ಸಭೆಯಲ್ಲಿ ಮಾಸ್ಕ್ ಹಾಕಿಕೊಂಡೇ ತಮ್ಮ ಪರಿಚಯ ಮಾಡಿಕೊಂಡ ಜಿಲ್ಲಾಧಿಕಾರಿ| ಸಮಯ ಇದ್ರೆ ಇರಿ, ಕೆಲಸ ಇದ್ರೆ ಹೋಗಿ ಎಂದ ಶಾಸಕ ಸಾ.ರಾ.ಮಹೇಶ್| ಪ್ರತಿಕ್ರಿಯೆ ಆಲಿಸಿ ಸಭೆಯಿಂದ ನಿರ್ಗಮಿಸಿದ ಸಿಂಧೂರಿ|
ಮೈಸೂರು(ಜ.13): ಜೆಡಿಎಸ್ ಶಾಸಕ, ಮಾಜಿ ಸಚಿವ ಸಾ.ರಾ.ಮಹೇಶ್ ಮತ್ತು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವೆ ಮಾಸ್ಕ್ ವಿಚಾರಕ್ಕೆ ಮಾತಿಗೆ ಮಾತು ಬೆಳೆದ ಘಟನೆ ಮೈಸೂರಿನಲ್ಲಿ ನಡೆದಿದೆ.
ಕರ್ನಾಟಕ ವಿಧಾನಸಭಾ ಕಾಗದ ಪತ್ರಗಳ ಸಮಿತಿ ಅಧ್ಯಕ್ಷರಾದ ಶಾಸಕ ಸಾ.ರಾ.ಮಹೇಶ್ ನೇತೃತ್ವದಲ್ಲಿ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಿಗದಿಯಾಗಿತ್ತು. ಈ ಸಭೆಗೆ ಡಿಸಿ ರೋಹಿಣಿ ಸಿಂಧೂರಿ ಆಗಮಿಸಿ, ವೇದಿಕೆಯಲ್ಲಿ ಆಸನದ ವ್ಯವಸ್ಥೆ ಇರದಿದ್ದ ಹಿನ್ನೆಲೆ ವೇದಿಕೆ ಮುಂಭಾಗದ ಕುರ್ಚಿಯಲ್ಲಿ ಕುಳಿತರು.
ಕಾಂಗ್ರೆಸ್‌ಗೆ 3 ಶಾಪಗಳು ಇವೆಯಂತೆ: ಯಾವುವು..?
ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮಾಸ್ಕ್ ಹಾಕಿಕೊಂಡೇ ತಮ್ಮ ಪರಿಚಯ ಮಾಡಿಕೊಂಡರು. ಈ ವೇಳೆ ಮಧ್ಯಪ್ರವೇಶಿಸಿದ ಸಾ.ರಾ.ಮಹೇಶ್, ನಿಮ್ಮ ಮಾತು ಕೇಳುತ್ತಿಲ್ಲ, ಮಾಸ್ಕ್ ತೆಗೆದು ಮಾತನಾಡಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ಅವರು, ಮಾಸ್ಕ್ ತೆಗೆಯವುದಿಲ್ಲ. ಮಾಸ್ಕ್ ತೆಗೆದು ಮಾತನಾಡಬಾರದು. ಈ ಸಭೆಯಲ್ಲಿ ನನಗೆ ಸಂಬಂಧಿಸಿದ ವಿಷಯಗಳ ಚರ್ಚೆ ಇಲ್ಲ. ನೀವು ಸಮ್ಮತಿಸಿದರೆ ಸಭೆಯಿಂದ ಹೋಗುತ್ತೇನೆ ಎಂದರು. ಇದಕ್ಕೆ ಉತ್ತರಿಸಿದ ಸಾರಾ ಅವರು, ಸಮಯ ಇದ್ದರೆ ಇರಿ, ಕೆಲಸ ಇದ್ದರೆ ಹೋಗಿ ಎಂದರು. ತಕ್ಷಣವೇ ಡಿಸಿ ಸಭೆಯಿಂದ ಹೊರಹೋದರು.