ಡಿಸೆಂಬರ್ ತಿಂಗಳು ಕಳೆದರೂ 121.64 ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಿರುವುದು ಇದು ದಾಖಲೆಯಾಗಿದೆ. ಕಳೆದ ಹಲವು ವರ್ಷಗಳಿಂದ ಡಿಸೆಂಬರ್ ತಿಂಗಳ ಅಂತ್ಯಕ್ಕೆ ಇಷ್ಟುಅಡಿ ನೀರು ಸಂಗ್ರಹವಾಗಿರಲಿಲ್ಲ. ಕಳೆದ 2006-07ನೇ ಸಾಲಿನಲ್ಲಿ 120 ಅಡಿ ನೀರು ಅಣೆಕಟ್ಟೆಯಲ್ಲಿ ಡಿಸೆಂಬರ್ ವರೆಗೆ ಸಂಗ್ರಹವಾಗಿದ್ದನ್ನು ಸ್ಮರಿಸಬಹುದು.
ಮಂಡ್ಯ(ಜ.02): ಜಿಲ್ಲೆಯ ರೈತರ ಜೀವನಾಡಿ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಡಿಸೆಂಬರ್ ಅಂತ್ಯಕ್ಕೆ (ಅಣೆಕಟ್ಟೆಭರ್ತಿಯಾಗಿ 100 ದಿನ) 121.64 ಅಡಿ ನೀರು ಸಂಗ್ರಹವಾಗಿರುವುದು ದಾಖಲೆಯಾಗಿದೆ.
ಡಿಸೆಂಬರ್ 31ರ ಸಂಜೆ 6 ಗಂಟೆ ವೇಳೆಗೆ ಜಲಾಶಯದಲ್ಲಿ 121.64 ಅಡಿ (45.159 ಟಿಎಂಸಿ) ಸಂಗ್ರಹವಾಗಿತ್ತು. ಇದರಲ್ಲಿ 36.780 ಟಿಎಂಸಿ ನೀರನ್ನು ಬಳಸಬಹುದಾಗಿದೆ. ಜಲಾಶಯಕ್ಕೆ 1843 ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಜಲಾಶಯದಿಂದ ನದಿಗೆ 1208 ಕ್ಯುಸೆಕ್ ಬಿಡಲಾಗುತ್ತಿತ್ತು. ಕಳೆದ 2018ರ ಡಿಸೆಂಬರ್ 31ಕ್ಕೆ ಅಂದರೆ ಇದೇ ದಿನ ಅಣೆಕಟ್ಟೆಯಲ್ಲಿ 114.60 ಅಡಿ ನೀರು ಸಂಗ್ರಹವಾಗಿತ್ತು.
ಹೊಸವರ್ಷ: ಬಂಡೀಪುರದಲ್ಲಿ ಸಫಾರಿಗೆ ಪ್ರವಾಸಿಗರ ದಂಡು...
ಡಿಸೆಂಬರ್ ತಿಂಗಳು ಕಳೆದರೂ 121.64 ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಿರುವುದು ಇದು ದಾಖಲೆಯಾಗಿದೆ. ಕಳೆದ ಹಲವು ವರ್ಷಗಳಿಂದ ಡಿಸೆಂಬರ್ ತಿಂಗಳ ಅಂತ್ಯಕ್ಕೆ ಇಷ್ಟುಅಡಿ ನೀರು ಸಂಗ್ರಹವಾಗಿರಲಿಲ್ಲ. ಕಳೆದ 2006-07ನೇ ಸಾಲಿನಲ್ಲಿ 120 ಅಡಿ ನೀರು ಅಣೆಕಟ್ಟೆಯಲ್ಲಿ ಡಿಸೆಂಬರ್ ವರೆಗೆ ಸಂಗ್ರಹವಾಗಿದ್ದನ್ನು ಸ್ಮರಿಸಬಹುದು.
ಈ ಬಾರಿ ತಡವಾಗಿ ಮುಂಗಾರು ಆರಂಭವಾಯಿತು. ಅಣೆಕಟ್ಟೆಭರ್ತಿಯಾಗುವ ಬಗ್ಗೆ ರೈತರಲ್ಲಿ ಆತಂಕ ಎದುರಾಗಿತ್ತು. ಆದರೆ, ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾದ ಕಾರಣ ಜಲಾಶಯಕ್ಕೆ ಸಾಕಷ್ಟುನೀರು ಹರಿದು ಬಂತು. ಅಣೆಕಟ್ಟೆಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿ ತಮಿಳುನಾಡಿಗೆ ಸಾಕಷ್ಟುನೀರು ಹರಿಯಿತು.
ಶೈಕ್ಷಣಿಕ ವರ್ಷದ ಕೊನೆ ಹಂತ ತಲುಪಿದ್ರೂ ಇನ್ನೂ ವಿತರಣೆಯಾಗಿಲ್ಲ ಶೂ, ಸಾಕ್ಸ್ ..!
ಆಗಸ್ಟ್ ತಿಂಗಳಲ್ಲಿ ಅಣೆಕಟ್ಟೆಭರ್ತಿಯಾಯಿತು. ಸಿಎಂ ಬಾಗಿನ ಅರ್ಪಿಸಿದ ನಂತರ ಹಂತ ಹಂತವಾಗಿ ಜಿಲ್ಲೆಯ ಎಲ್ಲಾ ನಾಲೆಗಳಿಗೆ ಹಲವು ತಿಂಗಳ ಕಾಲ ಸಾಕಷ್ಟುನೀರು ಹರಿಸಲಾಯಿತು. ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾದವು. ನಾಲೆಗಳ ಮೂಲಕ ರೈತರ ಜಮೀನುಗಳಿಗೆ ಸಮೃದ್ಧ ನೀರು ಹರಿದು ರೈತರು ಕಬ್ಬು, ಭತ್ತ, ರಾಗಿ ಸೇರಿದಂತೆ ಹಲವು ಬೆಳೆಗಳನ್ನು ಉತ್ತಮವಾಗಿ ಬೆಳೆದರು. ನೀರಿನ ಕೊರತೆ ಕಾಡಲಿಲ್ಲ.
ಪ್ರಸ್ತುತ ಕಬ್ಬು , ಭತ್ತ, ರಾಗಿ ಕಟಾವು ಆರಂಭವಾಗಿರುವುದರಿಂದ, ಬೆಳೆಗಳಿಗೆ ನೀರಿನ ಅವಶ್ಯಕತೆ ಕಡಿಮೆ ಇರುವ ಕಾರಣ ನಾಲೆಗಳಿಗೆ ಹರಿಯುತ್ತಿದ್ದ ನೀರನ್ನು ನಿಲ್ಲಿಸಲಾಗಿದೆ. ಅಣೆಕಟ್ಟೆಯಲ್ಲಿ ಸಾಕಷ್ಟುನೀರು ಸಂಗ್ರಹವಾಗಿದೆ. ತಮಿಳುನಾಡಿಗೆ ಈ ಹಿಂದೆ ಲಕ್ಷಾಂತರ ಕ್ಯುಸೆಕ್ ನೀರು ಹರಿದಿದೆ. ನೀರು ಬಿಡುವಂತೆ ಒತ್ತಡ ಹಾಕದಿದ್ದರೆ ಮುಂದಿನ ಬೇಸಿಗೆ ಬೆಳೆಗಳಿಗೆ ನೀರು ಹರಿಸುವ ಸಾಧ್ಯತೆಯೂ ಇದೆ.
ಹೊಸ ವರ್ಷದಂದೇ ಕೊಡಗಿನಲ್ಲಿ ಕತ್ತಲ ಕೊಡುಗೆ..!
ಜಿಲ್ಲೆಯ ಬಹುತೇಕ ಕೆರೆ ಕಟ್ಟೆಗಳು ಭರ್ತಿಯಾಗಿರುವುದರಿಂದ ಈ ಬಾರಿ ಬೇಸಿಗೆಯಲ್ಲಿ ಗ್ರಾಮಗಳಲ್ಲಿ ಕುಡಿಯುವ ನೀರು ಸಮಸ್ಯೆ ಉದ್ಬವಿಸುವ ಸಾಧ್ಯತೆಯೂ ಕಡಿಮೆ. ಬೆಂಗಳೂರು, ಮೈಸೂರು ದೊಡ್ಡನಗರಗಳಿಗೂ ನೀರಿನ ಸಮಸ್ಯೆ ಎದುರಾಗಲ್ಲ ಎಂದು ಹೇಳಲಾಗಿದೆ.