ವಿಜಯಪುರ ಜನತೆಗೆ ಕೊಂಚ ರಿಲೀಫ್‌: ಕೊರೋನಾದಿಂದ ಗುಣಮುಖ, 3 ಮಕ್ಕಳು ಸೇರಿ ಐವರು ಡಿಸ್ಚಾರ್ಜ್‌

Suvarna News   | Asianet News
Published : Apr 27, 2020, 02:40 PM IST
ವಿಜಯಪುರ ಜನತೆಗೆ ಕೊಂಚ ರಿಲೀಫ್‌: ಕೊರೋನಾದಿಂದ ಗುಣಮುಖ, 3 ಮಕ್ಕಳು ಸೇರಿ ಐವರು ಡಿಸ್ಚಾರ್ಜ್‌

ಸಾರಾಂಶ

ವಿಜಯಪುರ ಜಿಲ್ಲಾಸ್ಪತ್ರೆಯಿಂದ ಐವರು ಕೊರೊನಾ ಸೋಂಕಿತರು ಬಿಡುಗಡೆ| ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆ| ಭಾನುವಾರ ಕೂಡ ವೃದ್ಧೆ ಡಿಸ್ಚಾರ್ಜ್‌| ಒಟ್ಟು 41 ಪಾಸಿಟಿವ್ ಪ್ರಕರಣಗಳ ಪೈಕಿ 6 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ|

ವಿಜಯಪುರ(ಏ.27): ಮಹಾಮಾರಿ ಕೊರೋನಾ ವೈರಸ್‌ನಿಂದ ಗುಣಮುಖರಾಗಿ ಇಂದು(ಸೋಮವಾರ) ಮೂರು ಮಕ್ಕಳು ಸೇರಿ 5 ಜನ ಕೊರೋನಾ ಸೋಂಕಿತರು ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್ ಅವರು ಹೇಳಿದ್ದಾರೆ. 

ಈ ಸಂಬಂಧ ಮಾಹಿತಿ ನೀಡಿದ ಅವರು, 5 ಜನ ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ಇವರನ್ನ ನಗರದ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. 13 ಮತ್ತು 10 ವರ್ಷದ ಬಾಲಕರು, 12 ವರ್ಷದ ಬಾಲಕಿ, 29 ವರ್ಷದ ಯುವಕ, 20 ವರ್ಷದ ಯುವತಿ ಬಿಡುಗಡೆಯಾಗಿದ್ದಾರೆ. P.228, P.229, P.230, P.231, P.232 ಗುಣಮುಖರಾಗಿ ಬಿಡುಗಡೆಯಾದ ರೋಗಿಗಳಾಗಿದ್ದಾರೆ.

32 ಜನರಿಗೆ ಕೊರೋನಾ ಸೋಂಕು ಅಂಟಿಸಿದ್ದ ವೃದ್ಧೆ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್‌

ನಿನ್ನೆ(ಭಾನುವಾರ) ಕೂಡಾ P.221 ನಂಬರಿನ ವೃದ್ಧೆ ಕೂಡ ಕೊರೋನಾದಿಂದ ಸಂಪೂರ್ಣವಾಗಿ ಗುಣಮುಖವಾದ ಹಿನ್ನೆಲೆಯಲ್ಲಿ ಅವರನ್ನ ಬಿಡುಗಡೆ ಮಾಡಲಾಗಿತ್ತು. ಇಂದೂ ಕೂಡ ಒಟ್ಟು ಐದು ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಒಟ್ಟು 41 ಪಾಸಿಟಿವ್ ಪ್ರಕರಣಗಳ ಪೈಕಿ 6 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 
 

PREV
click me!

Recommended Stories

ತಾಳಿ ಕಟ್ಟುವ ಶುಭ ವೇಳೆ 'ಇವನು ನನ್ನ ಗಂಡ' ಎಂದ ಯುವತಿ; ಮಾಜಿ ಪ್ರೇಯಸಿ ರಾಕ್, ಮದುವೆ ಮನೇಲಿದ್ದವರು ಶಾಕ್!
ಸಿಲ್ಕ್ ಬೋರ್ಡ್- ಕೆ.ಆರ್ ಪುರ ಮೆಟ್ರೋ ನಿಲ್ದಾಣದವರೆಗೂ ಹೈಟೆಕ್ ಹೊರವರ್ತುಲ ರಸ್ತೆ ಅಭಿವೃದ್ಧಿಗಾಗಿ ₹307 ಕೋಟಿ ಅನುಮೋದನೆ