿವೇಶನಕ್ಕೆ ವಿರುದ್ಧವಾಗಿ ಮಹಾಮೇಳಾವ್ ನಡೆಸಲು ಮುಂದಾಗಿರುವ ಎಂಇಎಸ್.ನಾಯಕರು

ಇಂದು ಬೆಳಗ್ಗೆ 11 ಗಂಟೆಗೆ ವ್ಯಾಕ್ಸಿನ್ ಡಿಪೋಗೆ ಆಗಮಿಸುವಂತೆ ಎಂಇಎಸ್ ಕರೆ ನೀಡಿದ್ದಾರೆ. ಈ ಬೆಳವಣಿಗೆ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಹದಗೆಡುವ ಹಿನ್ನೆಲೆ ಕಲಂ 143 (3) ಅನ್ವಯ ಸಂಸದ ಧೈರ್ಯಶೀಲ್​ ಬೆಳಗಾವಿ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್  ಆದೇಶ‌ ಹೊರಡಿಸಿದ್ದಾರೆ. ಅದ್ಯಾಗೂ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಬೆಳಗಾವಿಗೆ ಬರುತ್ತೇನೆ. ಮಹಾಮೇಳವ ನಡೆಸಿಯೇ ಎನ್ನುತ್ತಿರುವ ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷ, ಸಂಸದ ಧೈರ್ಯಶೀಲಮಾನೆ.

Winter Session: ಇಂದಿನಿಂದ ಉತ್ತರಾಧಿವೇಶನ: ಸರ್ಕಾರ V/s ಕಾಂಗ್ರೆಸ್‌ ಕದನ!

'ವ್ಯಾಕ್ಸಿನ್ ಡಿಪೋ ಚಲೋ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿರುವ ಎಂಇಎಸ್. ಬೆಳಗಾವಿಯ ಟಿಳಕವಾಡಿಯ ವ್ಯಾಕ್ಸಿನ್ ಡಿಪೋಗೆ ಆಗಮಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಅಲರ್ಟ್ ಆಗಿದ್ದಾರೆ. ವ್ಯಾಕ್ಸಿನ್ ಡಿಪೋ ಸುತ್ತ ಬ್ಯಾರಿಕೇಡ್ ಅಳವಡಿಸಿ ಓರ್ವ ಎಸಿಪಿ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಬೆಳಗಾವಿಗೆ ಬರುವಂತೆ ಮಹಾರಾಷ್ಟ್ರ ಸಂಸದರಿಗೆ ಎಂಇಎಸ್ ಪತ್ರ ಬರೆದಿರುವ ಹಿನ್ನೆಲೆ, ಸಂಸದ ಧೈರ್ಯಶೀಲ ಮಾನೆ, ಮಾಜಿ ಸಚಿವ ಹಸನ್ ಮುಶ್ರಿಫ್ ಸೇರಿ ಹಲವು ನಾಯಕರು ಆಗಮಿಸುವ ಸಾಧ್ಯತೆ ಇದೆ. ಮಹಾರಾಷ್ಟ್ರ ನಾಯಕರು ಬೆಳಗಾವಿ ಪ್ರವೇಶಿಸಿದಂತೆ ಜಿಲ್ಲಾಡಳಿತ ನಿಷೇಧಿಸಿದ್ದರೂ ಬಂದೇ ತೀರುತ್ತೇವೆ ಎನ್ನುತ್ತಿರುವ ಮಹಾ ಸಂಸದರು.

Assembly session: ಬೆಳಗಾವಿ ಸುವರ್ಣಸೌಧದಲ್ಲಿ ವೀರ್ ಸಾವರ್ಕರ್‌ ಫೋಟೋ ಅನಾವರಣ

ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಟೋಲ್‌ಗೇಟ್ ಅಥವಾ ಮಹಾರಾಷ್ಟ್ರದ ಶಿನೋಳಿ ಮೂಲಕ ಆಗಮನ ಸಾಧ್ಯತೆ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಗಡಿ ಭಾಗದ ಎರಡೂ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ:

ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಈ ನಡುವೆ ಮಹಾರಾಷ್ಟ್ರ ಗಡಿ ವಿವಾದ, ಪಂಚಮಸಾಲಿ ಮೀಸಲಾತಿ, ಒಳಮಿಸಲಾತಿ ವಿಚಾರವಾಗಿ ಹೋರಾಟ ನಡೆಸುವ ಸಾಧ್ಯತೆ ಹಿನ್ನೆಲೆ ಈ ಬಾರಿ ಅತಿ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 
5ಸಾವಿರಕ್ಕೂ ಅಧಿಕ ಪೊಲೀಸರಿಂದ ಅಧಿವೇಶನ ವೇಳೆ ಬಂದೋಬಸ್ತ್

ನಗರ ಪೊಲೀಸ್ ಆಯುಕ್ತ ಡಾ. ಎಂ ಬಿ ಬೋರಲಿಂಗಯ್ಯ ನೇತೃತ್ವದಲ್ಲಿ ಭದ್ರತೆ ಏರ್ಪಡಿಸಲಾಗಿದ್ದು, 6 ಎಸ್‌ಪಿ, 11 ಎಎಸ್‌ಪಿ 40 ಡಿವೈಎಸ್‌ಪಿ, 106 ಸಿಪಿಐ,  207 ಪಿಎಸ್‌ಐ, 234 ಮಹಿಳಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇದಲ್ಲದೇ ಸಿಎಆರ್ 16ತುಕಡಿ, ಕೆಎಸ್‌ಆರ್‌ಪಿ 35 ತುಕಡಿ, ಕ್ಯೂಆರ್‌ಟಿ 10 ತುಕಡಿ ನಿಯೋಜನೆ ಮಾಡಲಾಗಿದೆ. 500ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾ, 6 ಡ್ರೋಣ್ ಕ್ಯಾಮರಾಗಳ ಬಳಕೆ ಮಾಡಲಾಗ್ತಿದೆ.

ಒಂದು ಕಿಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ: 

ಸುವರ್ಣ ಸೌಧದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಸುವರ್ಣಸೌಧ ಬಳಿ ಸೆಂಟ್ರಲೈಸ್ಢ್ ಕಮಾಂಡ್ ಸೆಂಟರ್ ಸ್ಥಾಪನೆ ಮಾಡಲಾಗಿದೆ. ಮುಖ್ಯ ಗೆಟ್ ಬಳಿ ಓರ್ವ ಐಪಿಎಸ್ ಅಧಿಕಾರಿ ಭದ್ರತೆಗೆ ನಿಯೋಜಿಸಲಾಗಿದೆ. 

click me!