ದಲಿತರನ್ನು ದಲಿತರ ವಿರುದ್ಧವೇ ಎತ್ತಿಕಟ್ಟುವ ಕೆಲಸ ಆಗುತ್ತಿದೆ

Published : Mar 10, 2023, 04:55 AM IST
 ದಲಿತರನ್ನು ದಲಿತರ ವಿರುದ್ಧವೇ ಎತ್ತಿಕಟ್ಟುವ ಕೆಲಸ ಆಗುತ್ತಿದೆ

ಸಾರಾಂಶ

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ದಲಿತರನ್ನು ದಲಿತರ ವಿರುದ್ಧವೇ ಎತ್ತಿಕಟ್ಟುವ ಕೆಲಸ ಆಗುತ್ತಿದೆ ಎಂದು ದಲಿತ ವೆಲ್‌ಫೇರ್‌ ಟ್ರಸ್ಟ್‌ ಅಧ್ಯಕ್ಷ ಶಾಂತರಾಜು ಆರೋಪಿಸಿದರು.

  ಮೈಸೂರು :  ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ದಲಿತರನ್ನು ದಲಿತರ ವಿರುದ್ಧವೇ ಎತ್ತಿಕಟ್ಟುವ ಕೆಲಸ ಆಗುತ್ತಿದೆ ಎಂದು ದಲಿತ ವೆಲ್‌ಫೇರ್‌ ಟ್ರಸ್ಟ್‌ ಅಧ್ಯಕ್ಷ ಶಾಂತರಾಜು ಆರೋಪಿಸಿದರು.

ಇದೇ ರೀತಿ ಕೋಲಾರದ ದಲಿತಪರ ಹೋರಾಟಗಾರ ಸುಂದರ್‌ ಅವರ ವಿರುದ್ಧ ಅಲ್ಲಿನ ದಲಿತ ಸಂಸದರನ್ನು ಎತ್ತಿಕಟ್ಟಿಸುಂದರ್‌ ಬಂಧನ ಮಾಡಿಸಲಾಗಿತ್ತು. ಠಾಣೆಯಲ್ಲಿ ಆತ ಆತ್ಮಹತ್ಯೆಗೆ ಯತ್ನಿಸಿದ ವೇಳೆ ರಕ್ಷಿಸಿದ ಪೊಲೀಸರು ಆತನನ್ನು ಆಸ್ಪತ್ರೆಗೆ ಸೇರಿಸಿದ ಕಾರಣ ಬದುಕುಳಿದಿದ್ದಾನೆ. ಈತನ ವಿರುದ್ಧ ಯಾವುದೇ ಪ್ರಕರಣವಿಲ್ಲ. ಆದರೂ ಈತನ ದಲಿತಪರ ಹೋರಾಟ ಸಹಿಸಲಾಗದೇ ಸಂಸದ ಆತನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಬಿಜೆಪಿ ಸಂಸದ ಹಾಗೂ ಸುಂದರ್‌ ದಲಿತರೇ ಆಗಿದ್ದರೂ ದಲಿತಪರ ಹೋರಾಟಗಾರರ ವಿರುದ್ಧವೇ ಪಕ್ಷ ಅವರನ್ನು ಎತ್ತಿಕಟ್ಟುವ ಕೆಲಸ ಮಾಡಿದೆ. ಇದೇ ರೀತಿ ರಾಜ್ಯದ ಇತರೆಡೆಯೂ ಬಿಜೆಪಿಯವರು ದಲಿತರನ್ನು ದಲಿತರ ವಿರುದ್ಧವೇ ಎತ್ತಿಕಟ್ಟುತ್ತಿರುವುದು ಬೇಸರದ ಸಂಗತಿ. ದಲಿತರ ದೇಶಪ್ರೇಮ ಪ್ರಶ್ನಿಸುವಂತಿಲ್ಲ. ಆದರೂ ಈ ದೇಶದಲ್ಲಿ ದಲಿತರು ಶೋಷಣೆಗೆ ಒಳಗಾಗುತ್ತಿರುವುದು ಆತಂಕ ಉಂಟು ಮಾಡುತ್ತಿದೆ. ಹೀಗಾಗಿ ದಲಿತ ಸಮುದಾಯದವರು ಬಿಜೆಪಿಗೆ ಈ ಬಾರಿಯ ಚುನಾವಣೆ ವೇಳೆ ಮತ ಹಾಕಬಾರದು ಎಂದು ಅವರು ಮನವಿ ಮಾಡಿದರು.

ಟ್ರಸ್ಟ್‌ನ ಪದಾಧಿಕಾರಿಗಳಾದ ಚಿಕ್ಕಂದಾನಿ, ಶಿವಪ್ಪ, ಸಿದ್ದಸ್ವಾಮಿ ಇದ್ದರು.

BJP ಸುಳ್ಳಿನ ಕಾರ್ಖಾನನೆ

ಚನ್ನಮ್ಮನ ಕಿತ್ತೂರು (ಮಾ.03): ಪ್ರಧಾನಿ ನರೇಂದ್ರ ಮೋದಿ ನ ಕಾವೂಂಗಾ ಕಾನೆದೂಂಗಾ ಎಂದು ಹೇಳುತ್ತಾರೆ. ಆದರೆ, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಆಡಳಿತದ ಸರ್ಕಾರವನ್ನು ಏಕೆ ತಿನ್ನಲು ಬಿಟ್ಟಿದ್ದಿರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ತಾಲೂಕಿನ ಹೊಸ ಕಾದರವಳ್ಳಿ(ಇಟಗಿ ಕ್ರಾಸ್‌) ಬಳಿ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸಾರ್ವತ್ರಿಕ ಚುನಾವಣೆಯ ನಿಮಿತ್ತ ಕಾಂಗ್ರೆಸ್‌ ಪಕ್ಷದಿಂದ ಬುಧವಾರ ಹಮ್ಮಿಕೊಂಡ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಸುಳ್ಳಿನ ಕಾರ್ಖಾನೆಗಳಿದ್ದಂತೆ ಎಂದು ಕಿಡಿಕಾರಿದರು.

ಮೇನು ಕಾರ್ಡ್‌ ತರಹ ಎಲ್ಲ ಕೆಲಸಗಳಿಗೂ ಬಿಜೆಪಿ ಸರ್ಕಾರ ದರ ನಿಗದಿ ಮಾಡಿದೆ. ಈ ಸರ್ಕಾರದ ಲಂಚಾವತರಾಕ್ಕೆ ವಿಧಾನಸೌಧದ ಎಲ್ಲ ಗೋಡೆಗಳು ಸಹ ಲಂಚ ಲಂಚ ಎನ್ನುತ್ತಿವೆ. ಈಗಾಗಲೇ ರಾಜ್ಯದ ಜನರಿಗೆ ಕಾಂಗ್ರೆಸ್‌ ಪಕ್ಷವೂ ತಲಾ ಒಬ್ಬರಿಗೆ 10 ಕೆಜಿ ಅಕ್ಕಿ, 200 ಯುನಿಟ್‌ ಉಚಿತ ವಿದ್ಯುತ್‌ ಹಾಗೂ ಕುಟುಂಬದ ಯಜಮಾನಿಗೆ ತಿಂಗಳಿಗೆ .2 ಸಾವಿರ ನೀಡುವ ಬಗ್ಗೆ ಭರವಸೆ ನೀಡಿದೆ. ಇದನ್ನು ತಪ್ಪಿದ್ದಲ್ಲಿ ಒಂದು ಸೆಕೆಂಡ್‌ ಸಹ ಕುರ್ಚಿ ಮೇಲೆ ಕುಳಿತುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.

ಪ್ರಧಾನಿ ಮೋದಿ ರೋಡ್‌ ಶೋಗೆ ಹಣ ಕೊಟ್ಟು ಜನ ಕರೆಸಿದ್ದಾರೆ: ಸಿದ್ದರಾಮಯ್ಯ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರು ಸ್ವ ಸಹಾಯ ಸಂಘದಲ್ಲಿ ಮಾಡಿರುವ ಸಾಲದಲ್ಲಿ ಔಟ್‌ ಸ್ಟ್ಯಾಂಡಿಗ್‌ ಸಾಲವನ್ನು ಸಹ ಕಾಂಗ್ರೆಸ್‌ ಮನ್ನಾ ಮಾಡಲಿದೆ ಎಂದು ತಿಳಿಸಿದರು. ಸಬ್‌ ಕಾ ಸಾತ್‌, ಸಬ್‌ ಕಾ ವಿಕಾಸ ಎಂದು ಮಾತನಾಡುವ ಬಿಜೆಪಿಗರು ದೇಶದಲ್ಲಿ ಯಾರನ್ನು ಜೊತೆಗೆ ಕೊಂಡೊಯ್ಯುತ್ತಿದ್ದಾರೆ?. ಹಾಗಿದ್ದರೇ ಇವರು ಕ್ರಿಶ್ಚಿಯನ್ಸ್‌ಗೆ ಪಕ್ಷ ಟಿಕೆಟ್‌ ನೀಡುತ್ತಾರೆಯೇ?. ದೇಶದಲ್ಲಿ 140 ಕೋಟಿ ಜನರನ್ನು ಜೊತೆಯಲ್ಲಿ ಕಾಂಗ್ರೆಸ್‌ ಕೊಂಡೊಯ್ಯುತ್ತಿದ್ದು ನೂರಕ್ಕೆ ನೂರರಷ್ಟುಈ ಭಾರಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ 2013 ರಲ್ಲಿ ನೀಡಿದ ಶೇ.95 ರಷ್ಟು ಎಲ್ಲ ಭರವಸೆಗಳನ್ನು ಈಡೇರಿಸಿದೆ. ಆದರೆ, ಬಿಜೆಪಿ 2018 ರಲ್ಲಿ 600 ಭರವಸೆಗಳನ್ನು ನೀಡಿ ಅದರಲ್ಲಿ ಕೇವಲ 50 ಬೇಡಿಕೆಗಳನ್ನು ಈಡೇರಿಸಿದ್ದಾರೆ. ಅಧಿಕಾರ ಕೊನೆಗೊಳ್ಳಲು ಇನ್ನೇನು 25 ದಿನಗಳ ಮಾತ್ರ ಬಾಕಿ ಇದ್ದು ಇನ್ನೂಳಿದ 550 ಭರವಸೆಗಳನ್ನು ಈ ಸರ್ಕಾರ ಈಡೇರಿಸಲು ಸಾಧ್ಯವೆ? ಈ ರೀತಿ ಸುಳ್ಳು ಹೇಳುವ ಬಿಜೆಪಿ ಸರ್ಕಾರಕ್ಕೆ ಜನ ಬೆಸತ್ತಿದ್ದು, ಈ ಚುನಾವಣೆಯಲ್ಲಿ ಬಿಜೆಪಿಗರಿಗೆ ಮನೆಯ ದಾರಿಯನ್ನು ಮತದಾರರು ತೋರಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

PREV
Read more Articles on
click me!

Recommended Stories

ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!