ಹರಳಯ್ಯ ಸಮಾಜದ ಸಾಧಕನಿಗೆ ಒಲಿದ ‘ಮೌತ್ ಆರ್ಟ್’/ ಕೊರೋನಾ ವೈರಸ್ ವಿರುದ್ಧ ವಿನೂತನವಾಗಿ ಜಾಗೃತಿ ಮೂಡಿಸಲು ಚಿಂತನೆ/ ವೈರಸ್ ನಿಯಂತ್ರಣಕ್ಕೆ ಶ್ರಮಿಸಿದ ಡಿಸಿ, ಎಸ್ಪಿ ಚಿತ್ರ ಬಾಯಿಯಿಂದ ರಚನೆ/ ಕಲಾವಿದರು, ಸಾಧಕರ ಚಿತ್ರಕ್ಕೆ ಹೊಸ ರೂಪ
ನಾಗರಾಜ ಎಸ್.ಬಡದಾಳ್
ದಾವಣಗೆರೆ (ಏ. 27) ಚಮ್ಮಾರಿಕೆ ಕುಲ ಕಸುಬನ್ನು ಶ್ರದ್ಧೆಯಿಂದ ಮಾಡುತ್ತಲೇ ಏಕವಲ್ಯನಂತೆ ಏಕಾಗ್ರತೆ, ಸತತ ಪರಿಶ್ರಮದಿಂದ ಒಲಿಸಿಕೊಂಡ ಮೌತ್ ಆರ್ಟ್ ಕಲೆ ಮೂಲಕ ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರಾ ತಟದ ಹರಿಹರದ ಬಿಎಸ್ಸಿ ಪದವೀಧರ ಯುವಕನೊಬ್ಬ ಕೊರೋನಾ ವೈರಸ್ ವಿರುದ್ಧ ವಿನೂತನ ಜಾಗೃತಿಗೆ ಮುಂದಾಗಿದ್ದಾನೆ.
ಹರಿಹರ ನಗರದ ಆಶ್ರಯ ಕಾಲನಿ ವಾಸಿ, ಗಾಂಧಿ ವೃತ್ತ ಹಾಗೂ ಗಿರಿಯಮ್ಮ ಕಾಲೇಜು ಸಮೀಪ ತಮ್ಮ ಕುಟುಂಬದ ಚಪ್ಪಲಿ ರಿಪೇರಿ ಅಂಗಡಿಗಳನ್ನು ನಡೆಸಿಕೊಂಡು ಹೋಗುತ್ತಿರುವ ಸಮಗಾರ ಹರಳಯ್ಯ ಸಮಾಜದ ಯುವ ಪ್ರತಿಭೆ ಜಯಕುಮಾರ ಸಾಣಿಕೆ ತನ್ನ ಕಲೆ, ಸಾಧನೆಯಿಂದಲೇ ಊರಿನ ಜನರ ಗಮನ ಸೆಳೆದಿದ್ದಾನೆ.
undefined
ದಾವಣಗೆರೆ ಯುವಕನ ಸಾಹಸಕ್ಕೊಂದು ಸಲಾಂ
ದಿವಂಗತ ಕುಬೇರಪ್ಪ ಸಾಣಿಕೆ, ನೀಲಮ್ಮ ದಂಪತಿಗಳ ಇಬ್ಬರು ಮಕ್ಕಳಲ್ಲಿ ಜಯಕುಮಾರ ಹಿರಿಯ ಮಗ, ಮಗಳು ಲಕ್ಷ್ಮಿ. ಕೆಲ ವರ್ಷದ ಹಿಂದೆ ಕುಬೇರಪ್ಪ ನಿಧನರಾಗಿದ್ದು, ಬಾಲ್ಯದಿಂದಲೂ ಕಲೆಯಲ್ಲಿ ಆಸಕ್ತಿ ಹೊಂದಿದ್ದ ಜಯಕುಮಾರ ಮಾತ್ರ ಕುಲ ಕಸುಬಿನ ಜೊತೆಗೆ ಕೈಯಲ್ಲಿ ಚಿತ್ರ ಬಿಡಿಸುವ, ಟ್ಯಾಟೂ ಹಾಕುವ ಜೊತೆಗೆ ರಂಗೋಲಿ ಕಲೆಯಲ್ಲೂ ಹೆಸರಾದ ಯುವ ಸಾಧಕ.
ಎರಡು ವರ್ಷಗಳ ಹಿಂದೆ ಯು ಟ್ಯೂಬ್‌ನಲ್ಲಿ ಮೌತ್ ಆರ್ಟ್ ಗಮನಿಸಿದ ಜಯಕುಮಾರ ಸಾಣಿಕೆ ತನ್ನ ಕಲಾಸಕ್ತಿ, ಶ್ರದ್ಧೆಯಿಂದ ಮೌತ್ ಆರ್ಟ್ ಮೈಗೂಡಿಸಿಕೊಂಡ. ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್‌ಸಿ ಓದಿರುವ ಜಯಕುಮಾರ ಓದಿನಷ್ಟೇ ಆಸಕ್ತಿಯನ್ನು ತಮ್ಮ ಕುಲ ಕಸುಬು, ತನ್ನ ನೆಚ್ಚಿನ ಹವ್ಯಾಸ ಚಿತ್ರಕಲೆ, ರಂಗೋಲಿ ಬಿಡಿಸುವ, ಮೌತ್ ಆರ್ಟ್‌ಗೆ ತೋರುತ್ತಾ ಬಂದಿದ್ದಾನೆ.
ಬಡಗು ತಿಟ್ಟಿನ ಚಂಡೆ ದಿಗ್ಗಜ ಕೃಷ್ಣಯಾಜಿ ಇನ್ನಿಲ್ಲ
ತಂದೆ ಅಗಲಿತ ನಂತರ ತಾಯಿಗೆ ಜೊತೆಯಾಗಿ ಚಪ್ಪಲಿ ರಿಪೇರಿ ಅಂಗಡಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನಿತ್ಯವೂ ಅಲ್ಲಿ 300-350ರೂ. ದುಡಿಯುವ ಜಯಕುಮಾರಗೆ ಕಲೆ ಮಾತ್ರ ಎಂದಿಗೂ ಕೈಬಿಟ್ಟಿಲ್ಲ. ಟ್ರಯಲ್ ಅಂಡ್ ಎರರ್ ಎಂಬಂತೆ ಜಯಕುಮಾರನ ಕಲೆ ಮೈಗೂಡಿಸಿಕೊಂಡ. ಈತನ ಕೈಯಲ್ಲಿ ಶರಣ ಹರಳಯ್ಯ ದಂಪತಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್
.ಅಂಬೇಡ್ಕರ್, ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕವಿ ಡಾ.ಕುವೆಂಪು, ವರನಟ ಡಾ.ರಾಜಕುಮಾರ, ಪುನೀತ್ ರಾಜ್ ಕುಮಾರ್, ಉಪೇಂದ್ರ, ಕಿಚ್ಚ ಸುದೀಪ್, ಧೃವ ಸರ್ಜಾ, ಆನಂದ ಗುರೂಜಿ ಹೀಗೆ ಅನೇಕ ಸಾಧಕರು, ಕಲಾವಿದರು, ಸಾಹಿತಿಗಳ ಚಿತ್ರ ಜಯಕುಮಾರನ ಕೈಯಲ್ಲಿ ಅರಳಿವೆ.
ಚಿತ್ರನಟ ಪುನೀತ ರಾಜ್ಕುಮಾರ್ ನಿವಾಸಕ್ಕೆ ತೆರಳಿ ತಾನು ಬಿಡಿಸಿದ್ದ ಪುನೀತ್ ಚಿತ್ರವನ್ನು, ಹರಿಹರಕ್ಕೆ ಕಾರ್ಯಕ್ರಮಕ್ಕೆ ಬಂದಿದ್ದ ನಟ ಉಪೇಂದ್ರ ಚಿತ್ರವನ್ನು ಕೊಟ್ಟಾಗ ಜಯಕುಮಾರನ ಕಲೆಗೆ ಇಬ್ಬರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಮಾಜಿ ಶಾಸಕ ಬಿ.ಪಿ.ಹರೀಶಗೌಡ ಚಿತ್ರವನ್ನೂ ಜಯಕುಮಾರ ಬಿಡಿಸಿ, ಗಮನ ಸೆಳೆಸಿದ್ದಾನೆ. ಕೈಯಿಂದ ಚಿತ್ರ ಬಿಡಿಸುವ ಬದಲು ಹೊಸದಾಗಿ ಏನಾದರೂ ಸಾಧನೆ ಮಾಡುವ ಹಂಬಲ ಜಯಕುಮಾರಗೆ ಇತ್ತು.
ಜಾತ್ರೆ, ಹಬ್ಬಗಳ ಸದ್ದಿಲ್ಲ, ಆನ್ ಲೈನ್ ಮಹಾ ಪರ್ವ ಇದೆಯಲ್ಲ
ಅದರಂತೆ ಯು ಟ್ಯೂಬ್‌ನಲ್ಲಿ ಮೌತ್ ಆರ್ಟ್ ಗಮನಿಸಿದ ಜಯಕುಮಾರ ಸಾಣಿಕೆ ನೋಡ ನೋಡುತ್ತಲೇ ತನ್ನ ಬಾಯಿಂದಲೇ ಅದ್ಭುತ ಚಿತ್ರ ರಚನೆ ಮಾಡ ತೊಡಗಿದೆ. ಇಡೀ ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸಲು ಜಿಲ್ಲೆಯಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿರುವ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಚಿತ್ರವನ್ನು 2 ತಾಸಿನಲ್ಲಿ ಬಿಡಿಸಿ, ಗಮನ ಸೆಳೆದಿದ್ದಾರೆ.
ಸದ್ಯಕ್ಕೆ ಕೊರೋನಾ ವೈರಸ್ ಬಗ್ಗೆ ಮೌತ್ ಆರ್ಟ್ ಮೂಲಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಯಕುಮಾರ ಯೋಜನೆ ರೂಪಿಸಿದ್ದಾನೆ. ಇನ್ನು 2-3 ದಿನಗಳಲ್ಲೇ ಇಂತಹದ್ದೊಂದು ವಿಭಿನ್ನ ಜಾಗೃತಿ ಕಾರ್ಯ ಕೈಗೊಳ್ಳಲಿದ್ದೇನೆ. ಡಿಸಿ ಮಹಾಂತೇಶ ಜಿ.ಬೀಳಗಿ, ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ ಇಡೀ ಅಧಿಕಾರಿ, ಸಿಬ್ಬಂದಿ, ಆಶಾ-ಅಂಗನವಾಡಿ ನೌಕರರ ಪರಿ ಶ್ರಮ ದೊಡ್ಡದು. ಈ ಎಲ್ಲರಿಗೂ ಜನರ ಪರವಾಗಿ ಕೃತಜ್ಞತೆ ಸಲ್ಲಿಸುವೆ. ಅಲ್ಲದೇ, ವೈರಸ್ ವಿರುದ್ಧ ವಿನೂತನವಾಗಿ ಜಾಗೃತಿ ಮೂಡಿಸುವೆ ಎಂದು ಜಯಕುಮಾರ ಹೇಳುತ್ತಾರೆ.
ಕರ್ನಾಟಕದಲ್ಲಾಗಲೀ, ದೇಶದಲ್ಲಾಗಲೀ ಸದ್ಯಕ್ಕೆ ಮೌತ್ ಆರ್ಟ್ ಸಾಧಕರ ಸಂಖ್ಯೆ ಅಪರೂಪ. ಅದರಲ್ಲೂ ಏಕಲವ್ಯನಂತೆ ಯಾವುದೇ ಗುರುವಿನ ಮಾರ್ಗದರ್ಶನ, ನೆರವಿಲ್ಲದೇ, ಯಾವುದೇ ಕೋರ್ಸ್ ಸಹ ಮಾಡದೇ ಇಂತಹದ್ದೊಂದು ಕಲೆಯನ್ನು ರೂಢಿಸಿಕೊಂಡ ಜಯಕುಮಾರ ಸಾಣಿಕೆಗೆ ಪ್ರೋತ್ಸಾಹದ ಅಗತ್ಯವೂ ಇದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಜಯಕುಮಾರ ಸಾಣಿಕೆ(ಮೊ; 9844428807) ಸಂಪರ್ಕಿಸಬಹುದು.