ಗ್ರಾಮೀಣ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಠ ನಡೆಸುತ್ತಿರುವ ಉಚಿತ ಸಾಮೂಹಿಕ ವಿವಾಹದಿಂದ ತುಂಬಾ ಅನುಕೂಲವಾಗಿದೆ ಎಂದು ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮೀಜಿ ಹೇಳಿದರು.
ಸರಗೂರು : ಗ್ರಾಮೀಣ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಠ ನಡೆಸುತ್ತಿರುವ ಉಚಿತ ಸಾಮೂಹಿಕ ವಿವಾಹದಿಂದ ತುಂಬಾ ಅನುಕೂಲವಾಗಿದೆ ಎಂದು ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಬಿಡಗಲು ಪಡುವಲು ವಿರಕ್ತ ಮಠದಲ್ಲಿ ಗುರುವಾರ ನಡೆದ ಶ್ರೀಕಾಳ ಒಡೆಯ ಗುರುಗಳ ಆರಾಧನಾ ಮಹೋತ್ಸವ ಮತ್ತು ಸಾಮೂಹಿಕ ಮಹೋತ್ಸವದಲ್ಲಿ ಅವರು ಮಾತನಾಡಿದರು.
undefined
ನಡೆ-ನುಡಿ ಪರಿ ಪೂರ್ಣವಾಗಿರಬೇಕು. ಕಾಯಕದಲ್ಲಿ ನಿರತರಾದರೆ ಆರೋಗ್ಯ ಪೂರ್ಣವಾಗುತ್ತದೆ. ಕ್ರಿಯಾ ಶೀಲರಾಗಿ ಸರಿಯಾದ ರೀತಿಯಲ್ಲಿ ನಡೆಯಬೇಕು. ಸಮಾಜದ ಮಧ್ಯದಲ್ಲಿ ಬೆಳೆಯುವಂತೆ ಮಕ್ಕಳನ್ನು ಬಿಡಬೇಕು. ಬಾಲ್ಯದಿಂದ ಮಕ್ಕಳನ್ನು ಸಂಸ್ಕಾರದಿಂದ ಬೆಳಸಬೇಕು. ಸಮಾಜದ ಬಗ್ಗೆ ಗೌರವದ ಮನೋಭಾವವನ್ನು ರೂಡಿಸಬೇಕು ಎಂದು ಹೇಳಿದರು.
ಕ್ಷೇತ್ರದಲ್ಲಿ ಸತ್ಯ, ಕಾಯಕನಿಷ್ಠೆ, ಪರೋಪಕಾರದ ಬಗ್ಗೆ ಹೇಳಲಾಗುತ್ತಿತ್ತು. ಅದರಂತೆ ನಡೆದುಕೊಂಡು ಬಂದು ಕಾಯಕನಿಷ್ಠೆಯಲ್ಲಿ ತೊಡಗಿರುವ ಮಠ ಮತ್ತಷ್ಟುಬೆಳೆಯಲಿ. ಸಾಮೂಹಿಕ ವಿವಾಹದಿಂದ ಆರ್ಥಿಕ ಮುಗ್ಗಟ್ಟು ಸುಧಾರಿಸಿಕೊಂಡು ಜೀವನ ನಿರ್ವಹಣೆಗೆ ತುಂಬಾ ಅನುಕೂಲವಾಗಲಿದೆ. ಹೀಗಾಗಿ ಎಲ್ಲರೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.
ಮಠದ ಮಹಾದೇವ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಎಲ್ಲರೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಬದುಕಬೇಕು. ಮಠಗಳಿಗೆ ಭಕ್ತರು ಇರಬೇಕು. ಭಕ್ತರು, ಗುರುಗಳ ಸಂಪರ್ಕ ಉತ್ತಮವಾಗಿದ್ದಾಗ ಮಾತ್ರ ಮಠಗಳು ಬೆಳೆವಣಿಗೆ ಹೊಂದಲು ಸಾಧ್ಯ ಎಂದರು.
ಹಂಚೀಪುರ ಮಠದ ಕಿರಿಯ ತೋಂಟದಾರ್ಯ ಸ್ವಾಮೀಜಿ ಮಾತನಾಡಿದರು. ದೇವನೂರು ಗುರುಮಲ್ಲೇಶ್ವರ ದಾಸೋಹ ಮಠದ ಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ದಡದಹಳ್ಳಿ ಮಠದ ಷಡಕ್ಷರ ಸ್ವಾಮೀಜಿ, ಹಂಚಿಪುರ ಮಠದ ಚನ್ನಬಸವ ಸ್ವಾಮೀಜಿ ಮಾದಾಪುರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಪುರಮಠದ ಚಂದ್ರಶೇಖರ ಸ್ವಾಮೀಜಿ, ಬೀಚನಹಳ್ಳಿಪುರ ಮಠದ ನಾಗೇಂದ್ರ ಸ್ವಾಮೀಜಿ, ಜಕ್ಕಹಳ್ಳಿ ಮಠದ ನಂದೀಶ ಸ್ವಾಮೀಜಿ, ಮಾಜಿ ಶಾಸಕ ಚಿಕ್ಕಣ್ಣ, ಬಿಜೆಪಿ ಮುಖಂಡರಾದ ಅಪ್ಪಣ್ಣ, ಎಚ್.ವಿ. ಕೃಷ್ಣಸ್ವಾಮಿ, ಪಪಂ ಅಧ್ಯಕ್ಷೆ ರಾಧಿಕಾ, ಉಪಾಧ್ಯಕ್ಷ ವಿನಯ್, ಸದಸ್ಯರಾದ ಚಲುವಕೃಷ್ಣ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಡಿ.ಜಿ. ಶಿವರಾಜು, ಮೊತ್ತ ಬಸವರಾಜು, ನಾಗಮ್ಮ ಚಿಕ್ಕಮಾದು ಇದ್ದರು.
ಇದಕ್ಕೂ ಮುನ್ನ ಶ್ರೀ ಕಾಳಒಡೆಯ ಗುರುಗಳ ಗದ್ದುಗೆ ಹಾಗೂ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯ ನಡೆಸಿ ಪ್ರಸಾದ ವಿನಿಯೋಗ ಮಾಡಲಾಯಿತು.
ಮತ್ತೆ ವಿವಾಹವಾದ ದಂಪತಿ
ತಿರುವನಂತಪುರ : ಷರಿಯಾ ಕಾನೂನು ಪ್ರಕಾರ ವಿವಾಹವಾಗಿದ್ದ ವಕೀಲ ಹಾಗೂ ನಟ ಸಿ. ಶುಕ್ಕೂರ್ ಮತ್ತು ಅವರ ಪತ್ನಿ ಶೀನಾ ಅವರು ವಿಶೇಷ ವಿವಾಹ ಕಾಯ್ದೆಯಡಿ ಮತ್ತೆ ಮದುವೆಯಾಗಿದ್ದಾರೆ. ಕೇರಳದ ಪ್ರತಿಷ್ಠಿತ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಮಾಜಿ ಪ್ರೊ ವೈಸ್ ಚಾನ್ಸೆಲರ್ ಆಗಿದ್ದ ಶೀನಾ ಅವರನ್ನು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಸಬ್ - ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದಾರೆ. 29 ವರ್ಷಗಳ ಮುನ್ನ ಇವರ ಮದುವೆಯಾಗಿದ್ದು, ಈಗ ಮತ್ತೆ ಅವರನ್ನೇ ಮದುವೆಯಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧಕ್ಕೆ ಕಾರಣವಾಗಿದೆ. ಇನ್ನು, ದಂಪತಿಯ ಮರು ಮದುವೆಯಾಗಿರುವ ಉದ್ದೇಶದ ಕಾರಣವೂ ಟೀಕೆಗೆ ಗುರಿಯಾಗುತ್ತಿದೆ.
ಹಾಗಾದ್ರೆ, ಈ ಮರು ಮದುವೆಯ (Marriage) ಕಾರಣವೇನು ಅಂತೀರಾ, ತಮ್ಮ ಹೆಣ್ಣು ಮಕ್ಕಳಿಗೆ (Daughter) ಪೂರ್ಣ ಆಸ್ತಿಯನ್ನು ವರ್ಗಾಯಿಸಲು (Inheritance of Property). ಹೌದು, ಷರಿಯಾ ಮುಸ್ಲಿಂ ಕಾನೂನಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ವರ್ಗಾಯಿಸಲು ಅನುಮತಿ ಇಲ್ಲ. ಈ ಹಿನ್ನೆಲೆ, ತಮ್ಮ ಮಗಳ 'ಆರ್ಥಿಕ ಭದ್ರತೆ'ಯನ್ನು ಖಚಿತಪಡಿಸಿಕೊಳ್ಳಲು ಅವರು ಮರುಮದುವೆಯಾಗಿದ್ದು, ಅವರ ಮೂವರು ಹೆಣ್ಣುಮಕ್ಕಳು ಕೂಡ ಈ ಮರು ಮದುವೆಯಲ್ಲಿ ಪಾಲ್ಗೊಂಡಿದ್ದರು.